ಯುವ ಕಾಂಗ್ರೆಸ್, ಬ್ಲಡ್ ಡೋನರ್ಸ್ ಸಂಸ್ಥೆಯಿಂದ ಬಾಳೆಪುಣಿಯಲ್ಲಿ 300ನೇ ಬೃಹತ್ ರಕ್ತದಾನ ಶಿಬಿರ 

20-06-21 03:44 pm       Mangaluru Correspondent   ಕರಾವಳಿ

ಬ್ಲಡ್ ಡೋನರ್ಸ್  ಮಂಗಳೂರು ಸಂಘಟನೆ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಕೊಣಾಜೆ ಬಳಿಯ ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲಿನಲ್ಲಿ 300ನೇ ರಕ್ತದಾನ‌ ಶಿಬಿರ ನಡೆಸಿದೆ. 

ಉಳ್ಳಾಲ, ಜೂ.20: ಬ್ಲಡ್ ಡೋನರ್ಸ್  ಮಂಗಳೂರು ಸಂಘಟನೆ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಕೊಣಾಜೆ ಬಳಿಯ ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲಿನಲ್ಲಿ 300ನೇ ರಕ್ತದಾನ‌ ಶಿಬಿರ ನಡೆಸಿದೆ. 

ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಹಾಗೂ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ, ಯೆನಪೋಯ ಆಸ್ಪತ್ರೆ ದೇರಳಕಟ್ಟೆ , ಕೆ.ಎಂ.ಸಿ ಆಸ್ಪತ್ರೆ ಮಂಗಳೂರು, ಇಂಡಿಯನ್‌ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಯೋಗ ನೀಡಿದ್ದವು. 
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರಿ ದೀಪಿಕಾ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕ್ರಮ‌ ಆಯೋಜನೆಗಳು ಇತರ ಜಿಲ್ಲೆಗಳಿಗಿಂತ ವಿಭಿನ್ನವಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲ ಕಡೆನೂ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ‌ ಸಮಯದಲ್ಲಿ ರಕ್ತದ ಅವಶ್ಯಕತೆಯನ್ನು ಪೂರೈಸಲು ಶ್ರಮಿಸುತ್ತಿರುವ ಬ್ಲಡ್ ಡೋನರ್ಸ್ ಸಂಸ್ಥೆಯ ಸಾಮಾಜಿಕ ಕಳಕಳಿ ಅನುಕರಣೀಯ ಎಂದು ಹೇಳಿದರು. 
ಮಾಜಿ ಸಚಿವ ಶಾಸಕ ಯು.ಟಿ ಖಾದರ್ ಮಾತನಾಡಿ, ರಕ್ತದಾನ ಮಾಡಿ ಜೀವ ಉಳಿಸಿದ ಪ್ರತಿ ಫಲ ಖಂಡಿತವಾಗಿಯೂ ದೇವರು ನೀಡುತ್ತಾನೆ. ಹಿಂದಿನ‌ ಕಾಲದಲ್ಲಿ ರಕ್ತದಾನ ಮಾಡಲು ಜನರಲ್ಲಿ ತಪ್ಪು ಅಭಿಪ್ರಾಯಗಳಿದ್ದವು. ಈಗ ಆ ರೀತಿಯ ಭಾವನೆ ತೊಲಗಿ ಸಮಾಜ ಕಾರ್ಯ ಎನ್ನುವ ರೀತಿ ಜನರು ರಕ್ತ ನೀಡುತ್ತಿದ್ದಾರೆ ಎಂದರು. 

ಮಂಜೇಶ್ವರ ವಿಧಾನಸಭಾ ಕ್ಷೇತ್ರ ಶಾಸಕರಾದ ಎ.ಕೆ.ಅಶ್ರಫ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ , ಮುಖಂಡರಾದ ಪದ್ಮನಾಭ ನರಿಂಗಾನ, ಎನ್.ಎಸ್ ಕರೀಂ, ಸಿದ್ದೀಕ್ ಪಾರೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ಮುರಲೀದರ ಮೋರ್ಲ, ಬ್ಲಡ್ ಡೋನರ್ಸ್ ಅದ್ಯಕ್ಷರಾದ ಸಿದ್ದೀಕ್ ಮಂಜೇಶ್ವರ , ಬ್ಲಡ್ ಡೋನರ್ಸ್ನ ಪ್ರಧಾನ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಕಾರ್ಯದರ್ಶಿ ರಝಾಕ್ ಸಾಲ್ಮರ, ಕಾರ್ಯನಿರ್ವಾಹಕ‌ ಶಾಹುಲ್ ಹಮೀದ್ ಕಾಶಿಪಟ್ಣ, ಫಾರೂಕು ಆತೂರು, ಸೌದಿ ಘಟಕದ ಇರ್ಷಾದ್ ಉಚ್ಚಿಲ ಹಾಗೂ ದಮಾಮ್ ಘಟಕದ ಪರ್ಝಾನ್ ಸಿದ್ಧಕಟ್ಟೆ   ಮೊದಲಾದವರು ಉಪಸ್ಥಿತರಿದ್ದರು.

Ullal, Mudupi Youth Congress hold blood donation camp in Balepuni, Mangalore.