ಮಾಣಿಬೆಟ್ಟು ಕೋರ್ದಬ್ಬು ಸ್ಥಾನದಲ್ಲಿ 350 ವರ್ಷ ಹಳೆಯ ಪರಿಕರಗಳು ಪತ್ತೆ

18-06-21 01:04 pm       Mangalore Correspondent   ಕರಾವಳಿ

ಗುರುಪುರ ಬಳಿಯ ಮಾಣಿಬೆಟ್ಟು ಶ್ರೀ ಕೋರ್ದಬ್ಬು ಪರಿವಾರ ದೈವಸ್ಥಾನದ ಮೂಲ ಸಾನ್ನಿಧ್ಯವಿದ್ದ ಜಾಗದಲ್ಲಿ ಉತ್ಖನನ ನಡೆಸಲಾಗಿದ್ದು 350 ವರ್ಷಗಳಷ್ಟು ಹಳೆಯ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ. 

ಮಂಗಳೂರು, ಜೂ.18 : ಇಲ್ಲಿನ ಗುರುಪುರ ಬಳಿಯ ಮಾಣಿಬೆಟ್ಟು ಶ್ರೀ ಕೋರ್ದಬ್ಬು ಪರಿವಾರ ದೈವಸ್ಥಾನದ ಮೂಲ ಸಾನ್ನಿಧ್ಯವಿದ್ದ ಜಾಗದಲ್ಲಿ ಉತ್ಖನನ ನಡೆಸಲಾಗಿದ್ದು 350 ವರ್ಷಗಳಷ್ಟು ಹಳೆಯ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ. 

ಪರಿಸರದ ಜನರಿಗೆ ಸಮಸ್ಯೆ ಎದುರಾಗುತ್ತಿದ್ದರಿಂದ ಬುಧವಾರ ಮಾಣಿಬೆಟ್ಟು ಗುತ್ತು, ಕಾರಮೊಗರು ಗುತ್ತು, ಬರ್ಕೆ ಹಾಗೂ ಊರಿನವರು ಒಟ್ಟು ಸೇರಿ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖನನ ನಡೆಸಿದ್ದರು. ಈ ಸಂದರ್ಭ 350 ವರ್ಷಗಳಷ್ಟು ಹಳೆಯ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ. 

ಇತ್ತೀಚೆಗೆ ದೈವಸ್ಥಾನದಲ್ಲಿ ಇಡಲಾಗಿದ್ದ ತಾಂಬೂಲ ಪ್ರಶ್ನೆಯ ವೇಳೆ ಶಶಿಕುಮಾರ್ ಪಂಡಿತ್ ಅವರು ದೈವಸ್ಥಾನವಿದ್ದ ಪ್ರದೇಶದಲ್ಲಿ ದೈವದ ಪರಿಕರಗಳು ಇರುವ ಬಗ್ಗೆ ಹೇಳಿದ್ದರು. ಉತ್ಖನನದ ವೇಳೆ ದೈವದ ಮೂರ್ತಿ, ಕಂಚಿನ ಮೊಗ, ಖಡ್ಸಲೆ, ಗೋಣ (ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ಮಣ್ಣಿನಿಂದ ತಯಾರಿಸಿದ ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಮಣ್ಣಿನ ದೀಪ ಹೊರತುಪಡಿಸಿ ಉಳಿದೆಲ್ಲ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.