ಬ್ರೇಕಿಂಗ್ ನ್ಯೂಸ್
10-06-21 01:22 pm Mangalore Correspondent ಕರಾವಳಿ
ಮಂಗಳೂರು, ಜೂನ್ 9: ಕೋವಿಡ್ ಎರಡನೇ ಅಲೆಯಲ್ಲಿ ದೇಶಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ಆಕ್ಸಿಜನ್. ಎಲ್ಲ ಕಡೆ ಆಮ್ಲಜನಕದ ಕೊರತೆ ಎದುರಾದಾಗ ಜಗತ್ತಿನ ನಾನಾ ರಾಷ್ಟ್ರಗಳಿಂದ ಭಾರತಕ್ಕೆ ಸಹಾಯ ಹರಿದುಬಂದಿತ್ತು. ಗಲ್ಫ್ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಪ್ರಮುಖವಾಗಿ ಅತಿ ಹೆಚ್ಚು ಆಕ್ಸಿಜನ್ ಕಂಟೇನರ್ ಮೂಲಕ ಬಂದಿತ್ತು. ಮಂಗಳೂರು ಬಂದರು, ವಿಮಾನ ನಿಲ್ದಾಣ ಮತ್ತು ರೈಲ್ವೇ ಇಲಾಖೆಯಿಂದಲೂ ಆಕ್ಸಿಜನ್ ಕಂಟೇನರ್ ಬಂದಿತ್ತು. ಆದರೆ, ಈ ರೀತಿ ಟನ್ ಗಟ್ಟಲೆ ತೂಕದ ಕಂಟೇನರ್ ಗಳನ್ನು ರಾಜ್ಯದಾದ್ಯಂತ ಸಾಗಿಸಿದ್ದು ಮಂಗಳೂರಿನ ಗಣೇಶ್ ಶಿಪ್ಪಿಂಗ್ ಸಂಸ್ಥೆ.
ನೌಕಾಪಡೆ ಮತ್ತು ವಾಯುಪಡೆ ವಿವಿಧ ದೇಶಗಳಿಂದ ಹಡಗು ಮತ್ತು ವಿಮಾನಗಳ ಮೂಲಕ ಆಯಾ ರಾಜ್ಯಗಳಿಗೆ ಆಕ್ಸಿಜನ್ ತಂದುಕೊಡುವ ಹೊಣೆ ಹೊತ್ತುಕೊಂಡಿತ್ತು. ಆದರೆ, ಆಕ್ಸಿಜನ್ ಕಂಟೇನರ್ ಗಳನ್ನು ವಿವಿಧ ದೇಶಗಳಿಂದ ಹೊತ್ತು ತಂದು ಏರ್ಪೋರ್ಟ್ ಮತ್ತು ಬಂದರಿಗೆ ತಲುಪಿಸುವುದು ಮಾತ್ರ ಅದರ ಹೊಣೆಯಾಗಿತ್ತು. ಈ ಬಗ್ಗೆ ಕೇಂದ್ರ ಸರಕಾರದ ಅಂಗಸಂಸ್ಥೆ ಇಂಡಿಯನ್ ಆಯಿಲ್ ಕಂಪನಿಗೆ ಪೂರೈಕೆ ಜಾಲದ ಗುತ್ತಿಗೆ ನೀಡಲಾಗಿತ್ತು. ಆದರೆ, ಇಂಡಿಯನ್ ಆಯಿಲ್ ಕಂಪನಿಯವರು ತಮ್ಮ ಅಧಿಕೃತ ಏಜನ್ಸಿಯಾದ ಗಣೇಶ್ ಶಿಪ್ಪಿಂಗ್ ಸಂಸ್ಥೆಗೆ ಇದನ್ನು ವಹಿಸಿದ್ದು, ಕಳೆದ ಒಂದೂವರೆ ತಿಂಗಳಿಂದ ಈ ಕೆಲಸವನ್ನು ಮಾಜಿ ಸಚಿವ, ಬಿಜೆಪಿ ಮುಖಂಡ ನಾಗರಾಜ ಶೆಟ್ಟಿ ಒಡೆತನದ ಗಣೇಶ್ ಶಿಪ್ಪಿಂಗ್ ಏಜನ್ಸಿ ಧರ್ಮಾರ್ಥವಾಗಿ ನಡೆಸಿಕೊಟ್ಟಿದೆ.
ಈ ಬಗ್ಗೆ ತಿಳಿದು ಹೆಡ್ ಲೈನ್ ಕರ್ನಾಟಕದಿಂದ ನಾಗರಾಜ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ, ಇಂಡಿಯನ್ ಆಯಿಲ್ ಕಂಪನಿಯವರು ನಮ್ಮಲ್ಲಿ ಮಂಗಳೂರು ಬಂದರಿಗೆ ಆಕ್ಸಿಜನ್ ಬಂದಿದ್ದು, ಅದನ್ನು ಸಾಗಿಸಲು ನೆರವು ಕೊಡಬೇಕೆಂದು ಕೇಳಿಕೊಂಡಿದ್ದರು. ಮೊದಲಿಗೆ, ಹಡಗಿನಿಂದ ಇಳಿಸಿ ಹೊರಗೆ ತಂದುಕೊಟ್ಟರೆ ಸಾಕು ಎಂದು ಹೇಳಲಾಗಿತ್ತು. ಆದರೆ, ಅದನ್ನು ಬೇರೆ ಬೇರೆ ಜಿಲ್ಲೆಗಳಿಗೆ ಹೊತ್ತು ಸಾಗಬೇಕಲ್ಲ. ನಮ್ಮದೇ ಸಂಸ್ಥೆಯ ಕಂಟೇನರ್ ಲಾರಿಗಳಿಂದ ಕರ್ನಾಟಕ, ಕೇರಳ, ಗೋವಾ ರಾಜ್ಯಗಳಿಗೆ ಹೊತ್ತು ಸಾಗಿಸಿದ್ದೇವೆ. ಇದಕ್ಕಾಗಿ ಇಂಡಿಯನ್ ಆಯಿಲ್ ಕಂಪೆನಿಯಿಂದಾಗಲೀ, ನೌಕಾಪಡೆಯಿಂದಾಗಲೀ ನಯಾಪೈಸೆ ಪಡೆದಿಲ್ಲ. ಕೊರೊನಾ ಸಂಕಷ್ಟದ ನಡುವೆ ದೇಶಸೇವೆ ಎಂಬ ನೆಲೆಯಲ್ಲಿ ಧರ್ಮಾರ್ಥವಾಗಿ ಎಲ್ಲವನ್ನೂ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಲ್ಲಿ ನೌಕಾಪಡೆಯ ಐದು ಹಡಗುಗಳಲ್ಲಿ 18 ಕಂಟೇನರ್ ಗಳಲ್ಲಿ ಆಕ್ಸಿಜನ್ ತರಲಾಗಿತ್ತು. ಪ್ರತೀ ಕಂಟೇನರ್ ಇಪ್ಪತ್ತು ಟನ್ ತೂಕ ಹೊಂದಿತ್ತು. ಇದನ್ನು ಸಾಗಿಸಲು ಗಣೇಶ್ ಶಿಪ್ಪಿಂಗ್ ಸಂಸ್ಥೆಯ 18 ಕಂಟೇನರ್ ಲಾರಿಗಳನ್ನು ಬಳಸಲಾಗಿದೆ. ಕರ್ನಾಟಕದ ಮೂಲೆ ಮೂಲೆಯ ಯಾವೆಲ್ಲ ಜಿಲ್ಲೆಗಳಿಗೆ ಆಕ್ಸಿಜನ್ ಅಗತ್ಯವಿತ್ತೋ ಅವೆಲ್ಲವನ್ನೂ ನಮ್ಮದೇ ಲಾರಿಗಳಲ್ಲಿ ಸರಬರಾಜು ಮಾಡಿದ್ದೇವೆ. ಆಯಾ ಭಾಗದಲ್ಲಿ ಕಂಟೇನರ್ ಖಾಲಿ ಮಾಡಿ, ಅದನ್ನು ಸುರಕ್ಷಿತವಾಗಿ ಹಿಂತಿರುಗಿಸುವ ಹೊಣೆಯೂ ನಮ್ಮದೇ ಆಗಿತ್ತು. ಅವನ್ನು ಜೋಪಾನವಾಗಿ ಮಾಡಿದ್ದೇವೆ.
ರಾಜ್ಯದ ಬೆಂಗಳೂರು, ಬಳ್ಳಾರಿ, ಗುಲ್ಬರ್ಗ, ಮೈಸೂರು, ಕೇರಳದ ಕೊಚ್ಚಿ, ಕಾಸರಗೋಡು, ಗೋವಾ ರಾಜ್ಯಗಳಿಗೆ ಮಂಗಳೂರಿನಿಂದ ಆಕ್ಸಿಜನ್ ಪೂರೈಕೆಯಾಗಿದೆ. ಬೆಂಗಳೂರು ಏರ್ಪೋರ್ಟಿಗೆ ವಿಮಾನದಲ್ಲಿ ಆಗಮಿಸಿದ್ದ ಆಕ್ಸಿಜನ್ ಕಂಟೇನರನ್ನೂ ಅನ್ ಲೋಡಿಂಗ್ ಮಾಡಿಸಿ, ವಿವಿಧ ಕಡೆಗಳಿಗೆ ಒಯ್ಯುವ ಕೆಲಸವನ್ನೂ ಗಣೇಶ್ ಶಿಪ್ಪಿಂಗ್ ಏಜನ್ಸಿಯಿಂದ ಮಾಡಲಾಗಿದೆ. ಸದ್ಯಕ್ಕೆ ಬೆಹರಿನ್ ರಾಷ್ಟ್ರದಿಂದ ಆಗಮಿಸಿದ್ದ ಎರಡು ಕಂಟೇನರನ್ನು ಉಳಿಸಿಕೊಳ್ಳಲಾಗಿದೆ. ಇನ್ನೂ ಎರಡು ತಿಂಗಳು ಉಳಿಸಿಕೊಳ್ಳಲು ಸೂಚನೆ ನೀಡಲಾಗಿದ್ದು, ವಿದೇಶಗಳಿಂದ ಅಥವಾ ಬೇರೆ ಕಡೆಯಿಂದ ಬರುವ ಆಕ್ಸಿಜನ್ ತುಂಬಿಸಿಕೊಳ್ಳಲು ಬಳಸಿಕೊಳ್ಳಲು ಸೂಚನೆ ಇದೆ ಎಂದಿದ್ದಾರೆ ನಾಗರಾಜ ಶೆಟ್ಟಿ.
18 ಕಂಟೇನರ್ ಜೊತೆಗೆ 160 ಕ್ರೇಟ್ ಗಳಲ್ಲಿಯೂ ಆಕ್ಸಿಜನ್ ತರಲಾಗಿತ್ತು. ಒಂದು ಕಂಟೇನರ್ ತೂಕ 20 ಟನ್ ಆಗಿದ್ದರೆ, ಕ್ರೇಟ್ ತಲಾ ಒಂದು ಟನ್ ತೂಕದ್ದಾಗಿತ್ತು. ಇವುಗಳ ಅನ್ ಲೋಡಿಂಗ್, ಸಾಗಣೆ ವೆಚ್ಚ ಎಲ್ಲವನ್ನೂ ನಾವು ಭರಿಸಿದ್ದೇವೆ. ಈಗಲೂ ಎರಡು ಕಂಟೇನರ್ ಲಾರಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಸ್ಥಳಾಂತರ ಇನ್ನಿತರ ಕೆಲಸಗಳಿಗಾಗಿ ಸುತ್ತಾಡುತ್ತಿದೆ. ಪ್ರಧಾನಿ ಮೋದಿಯವರು ಈಗಾಗ್ಲೇ 75 ಶೇಕಡಾ ಜನರಿಗೆ ಉಚಿತ ವ್ಯಾಕ್ಸಿನ್ ಕೊಡುವುದಾಗಿ ಹೇಳಿದ್ದಾರೆ. ಇನ್ನೇನು ಕೊರೊನಾ ಎರಡನೇ ಅಲೆಯ ಭೀತಿ ಮರೆಯಾಗುವ ಭರವಸೆ ತಜ್ಞರಿಂದ ಸಿಕ್ಕಿದೆ. ದೇಶಕ್ಕಾಗಿ ದುಡಿಯೋಣ ಎನ್ನುವುದಷ್ಟೇ ನಮ್ಮ ಕಳಕಳಿ ಎಂದು ಹೇಳಿದರು ನಾಗರಾಜ ಶೆಟ್ಟಿ.
ಬಂದರು ಮತ್ತು ಏರ್ಪೋರ್ಟಿನಲ್ಲಿ ಲೋಡಿಂಗ್ ಮತ್ತು ಸಾಗಣೆ ವೆಚ್ಚ ಲಕ್ಷಾಂತರ ರೂಪಾಯಿಗಳಾಗಿದ್ದು ಇದನ್ನು ನಾಗರಾಜ ಶೆಟ್ಟಿ ಅವರ ಗಣೇಶ್ ಶಿಪ್ಪಿಂಗ್ ಸ್ವತಃ ಭರಿಸಿದ್ದು ಜನಸೇವೆಯ ಕಾರ್ಯಕ್ಕೆಂದು ವ್ಯಯಿಸಿದ್ದಾರೆ. ನಿರಾಶ್ರಿತರಿಗೆ ಕಿಟ್, ಊಟ ಇನ್ನಿತರ ಸೇವೆಗಳ ಮಧ್ಯೆ ಶಿಪ್ಪಿಂಗ್ ಸಂಸ್ಥೆಯ ನೆಲೆಯಲ್ಲಿ ಇದೂ ಒಂದು ಸೇವೆಯಾಗಿ ದಾಖಲಾಗಬೇಕಿದೆ.
Video:
Mangalore Sri Ganesh Shipping Agency providing free service to the entire state of Karnataka in reaching the Oxygen Containers that come Via War Ship to New Mangalore Port Trust. The service is solely handled by Political Leader B. Nagaraja Shetty.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am