ಬ್ರೇಕಿಂಗ್ ನ್ಯೂಸ್
09-06-21 08:47 pm Mangaluru Correspondent ಕರಾವಳಿ
ಮಂಗಳೂರು, ಜೂನ್ 9: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಈ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಬಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಅನ್ಯಧರ್ಮದ ಉದ್ದೇಶಗಳಿಗೆ ರವಾನೆಯಾಗುತ್ತಿರುವುದನ್ನು ತಡೆಹಿಡಿಯಲು ಸೂಚನೆ ನೀಡಿದ್ದಾಗಿ ಪ್ರಕಟಣೆ ನೀಡಲಾಗಿದೆ.
ಮಾಧ್ಯಮದ ಮೂಲಕ ಸಚಿವರು ಈ ಬಗ್ಗೆ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ನಮ್ಮ ಸರಕಾರ ಬರುವ ಮುಂಚೆ ಇಲಾಖೆಯ ಮೂಲಕ ಮಂಜೂರಾಗುತ್ತಿರುವ ತಸ್ತೀಕ್ ಹಣ ಅನ್ಯಧರ್ಮದ ಪ್ರಾರ್ಥನಾ ಮಂದಿರಗಳಿಗೆ ಕೂಡ ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಒದಗಿದ್ದು, ತಕ್ಷಣ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದು ಧರ್ಮವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ತಡೆಹಿಡಿಯಲು ಸೂಚಿಸಿದ್ದೇನೆ. ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾಯ ಇಲಾಖೆಯ ಜವಾಬ್ದಾರಿ ಹಾಗೂ ಆಯಾ ಇಲಾಖೆಯ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 27 ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದ್ದು, ಸುಮಾರು 133 ಕೋಟಿ ರೂಪಾಯಿ ಸರಕಾರ ವಾರ್ಷಿಕ ಅನುದಾನ ಹಂಚುತ್ತಿದೆ. ಈ ಪೈಕಿ ಸುಮಾರು 764 ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳು ಕೂಡ ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ತಸ್ತೀಕ್ ಪಡೆಯುತ್ತಿದ್ದು, ಮಂತ್ರಿಗಳ ಸೂಚನೆ ಮೇರೆಗೆ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Read: ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿಗಳಿಗೆ ತಸ್ತೀಕು ಭತ್ಯೆ ; ವಿಶ್ವ ಹಿಂದು ಪರಿಷತ್ ವಿರೋಧ
After VHP, Mangalore opposed granting of allowances to other religion Kota Srinivas Poojary Minister of Muzrai from Revenue Department of Karnataka has held the Covid pandemic relief amount to the imams of 41 mosques and madrasas of the district from the funds of Hindu Religious Endowment.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm