ಬ್ರೇಕಿಂಗ್ ನ್ಯೂಸ್
09-06-21 10:41 pm Mangaluru Correspondent ಕರಾವಳಿ
ಮಂಗಳೂರು, ಜೂನ್ 9: ಸುರತ್ಕಲ್ ಸಮೀಪದ ಸೂರಿಂಜೆ ಮತ್ತು ಕುತ್ತೆತ್ತೂರಿನಲ್ಲಿ ಭತ್ತದ ಗದ್ದೆಯಲ್ಲಿ ಬಿತ್ತನೆ ಮಾಡಿದ್ದ ಭತ್ತದ ಬೀಜಗಳು ಮೊಳಕೆ ಹಂತದಲ್ಲಿ ಸುಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು ಎಂಆರ್ ಪಿಎಲ್ ನಿಂದ ಹರಿದು ಬಂದ ಕೆಮಿಕಲ್ ಯುಕ್ತ ನೀರು ಇದಕ್ಕೆ ಕಾರಣ ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದಾರೆ.
ಬೊಳ್ಳಾರ ಗುತ್ತಿನ ಪ್ರಕಾಶ್ ಶೆಟ್ಟಿ ಎಂಬವರು ಕೃಷಿ ಇಲಾಖೆಯಿಂದ ಪಡೆದ ಭತ್ತವನ್ನು ಮೊಳಕೆ ಬರಿಸಿ ಬಿತ್ತನೆ ಮಾಡಿದ್ದರು. ಇನ್ನೋರ್ವ ರೈತ ತಾವೇ ಸಿದ್ಧಪಡಿಸಿದ ಭತ್ತವನ್ನು ಮೊಳಕೆ ಬರಿಸಿ ಗದ್ದೆಯಲ್ಲಿ ಬಿತ್ತಿದ್ದರು. ಇಬ್ಬರು ರೈತರು ಬಿತ್ತಿದ ಬೀಜವೂ ಸುಟ್ಟು ಹೋಗಿದ್ದು ಕಪ್ಪಾಗಿ ಹೋಗಿದೆ.

ಎಂಆರ್ ಪಿಎಲ್ ಬಳಿಯ ಮೂಡುಪದವು ಸಮೀಪ ಒಸರುವ ತ್ಯಾಜ್ಯ ನೀರು ಕುತ್ತೆತ್ತೂರು ಮೂಲಕ ಹರಿದು ಸೂರಿಂಜೆಗೆ ಬರುತ್ತದೆ. ಇದರ ಪರಿಣಾಮ ಈ ಭಾಗದಲ್ಲಿ ಕೃಷಿಗೆ ತೊಂದರೆಯಾಗಿ ರೈತರು ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಈಗ ಸೂರಿಂಜೆಯ ರೈತರು ಮಾಡಿದ ಕೃಷಿ ಸುಟ್ಟು ಹೋಗಿದ್ದು ಹಾಳಾಗಿದೆ.
ಇತ್ತೀಚೆಗೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಳದ ಬಳಿ ನೀರಿನಲ್ಲಿ ತೈಲದ ಅಂಶ ಕಂಡುಬಂದಿದ್ದು, ಬಾವಿ, ಕೆರೆಯ ಮೀನುಗಳು ಸತ್ತಿದ್ದವು. ಇಲ್ಲಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆದರೆ ಅದರ ಫಲಿತಾಂಶ ಇನ್ನೂ ಜನತೆಗೆ ತಿಳಿದಿಲ್ಲ ಎಂಬ ಅಸಮಾಧಾನವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳಲ್ಲಿ ಕೇಳಿದರೆ ತಮಗೇನೂ ಗೊತ್ತಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಎಂಆರ್ ಪಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ಥಳೀಯ ಕೃಷಿಕರಿಗೆ ಹಾನಿಯಾಗುತ್ತಿರುವ ಬಗ್ಗೆ ಪಂಚಾಯತ್ ನಲ್ಲಿ ಹೇಳಿಕೊಂಡರೂ, ಕೈಗಾರಿಕೆಯ ಮಾಲಿನ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಪಂಚಾಯತ್ ಅಧಿಕಾರಿಗಳ ಈ ರೀತಿಯ ನಿರ್ಲಕ್ಷ್ಯದಿಂದಾಗಿಯೇ ಎಂಆರ್ ಪಿಎಲ್ ಸೊಕ್ಕು ತೋರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
MRPL Dump dirty wastewater Crops Burnt in Mangalore. The Pictures of this has gone viral on Social Media.
08-09-26 02:24 pm
HK News Staffer
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 03:50 pm
HK News Staffer
Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ...
08-09-26 09:50 am
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
08-09-26 02:26 pm
HK News Staffer
ಅಪಘಾತದಲ್ಲಿ ಗಾಯಗೊಂಡ ಚಿರತೆಯನ್ನು ರಕ್ಷಣೆ ಮಾಡಲು ಹೋ...
08-09-26 01:11 pm
ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ವಿ...
08-09-26 11:17 am
ಆಸ್ಪತ್ರೆ ಸಿಬ್ಬಂದಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌ...
07-09-26 08:56 pm
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm