ದ.ಕ. ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ ;  ಗ್ಯಾರೇಜ್, ಕನ್ನಡಕ ಅಂಗಡಿಗೆ ಅವಕಾಶ

11-06-21 08:36 pm       Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಇರುವ ರೀತಿಯಲ್ಲೇ ಲಾಕ್ಡೌನ್ ಆದೇಶವನ್ನು ಜೂನ್ 21ರ ವರೆಗೂ ವಿಸ್ತರಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಆದೇಶ ಹೊರಡಿಸಿದ್ದಾರೆ.

ಮಂಗಳೂರು, ಜೂನ್ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಇರುವ ರೀತಿಯಲ್ಲೇ ಲಾಕ್ಡೌನ್ ಆದೇಶವನ್ನು ಜೂನ್ 21ರ ವರೆಗೂ ವಿಸ್ತರಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ, ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಹನ ಶೋರೂಂ ಹೊರತುಪಡಿಸಿ, ಗ್ಯಾರೇಜ್ ಮತ್ತು ಅಧಿಕೃತ ವಾಹನ ಸೇವಾ ಕೇಂದ್ರಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಅವಕಾಶ ನೀಡಲಾಗಿದೆ. ಆದರೆ, ಕೊರೊನಾ ನಿಯಮ ಅನುಸರಿಸಿಕೊಂಡು ಸೇವಾ ಕೇಂದ್ರಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ಕನ್ನಡಕದ ಅಂಗಡಿಯನ್ನೂ ಮಧ್ಯಾಹ್ನ 12 ಗಂಟೆ ವರೆಗೆ ತೆರೆದಿಡಲು ಅವಕಾಶ ನೀಡಲಾಗಿದೆ.

ಉಳಿದಂತೆ, ದಿನಸಿ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಗೆ ಬೆಳಗ್ಗೆ ಆರರಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇತರ ಜಿಲ್ಲೆಗಳಲ್ಲಿ ಇರುವಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಬಗ್ಗೆ ಪ್ರತ್ಯೇಕ ನಿರ್ದೇಶನ ಇರುವುದಿಲ್ಲ. ಎಂದಿನಂತೆ ಲಾಕ್ಡೌನ್ ಆದೇಶ ಇರಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

The district deputy commissioner, Dr K V Rajendra has announced that there will not be a curfew this weekend, on June 12 and 13. However, he informed that the lockdown that has been already announced in the 11 districts including Dakshina Kannada to bring down the Covid positivity rate will continue.