ಬಿಜೆಪಿ ಅಧಿಕಾರದ ಕಚ್ಚಾಟದಿಂದ ಜನರಿಗೆ ದ್ರೋಹ ; ಖಾದರ್ ವಾಗ್ದಾಳಿ 

17-06-21 11:15 pm       Mangaluru Correspondent   ಕರಾವಳಿ

ರಾಜ್ಯ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದ ರಾಜ್ಯದ ಜನರಿಗೆ ದ್ರೋಹವಾಗುತ್ತಿದೆ. ಜನರಿಗೆ ದ್ರೋಹ ಎಸಗುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಂಗಳೂರು, ಜೂನ್ 17: ಶಾಸಕರು ಶಾಸಕಾಂಗ ಸಭೆ ಕರೆಯಿರಿ ಎಂದರೆ ಕೊರೊನಾ ನಿಯಮ ಎಂದು ನಿರಾಕರಿಸುತ್ತಾರೆ. ಆದರೆ ಈಗ ಅಧಿಕಾರಕ್ಕಾಗಿ ಸಭೆ ಸೇರಿ ಕಚ್ಚಾಟ ನಡೆಸುತ್ತಾರೆ. ಹೀಗೆ ಸಭೆ ಸೇರಿದರೆ ಕೋವಿಡ್ ನಿಯಮ ಅನ್ವಯ ಆಗಲ್ವಾ ಎಂದು ಮಾಜಿ ಸಚಿವ ಯು.ಟಿ. ಖಾದರ್ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ. 

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯು.ಟಿ. ಖಾದರ್, ರಾಜ್ಯ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದ ರಾಜ್ಯದ ಜನರಿಗೆ ದ್ರೋಹವಾಗುತ್ತಿದೆ. ಜನರಿಗೆ ದ್ರೋಹ ಎಸಗುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಜನರು ಕೋವಿಡ್ ಭಯದಿಂದ ದಿನ‌ ಕಳೆಯುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ನೋವು, ಕಷ್ಟದ ಬಗ್ಗೆ ಕರುಣೆಯಿಲ್ಲ. ಕೋವಿಡ್ ನಿಯಂತ್ರಣಕ್ಕೆ ಸಭೆ ಕರೆದಿಲ್ಲ. ಶಾಸಕರು ಸಭೆ ಕರೆಯಿರಿ ಎಂದು ಹೇಳಿದರೆ ಕೊರೊನಾ ನಿಯಮ ಎಂದು ಹೇಳುತ್ತಾರೆ. ಆದರೆ ಈಗ ಅಧಿಕಾರ ಕಚ್ಚಾಟಕ್ಕೆ ಸಭೆ ಸೇರಿದರೆ ನಿಯಮ ಅನ್ವಯ ಆಗಲ್ವೇ ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ನಡವಳಿಕೆಯಿಂದ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದ ಗೌರವ, ಘನತೆಗೆ ಧಕ್ಕೆ ಒದಗಿದೆ. ಸರ್ಕಾರ ರಾಜಕೀಯ ಜಂಜಾಟವನ್ನು ಒಂದು‌ ತಿಂಗಳು ಮುಂದೆ ಹಾಕಲಿ. ಈಗಲಾದರೂ ಜನರ ಕಷ್ಟದ ಬಗ್ಗೆ ಗಮನಹರಿಸಲಿ ಎಂದು ಯು. ಟಿ. ಖಾದರ್ ವಾಗ್ದಾಳಿ ನಡೆಸಿದರು.

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ. ಬಿಜೆಪಿ ಸರ್ಕಾರದ ಇತಿಹಾಸದಲ್ಲಿ ನೋಡದ ಸಾಧನೆ ಈ ಮೂಲಕ ಆಗಿದೆ. ಪೆಟ್ರೋಲ್, ಡಿಸೇಲ್‌ನಲ್ಲಿ ಶತಕ ಬಾರಿಸುವ ಮೂಲಕ‌ ಸಾಧನೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಟೀಕಿಸಿದರು.

ಪೆಟ್ರೋಲ್ ದರ ಏರಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆಯೇರಿಕೆ ಕಾರಣ ಅಂತಾ ಹೇಳುತ್ತಾರೆ. ಆದರೆ ಚುನಾವಣೆ ಬರುವಾಗ ಬೆಲೆ ಕಡಿಮೆಯಾಗುತ್ತದೆ ಎಂದು ಖಾದರ್ ಆರೋಪಿಸಿದರು.

Former MLA U T Khader referring to the rise in prices stated that the petrol stations have become tax-collecting booths for the central government after petrol price touched the Rs 100 mark.