ನೀವು ಬಡವರಿಗೆ ಮಾತ್ರ ರೂಲ್ಸ್ ಮಾಡ್ತೀರಿ, ಶ್ರೀಮಂತರಿಗಿಲ್ಲ.. ಯುವಕನ ವಿಡಿಯೋ ವೈರಲ್ 

11-06-21 07:33 pm       Udupi Correspondent   ಕರಾವಳಿ

ಕುಂದಾಪುರ ತಾಲೂಕಿನ ಕಂಬದಕೋಣೆಯಲ್ಲಿ ಗ್ರಾಮದ ಗಡಿಯಲ್ಲಿ ಹಾಕಿದ್ದ ಬ್ಯಾರಿಕೇಡ್ ಪ್ರಶ್ನಿಸಿ, ಯುವಕನೊಬ್ಬ ಅಲ್ಲಿದ್ದ ಪೊಲೀಸರನ್ನು ಪ್ರಶ್ನಿಸುವ ವಿಡಿಯೋ ವೈರಲ್ ಆಗಿದೆ.‌

ಉಡುಪಿ, ಜೂನ್ 11: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಿರುವ ಗ್ರಾಮಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಕುಂದಾಪುರ ತಾಲೂಕಿನ ಕಂಬದಕೋಣೆಯಲ್ಲಿ ಗ್ರಾಮದ ಗಡಿಯಲ್ಲಿ ಹಾಕಿದ್ದ ಬ್ಯಾರಿಕೇಡ್ ಪ್ರಶ್ನಿಸಿ, ಯುವಕನೊಬ್ಬ ಅಲ್ಲಿದ್ದ ಪೊಲೀಸರನ್ನು ಪ್ರಶ್ನಿಸುವ ವಿಡಿಯೋ ವೈರಲ್ ಆಗಿದೆ.‌

ಕೆಲವು ದಿನಗಳ ಹಿಂದೆ ಕಂಬದಕೋಣೆ ಗ್ರಾಮವನ್ನು ಕೊರೊನಾ ಹೆಚ್ಚಳವಾಗಿರುವ ಹಿನ್ನೆಲೆ ಸಂಪೂರ್ಣ ಲಾಕ್ಡೌನ್ ಮಾಡಲಾಗಿತ್ತು. ಅಲ್ಲದೇ ಗ್ರಾಮವನ್ನು ಪ್ರವೇಶ ಮಾಡುವ ಗಡಿಗಳಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾತ್ತು. ಅಲ್ಲಿಗೆ ಬಂದ ಗ್ರಾಮದ ಯುವಕನೊಬ್ಬ, ನೀವು ಎಲ್ಲರಿಗೂ ಒಂದೇ ನಿಯಮ ಮಾಡಿ, ಶ್ರೀಮಂತರಿಗೆ ನಿಮ್ಮ ನಿಯಮ ಅನ್ವಯ ಆಗುದಿಲ್ಲ.. ಬಡವರಿಗೆ ಮಾತ್ರ ನಿಯಮ ಮಾಡ್ತೀರಿ, ರೂಲ್ಸ್ ಅಂದ್ರೆ ಎಲ್ಲರಿಗೂ ಒಂದೇ ಅಂತ ಗಲಾಟೆ ಮಾಡಿದ್ದಾನೆ. 

ಈ ವೇಳೆ ಸ್ಥಳದಲ್ಲಿದ್ದ ಯುವಕನೊಬ್ಬ ಯುವಕನಿಗೆ ಹೊಡೆಯಲು ಮುಂದಾಗಿದ್ದಾನೆ. ವಿಡಿಯೋದಲ್ಲಿ ಪೊಲೀಸ್ ಬ್ಯಾರಿಕೇಡ್ ಇದ್ರೂ ಪೊಲೀಸರು ಇರಲಿಲ್ಲ, ಅಲ್ಲದೇ ಇಷ್ಟು ಜನ ಯುವಕರು ಗ್ರಾಮ ಕಾಯುವ ಅವಶ್ಯಕತೆ ಏನಿದೆ ಎನ್ನುವ ಪ್ರಶ್ನೆಯನ್ನು ಯುವಕ ಕೇಳುತ್ತಾನೆ. 

ಘಟನೆಯನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ವಿಡಿಯೋ ಬಗ್ಗೆ ಪರ - ವಿರೋಧ ಚರ್ಚೆ ನಡೆಯುತ್ತಿದೆ.

VIDEO: CLICK

Kundapura Rules only for Poor no rules for Rich video of youth goes viral on Social Media