ಬ್ರೇಕಿಂಗ್ ನ್ಯೂಸ್
15-06-21 09:58 pm Mangaluru Correspondent ಕರಾವಳಿ
ಮಂಗಳೂರು, ಜೂನ್ 15: ಮರವೂರು ಸೇತುವೆ ಕುಸಿಯುವುದಕ್ಕೆ ನಿರಂತರ ಮರಳುಗಾರಿಕೆ ಮತ್ತು ಈ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದೇ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ದೂರಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಭಯಚಂದ್ರ ಜೈನ್, ಮರವೂರು ಸೇತುವೆ ಮಂಗಳೂರು ನಗರವನ್ನು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ. ಆದರೆ, ಈ ಸೇತುವೆಯ ಇಕ್ಕೆಲಗಳಲ್ಲಿ ಫಲ್ಗುಣಿ ನದಿಯಿಂದ ಮರಳನ್ನು ಎತ್ತಿರುವುದು ಈಗ ದುರಂತಕ್ಕೆ ಕಾರಣವಾಗಿದೆ. ಡ್ರೆಜಿಂಗ್ ನೆಪದಲ್ಲಿ ಸೇತುವೆ ಪಕ್ಕದಲ್ಲಿ ಮರಳು ತೆಗೆದಿದ್ದರಿಂದ ಪಿಲ್ಲರ್ ಕುಸಿದು ನಿಂತಿದೆ. ಈ ಭಾಗದಲ್ಲಿ ಮರಳುಗಾರಿಕೆ ಆಗುತ್ತಿರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಮೌನ ವಹಿಸಿದ್ದೇ ದುರಂತಕ್ಕೆ ಕಾರಣ. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ನಿರ್ಲಕ್ಷ್ಯ ವಹಿಸಿದ್ದರಿಂದ ಸೇತುವೆ ಕುಸಿಯುವಂತಾಗಿದೆ.
ಮರವೂರು ಅಣೆಕಟ್ಟಿನಲ್ಲಿಯೂ ಮರಳುಗಾರಿಕೆ ನಡೆಯುತ್ತಿದ್ದು ಡ್ಯಾಮಿಗೂ ಆಪತ್ತು ಎದುರಾಗಿದೆ. ರೈಲ್ವೇ ಸೇತುವೆ ಬಳಿಯಲ್ಲೂ ಮರಳುಗಾರಿಕೆ ನಡೆಯುತ್ತಿದ್ದು ಅದಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಇವೆಲ್ಲ ನಮ್ಮ ಅಧಿಕಾರಿಗಳ ಮೂಗಿನ ನೇರಕ್ಕೆ ನಡೆಯುತ್ತಿದ್ದು, ವ್ಯವಸ್ಥೆಯ ಲೋಪಕ್ಕೆ ಸಾಕ್ಷಿ. ಈಗ ಮರವೂರು ಸೇತುವೆ ಕುಸಿದಿದ್ದರಿಂದ ಮಂಗಳೂರು ನಗರದಿಂದ ಬಜ್ಪೆಗೆ ಸಂಪರ್ಕ ಕಡಿತವಾಗಿದೆ. ಹಿಂದೆ 20 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಲಾಗುತ್ತಿದ್ದರೆ, ಇನ್ನು ಒಂದು ಗಂಟೆ ಬೇಕಾಗುತ್ತದೆ ಎಂದು ಟೀಕಿಸಿದರು.
ಇದೇ ವೇಳೆ, ಮಾತನಾಡಿದ ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಸೇತುವೆ ಕುಸಿದು ಬಿದ್ದಿರುವ ಘಟನೆಯ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಆಗಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಯೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಕಾಂಗ್ರೆಸ್ ನಾಯಕಿ ಶಾಲೆಟ್ ಪಿಂಟೋ, ವಿನಯರಾಜ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
Also Read: ಮರವೂರು ಸೇತುವೆ ಕುಸಿಯಲು ಏನು ಕಾರಣ ? ಹೊಸತರ ಧಾವಂತಕ್ಕೆ ಬಲಿಬಿತ್ತೇ ಹಳೆಯ ಪಿಲ್ಲರ್ ?
Former MLA Abhayachandra Jain alleged that the sand mafia and negligence of the district administration have caused damage to the Maravoor bridge. Addressing media here on Wednesday, June 15, Jain said, "The bridge that connects the city to the Mangaluru International Airport has been damaged due to the negligence of district administration and sand mafia.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 12:26 pm
Mangalore Correspondent
Thokottu, Mangalore: ತೊಕ್ಕೊಟ್ಟು ನಾಗರಿಕರ ಎಪ್ಪತ...
18-07-25 10:11 pm
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm