ಬ್ರೇಕಿಂಗ್ ನ್ಯೂಸ್
08-06-21 11:25 am Mangalore Correspondent ಕರಾವಳಿ
Photo credits : File
ಮಂಗಳೂರು, ಜೂನ್ 8: 40ಕ್ಕೂ ಹೆಚ್ಚು ದಿನಗಳ ಸುದೀರ್ಘ ಲಾಕ್ಡೌನ್ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಸೋಂಕಿನ ಹರಡುವಿಕೆಯನ್ನು ಕಡಿತಗೊಳಿಸುವುದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮುಂದಾಗಿದ್ದಾರೆ. 50ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳಿರುವ ಗ್ರಾಮ ಪಂಚಾಯತ್ ಏರಿಯಾಗಳಲ್ಲಿ ಹೆಚ್ಚುವರಿ ನಿರ್ಬಂಧ ವಿಧಿಸುವುದರ ಜೊತೆಗೆ ಆ ಭಾಗದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ನಿಷೇಧ ವಿಧಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಈ ಬಗ್ಗೆ ಮಾಹಿತಿ ನೀಡಿದ ಅವರು, ಲಾಕ್ಡೌನ್ ನಿರ್ಬಂಧ ಆದೇಶಕ್ಕೆ ಒಂದೂವರೆ ತಿಂಗಳಾದ್ರೂ ಸೋಂಕಿನ ಸಂಖ್ಯೆ ಕಡಿಮೆಯಾಗಿಲ್ಲ. ಈಗಲೂ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 20ರಷ್ಟಿದ್ದು ಇದನ್ನು ಶೇಕಡಾ 5ಕ್ಕಿಳಿಸದ ಹೊರತು ಲಾಕ್ಡೌನ್ ತೆರವು ಮಾಡಲು ಸಾಧ್ಯವಿಲ್ಲ. ಜನರು ಅನಗತ್ಯವಾಗಿ ಓಡಾಡುವುದರಿಂದಲೇ ಈ ರೀತಿಯ ಬೆಳವಣಿಗೆ ಆಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಸೋಂಕು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇದಕ್ಕಾಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿನ ಚೈನ್ ಕಡಿತಗೊಳಿಸುವುದಕ್ಕಾಗಿ ಕಾರ್ಯಪಡೆ ರಚಿಸಲಾಗುತ್ತಿದೆ. ಅನಗತ್ಯವಾಗಿ ಓಡಾಡುವ ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳ ಕಾರ್ಯಪಡೆ ತಂಡ ಬೀದಿಗೆ ಇಳಿಯಲಿದೆ ಎಂದು ಹೇಳಿದ್ದಾರೆ.


ಗ್ರಾಮಾಂತರ ಪ್ರದೇಶಗಳಲ್ಲಿ ಅಗತ್ಯ ಸಾಮಗ್ರಿಗಳ ಅಂಗಡಿಗಳು ಸಮೀಪದಲ್ಲೇ ಇದ್ದರೂ, ಜನರು ವಿನಾಕಾರಣ ಓಡಾಡುವುದು ಕಂಡುಬಂದಿದೆ. ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ಸಾಮಗ್ರಿ ಖರೀದಿಗಾಗಿ ಮಾತ್ರ ವಿನಾಯ್ತಿ ನೀಡಿರುವುದು. ಅಗತ್ಯ ಸಾಮಗ್ರಿ ಖರೀದಿ ಹೊರತಾಗಿ ಜನರು ಮನೆಯಿಂದ ಹೊರಗೆ ಬರಲೇಬಾರದು. ಒಂದ್ವೇಳೆ, ಅನಗತ್ಯ ಓಡಾಡುವುದು ಕಂಡುಬಂದರೆ ಪೊಲೀಸರು ಶಿಸ್ತು ಕ್ರಮ ಜರುಗಿಸಲಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಜಿಲ್ಲಾಡಳಿತದಿಂದ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದರ ಜೊತೆಗೆ, ಯಾವೆಲ್ಲಾ ಪಂಚಾಯತ್ ಏರಿಯಾಗಳಲ್ಲಿ 50ಕ್ಕಿಂತ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೋ ಅಲ್ಲಿನ ಗ್ರಾಮಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸದ್ಯಕ್ಕೆ 7550 ಮಂದಿ ಸಕ್ರಿಯ ಸೋಂಕಿತರಿದ್ದು, 1319 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇದೇ ವೇಳೆ, 6303 ಮಂದಿ ಹೋಮ್ ಐಸೋಲೇಶನಲ್ಲಿದ್ದರೆ, 428 ಮಂದಿ ಕೋವಿಡ್ ಕೇರ್ ಸೆಂಟರಲ್ಲಿ ನಿಗಾದಲ್ಲಿದ್ದಾರೆ. ಇದರ ನಡುವೆಯೂ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದ್ದು, ರಿಕವರಿ ರೇಟ್ 91 ಶೇಕಡಾ ಇದೆ. ಸೋಂಕಿನಿಂದ ಸಾವಿಗೀಡಾಗುವ ಶೇಕಡವಾರು ದರ 1.19 ಇರುತ್ತದೆ. ಈವರೆಗೆ ಕೊರೊನಾ ಸೋಂಕಿನಿಂದಾಗಿ 950 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 210 ಮಂದಿ ಎರಡನೇ ಅಲೆಗೆ ಸಾವು ಕಂಡಿದ್ದಾರೆ.

ಜಿಲ್ಲೆಯಲ್ಲಿ 120 ಕಂಟೈನ್ಮೆಂಟ್ ಝೋನ್
ಇದೇ ವೇಳೆ, 50 ಮಂದಿ ಬ್ಲಾಕ್ ಫಂಗಸ್ ಸೋಂಕಿತರು ಮಂಗಳೂರಿನಲ್ಲಿದ್ದು, ಈ ಪೈಕಿ 11 ಮಂದಿ ಜಿಲ್ಲೆಯವರಾಗಿದ್ದು, ಉಳಿದ 39 ಮಂದಿ ಇತರೇ ಜಿಲ್ಲೆಯವರಿದ್ದಾರೆ. ಆರು ಮಂದಿ ಬ್ಲಾಕ್ ಫಂಗಸ್ ಕಾರಣದಿಂದ ಸಾವು ಕಂಡಿದ್ದಾರೆ. ಇದೇ ವೇಳೆ, ದ.ಕ. ಜಿಲ್ಲೆಯಾದ್ಯಂತ 120 ಕಡೆ ಕಂಟೈನ್ಮೆಂಟ್ ಝೋನ್ ಮಾಡಲಾಗಿದ್ದು ಪ್ರತಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನೂ ಮಾಡಲಾಗಿದೆ. ಇದೇ ವೇಳೆ, 16 ಕಡೆ ಆಕ್ಸಿಜನ್ ಉತ್ಪಾದನಾ ಘಟಕಗಳನ್ನೂ ರಚಿಸಲಾಗಿದ್ದು, ಆಮ್ಲಜನಕದ ಕೊರೆತಯನೆನ್ನು ನಿವಾರಿಸಲಾಗಿದೆ. ಮಕ್ಕಳಿಗೆ ಕಂಡುಬರುವ ಬಹು ಅಂಗಾಂಗ ವೈಫಲ್ಯದ ಸಿಂಡ್ರೋಮ್ ಆರು ಪ್ರಕರಣ ಪತ್ತೆಯಾಗಿದ್ದು, ಇವೆಲ್ಲವೂ ಚಿಕಿತ್ಸೆಯಿಂದ ನಿವಾರಣೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಹನ್ನೊಂದು ಗ್ರಾಪಂಗಳಲ್ಲಿ ಸೀಲ್ ಡೌನ್
ಇದೇ ವೇಳೆ, ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚು ಪ್ರಕರಣಗಳಿರುವ 11 ಗ್ರಾಮ ಪಂಚಾಯತ್ ಗಳನ್ನು ಪಟ್ಟಿ ಮಾಡಲಾಗಿದ್ದು, ಈ ಗ್ರಾಮಗಳಲ್ಲಿ ವಿಶೇಷ ರೀತಿಯ ಲಾಕ್ಡೌನ್ ನಿರ್ಬಂಧ ಹೇರಲಾಗುವುದು. ಆ ಭಾಗದಲ್ಲಿ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶ ಇರುವುದಿಲ್ಲ. ಈಗಾಗ್ಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಿಗೆ ಸೂಚನೆ ಅನುಸಾರ ಮಾಡಲು ಮಾತ್ರ ಅವಕಾಶ ಇರುತ್ತದೆ. ಸೋಂಕಿತರ ಸಂಖ್ಯೆ ಕಡಿಮೆಯಾಗದಿದ್ದರೆ, ಈ ಗ್ರಾಮಗಳಲ್ಲಿ ಯಾವುದೇ ರೀತಿಯ ಕಾರ್ಯಕ್ರಮ ನಡೆಸುವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ರು ಜಿಲ್ಲಾಧಿಕಾರಿ.
ಇದೇ ವೇಳೆ, ಮಾತನಾಡಿದ ಕಮಿಷನರ್ ಶಶಿಕುಮಾರ್ ಈಗಾಗ್ಲೇ ಕಮಿಷನರೇಟ್ ವ್ಯಾಪ್ತಿಯಲ್ಲಿ 92 ಪೊಲೀಸ್ ಸಿಬಂದಿಗೆ ಸೋಂಕು ಬಂದಿದೆ. ಅದರಲ್ಲಿ 69 ಮಂದಿ ರಿಕವರಿ ಆಗಿದ್ದಾರೆ. 22 ಮಂದಿಗೆ ಸೋಂಕು ಸಕ್ರಿಯರಿದ್ದಾರೆ. ಯಾರುಕೂಡ ಜನರು ವಿನಾಕಾರಣ ಮನೆಯಿಂದ ಹೊರಗೆ ಬರದಂತೆ ವಿನಂತಿ ಮಾಡಿಕೊಳ್ಳುತ್ತೇವೆ. ಜನರ ಸಹಕಾರ ಇಲ್ಲದಿದ್ದರೆ ಲಾಕ್ಡೌನ್ ಹೇರರಿ ಪ್ರಯೋಜನ ಇರುವುದಿಲ್ಲ ಎಂದು ಹೇಳಿದರು.

ಜಿಲ್ಲೆಯ 9 ಗ್ರಾಮಗಳು ಸೋಂಕು ಮುಕ್ತ
15 ದಿನಗಳ ಕಾಲ ಯಾವುದೇ ಸೋಂಕು ಕಂಡುಬರದೇ ಇರುವ ಗ್ರಾಮಗಳನ್ನು ಕೋವಿಡ್ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗುವುದು. ಈಗಾಗ್ಲೇ 9 ಗ್ರಾಮಗಳನ್ನು ಈ ರೀತಿ ಘೋಷಣೆ ಮಾಡಿದ್ದೇವೆ. ಇದೇ ರೀತಿಯಲ್ಲಿ ಗ್ರಾಮ ಮಟ್ಟದಲ್ಲಿ ಪ್ರತಿ ಗ್ರಾಮಗಳನ್ನು ಸೋಂಕು ಮುಕ್ತವೆಂದು ಗ್ರಾಮವೆಂದು ಘೋಷಿಸಲು ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದು ದ.ಕ. ಜಿಪಂ ಸಿಇಓ ಕುಮಾರ್ ಹೇಳಿದ್ದಾರೆ.
Dakshina Kannada deputy commissioner Dr. Rajendra on Monday, June 7 stated that the positive cases in the district were on a rise and it was vital to bring down the number of infections.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm