ಬ್ರೇಕಿಂಗ್ ನ್ಯೂಸ್
11-06-21 08:48 pm Mangaluru Correspondent ಕರಾವಳಿ
ಮಂಗಳೂರು, ಜೂನ್ 11: ಉತ್ರ ಕರ್ನಾಟಕದಾಗೆ ಯಾವ್ ಕಡಿಗ್ ಹೋದ್ರೂ ನಿಮ್ಗೆ ರೊಟ್ಟಿ ಊಟಾನೇ ಸಿಗಾದ್. ಕರಾವಳಿ ಮ್ಯಾಗಾದ್ ಕುಚಲಕ್ಕಿ, ಬೆಂಗ್ಲೂರು ಬಾಗದ್ ಮೊಸರನ್ನ ಏನೂ ಸಿಗಲ್ರೀ.. ಆದ್ರ, ಕರಾವಳಿ ಕಡೀ ಬಂದ್ರಾ ಕಡಾಕ್ ರೊಟ್ಟಿ ಊಟನೇ ಸಿಗಂಗಿಲ್ರೀ.. ಈಗ್ ನೋಡಿದ್ರ ಈ ಕಡೀಗ್ ಪೂರ್ತಿ ಉತ್ರ ಕರ್ನಾಟಕ ಮಂದಿಯೇ. ಪೊಲೀಸ್ ಮ್ಯಾಗೆ ನೋಡಿದ್ರೆ 90 ಪರ್ಸೆಂಟ್ ಉತ್ರಾದ್ ಮಂದಿನೇ ಇದಾರಪ್ಪಾ.. ಮಂದಿ ಏನ್ ಹೇಳ್ತಾರೋ, ಈ ಉತ್ರಾದ್ ಮಂದೀಗ್ ಉಡುಪಿ, ಮಂಗ್ಲೂರ್ ಬಂದ್ರಾ ಯಾವ್ ಕಡಿನೂ ರೊಟ್ಟಿ ಊಟ ಸಿಗಾಂಗಿಲ್ಲ ನೋಡಿ.. ಡಿಪಾರ್ಟ್ಮೆಂಟ್ ಕಡೀಗ್ ಬ್ಯಾಚಿಲರ್ ಆದಾರ್ ಗತಿ ಗೋವಿಂದಾ.. ಯಾಕಂತೀರೀ.. ಈ ಉತ್ರಾದ್ ಮ್ಯಾಗ್ ರೊಟ್ಟಿ ಊಟಾನೇ ಬಾಡೂಟಾರೀ..
ಲಾಕ್ಡೌನ್ ಹೇರ್ದಾಂಗ್ ಡಿಪಾರ್ಟ್ಮೆಂಟ್ ಮಂದೀಗ್ ಕಮಿಷನರ್ ಸಾಹೇಬ್ರ ಕಚೇರ್ ಮೈದಾನಾನೇ ಊಟ. ಅಲ್ಲೇ ತಿಂಡಿ, ಅದೇ ಮ್ಯಾಗ್ ಊಟಾ. ನಾರ್ತ್ ಮಂದಿಯಾಗ್ ಪೂರ್ತಿ ಮದ್ಯಾನ, ರಾತ್ರಿಯೆಲ್ಲಾ ಇಲ್ಲೇ ಊಟ ಮಾಡ್ತಾರ್ರೀ.. ಯಾಕಂದ್ರ, ಇಲ್ಲೇ ಊಟ ತಯಾರಾಗಾತ್ ಮಂದೀಗ್. ಆದ್ರಾ ಬರೀ ಅನ್ನ ಸಾರು, ಪುಲಾವ್, ಬೇಲೆ ಬಾತ್ ಹೀಗಾ ಡೈಲಿ ತಿಂದ್ಬಿಟ್ಟು ಜಡ ಆಗ್ಯಾತ್.. ಇದ್ಕಾ ಈವಾತ್ ತಮ್ ಫ್ಯಾಮಿಲಿ ಕಡೀಂದ್ ರೊಟ್ಟಿ ಮಾಡ್ಸಿಕಂಡ್ ಬಂದ್ ಊಟಾ ಕೊಟ್ಟಾರ್ರೀ... ಖಡಾಕ್ ರೊಟ್ಟಿ, ಸಾದಾ ರೊಟ್ಟಿ, ಅದ್ಕ ಶೇಂಗಾ ಚಟ್ನಿ, ಮೊಸರು, ಮೆಂತಿ ಸೊಪ್ಪು, ಕ್ಯಾರೆಟ್, ಮೂಲಂಗಿ ಪೀಸ್, ಬದ್ನಿ ಗೊಜ್ಜು, ಹೆಸ್ರು ಕಾಳಾಗ್ ಮಾಡಿದ್ ಗಸಿ.. ಸೂಪರ್ ಆಗಿತ್ರೀ..
ಹೌದು.. ಇಂದು ನಗರದ ಪೊಲೀಸ್ ಕಮಿಷನರ್ ಕಚೇರಿ ಬಳಿಯ ಮೈದಾನದಲ್ಲಿ ಪೊಲೀಸರಿಗೆ ಬಾಡೂಟ ಇತ್ತು. ಅಂದ್ರೆ, ಉತ್ತರ ಕರ್ನಾಟಕದ ಶೈಲಿಯ ಖಡಕ್ ರೊಟ್ಟಿ ಊಟ.. ಈಗ ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕೂಡ ಹೆಚ್ಚು ಮಂದಿ ಇರೋರು ಉತ್ತರ ಕರ್ನಾಟಕದವರೇ. ಅವರಿಗೆ ರೊಟ್ಟಿ ಊಟ ಅಂದ್ರೇನೆ ಬಾಡೂಟ.. ಇಂದು ತಮ್ಮ ಉತ್ತರದ ಪೊಲೀಸರಿಗೆಲ್ಲ ಭಾರೀ ಖುಷಿಯಾಗಿತ್ತು. ತಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಕಡೆಯಿಂದ ಮಾಡಿಸ್ಕೊಂಡು ತಂದಿದ್ದ ರೊಟ್ಟಿ ಮತ್ತು ಅದರ ಪಲ್ಯವನ್ನು ಇಲ್ಲಿನ ಮಂದಿಗೂ ಕೊಟ್ಟಿದ್ರು. ಜೊತೆಗೆ, ಮಾಧ್ಯಮದ ಮಂದಿಗೂ ಕೊಡಿಸಿ ರುಚಿ ತೋರಿಸಿದ್ರು.
ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಸೇರಿ ಎಲ್ಲಾರು ಸೇರಿ ಗಡದ್ ಊಟ ಮಾಡಿದ್ರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಮಿಷನರ್, ಉತ್ರದ ಮಂದಿ ತುಂಬಾನೇ ಇರೋದ್ರಿಂದ ರೊಟ್ಟಿ ಊಟ ಮಾಡ್ಬೇಕು ಅಂತಿದ್ರು. ಮಾಡ್ರೀಯಪ್ಪಾ ಅಂದಿದ್ದೆ.. ಅದ್ಕೆ ಇಂದು ರೊಟ್ಟಿ ಊಟ ಮಾಡಿಸಿದ್ದಾರೆ. ತಮ್ಮ ಫ್ಯಾಮಿಲಿ ಕಡೆಯಿಂದ್ಲೇ ರೊಟ್ಟಿ ಮಾಡಿಸಿದಾರೆ. ಒಟ್ಟು 1500 ರೊಟ್ಟಿ ಮಾಡಿದ್ದಾರೆ. ಜೊತೆಗೆ, ಇಬ್ಬರು ಮಹಿಳೆಯರನ್ನು ಕರೆಸಿ ರೊಟ್ಟಿನೂ ಸ್ಪಾಟಲ್ಲೇ ತಯಾರಿಸಿದ್ದಾರೆ ಎಂದು ಹೇಳಿದ್ರು.
ಉತ್ತರ ಕರ್ನಾಟಕ ಭಾಗದವರೇ ಆದ ಸಿಎಆರ್ ಎಸಿಪಿ ಆಗಿರೋ ಉಪಾಸೆ ಕೂಡ ತಮ್ಮ ಅಭಿಪ್ರಾಯ ಹಂಚ್ಕೊಂಡ್ರು. ಇಲ್ಲಿ ಮಾಂಸದ ಬಾಡೂಟದಂತೆ ನಮ್ಗೆ ರೊಟ್ಟಿ ಊಟ. ರೊಟ್ಟಿ ಜೊತೆಗೆ ಬದ್ನಿಕಾಯಿ ಪಲ್ಯ, ಚಟ್ನಿ ಕೊಟ್ಟಾಂಗ್ ನಮ್ಗ ಚಲೋ ಆತ್ರೀ.. ಫ್ಯಾಮಿಲಿ ಕಡೆ ಏನಾದ್ರ ಫಂಕ್ಷನ್ ಇದ್ರೆ ರೊಟ್ಟಿ ಊಟಾನೇ. ಅದರ ಮೇಲ್ ಇಲ್ರೀ ಎಂದ್ರು.
Mangalore Police Commissioner Shashi Kumar arranged North Karnataka food for Police Personals today as most of them in service in Mangaluru are from North Karnataka.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm