ಗೇರು ಬೀಜ ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿ ದಾಸ್ತಾನು ; 16 ಸಾವಿರ ಕೇಜಿ ಅಕ್ಕಿ ವಶಕ್ಕೆ

17-06-21 11:25 am       Udupi Correspondent   ಕರಾವಳಿ

ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಯ 16 ಸಾವಿರ ಕೇಜಿ ಅಕ್ಕಿಯನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Photo credits : Representative Image

ಬೈಂದೂರು, ಜೂನ್ 17 : ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಯ ನಾಲ್ಕು ಲಕ್ಷ ರೂ. ಮೌಲ್ಯದ 16 ಸಾವಿರ ಕೇಜಿ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕಾಲ್ತೋಡು ಗ್ರಾಮದ ಬೋಳಂಬಳ್ಳಿಯ ಪೃಥ್ವಿರಾಜ್ ಜೈನ್ ಎಂಬವರಿಗೆ ಸಂಬಂಧಿಸಿದ ಪೃಥ್ವಿ ಗೇರು ಬೀಜ ಕಾರ್ಖಾನೆಯ ಗೋದಾಮಿನಲ್ಲಿ ಕಿರಿಮಂಜೇಶ್ವರ ನಿವಾಸಿ ಅಯೂಬ್ (32) ಎಂಬ ವ್ಯಕ್ತಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ. ಈ ಬಗ್ಗೆ ಮಾಹಿತಿ ಪಡೆದ ಬೈಂದೂರು ಆಹಾರ ನಿರೀಕ್ಷಕ ವಿನಯ್ ಕುಮಾರ್ ಗೋದಾಮಿನ ಮೇಲೆ ದಾಳಿ ನಡೆಸಿ 335 ಚೀಲ (16,750 ಕೆಜಿ)ಯಷ್ಟು ಅಕ್ಕಿಯನ್ನು ಮತ್ತು ಇಲೆಕ್ಟ್ರಾನಿಕ್ ತೂಕದ ಯಂತ್ರ, ಚೀಲ ಹೊಲಿಯುವ ಯಂತ್ರ ಹಾಗೂ 10 ಗೋಣಿ ಚೀಲಗಳನ್ನು ಸ್ವಾಧೀನಪಡಿಸಿದ್ದಾರೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

At least 16000 kilos of pilfered rice meant to be distributed through the Public Distribution System, was seized in Byndoor, Udupi.