ವಿದೇಶಕ್ಕೆ ತೆರಳುವ ಎಲ್ಲರಿಗೂ ಜೂನ್ 14ರಿಂದ ಕೊರೊನಾ ಲಸಿಕೆ‌ ಲಭ್ಯ 

10-06-21 10:01 pm       Mangaluru Correspondent   ಕರಾವಳಿ

ವಿದೇಶಕ್ಕೆ ತೆರಳುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಲು ಜಿಲ್ಲಾಡಳಿತ ಅನುವು ಮಾಡಿದೆ.

ಮಂಗಳೂರು, ಜೂನ್ 10: ವಿದೇಶಕ್ಕೆ ತೆರಳುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಲು ಜಿಲ್ಲಾಡಳಿತ ಅನುವು ಮಾಡಿದೆ.

ಜೂನ್ 14‌ ರ ಸೋಮವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ, ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ವಿದೇಶಕ್ಕೆ ತೆರಳುವ ಮಂದಿಗೆ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ‌ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

ವಿದೇಶಕ್ಕೆ ಹೋಗಲಿರುವವರು ಅವರ ಪಾಸ್ ಪೋರ್ಟ್, ವೀಸಾ ಅಥವಾ ಪ್ರಯಾಣದ ಟಿಕೇಟನ್ನು ದಾಖಲೆಯಾಗಿ ತೋರಿಸಿ ಅವರ ಗ್ರಾಮದ ಸ್ಥಳೀಯ ಲಸಿಕಾ ಕೇಂದ್ರದಲ್ಲೇ ಮೊದಲ ಆದ್ಯತೆಯ ಮೇರೆಗೆ ಲಸಿಕೆ ಪಡೆಯಲು ಸೂಚಿಸಲಾಗಿದೆ.

Those travelling abroad (international Travellers)  from Mangaluru to get the first dose vaccine on June 14 says Administration.