ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಕೊರೊನಾ ಕಾಟ ; ಇಂದು 16 ಮಂದಿ ಬಲಿ

19-06-21 08:57 pm       Mangaluru Correspondent   ಕರಾವಳಿ

ಇಂದು ಒಂದೇ ದಿನ ಒಂದು 832 ಹೊಸ ಸೋಂಕಿತರು ಪತ್ತೆಯಾಗಿದ್ದರೆ, 16 ಮಂದಿ ಸಾವು ಕಂಡಿದ್ದಾರೆ.

ಮಂಗಳೂರು, ಜೂ.19: ಇತರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮತ್ತೆ ನಾಗಾಲೋಟದತ್ತ ಸಾಗಿದೆ. ಸೋಂಕಿತರು ಮತ್ತು ಸೋಂಕಿನಿಂದ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಒಂದೇ ದಿನ ಒಂದು 832 ಹೊಸ ಸೋಂಕಿತರು ಪತ್ತೆಯಾಗಿದ್ದರೆ, 16 ಮಂದಿ ಸಾವು ಕಂಡಿದ್ದಾರೆ.

ಕಳೆದ ಹಲವಾರು ದಿನಗಳಿಂದ ಹೊಸ ಸೋಂಕಿತರ ಸಂಖ್ಯೆ ಕಡಿಮೆ ಇತ್ತು. ವಾರದ ಹಿಂದೆ ದಿನದ ಸೋಂಕಿತರ ಸಂಖ್ಯೆ 400ಕ್ಕೆ ಇಳಿದಿತ್ತು. ಆದರೆ, ಆಬಳಿಕ ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚತೊಡಗಿದ್ದು, ಇಂದು ಒಂದೇ ದಿನ 832 ಮಂದಿ ಸೋಂಕಿತರು ಕಂಡುಬಂದಿದ್ದಾರೆ.

ಇಂದು 16 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತರ ಸಂಖ್ಯೆ 1040ಕ್ಕೆ ಏರಿಕೆಯಾಗಿದೆ. ಇಂದು 552 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಸದ್ಯಕ್ಕೆ ಜಿಲ್ಲೆಯಲ್ಲಿ 7195 ಮಂದಿ ಸಕ್ರಿಯ ಸೋಂಕಿತರು ಇದ್ದಾರೆ. 

ಇನ್ನು ಜಿಲ್ಲೆಯಲ್ಲಿ ಲಾಕ್ ಡೌನ್ ಮಧ್ಯೆ ಕೊರೊನಾ ಸೊಂಕು ಹಾಗೂ ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು ಸೋಂಕು ನಿಯಂತ್ರಣಕ್ಕೆ ಬಾರದಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

Amid Lockdwon Dakshina Kannada records 832 new Corona cases with 16 deaths as on 19 June 2021.