ಎನ್ಎಂಪಿಟಿ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದು ಮುಳುಗಿದ ಟ್ರಕ್ ; ಒಬ್ಬ ಸಾವು, ಇನ್ನೊಬ್ಬ ನಾಪತ್ತೆ 

21-06-21 11:51 am       Mangaluru Correspondent   ಕರಾವಳಿ

ಪಣಂಬೂರು ಎನ್ಎಂಪಿಟಿ ಬಂದರಿನಲ್ಲಿ ಹಡಗಿನಿಂದ ಅದಿರು ಹೊತ್ತೊಯ್ಯಲು ಬಂದಿದ್ದ ಕಂಟೇನರ್ ಲಾರಿ ಅಕಸ್ಮಾತ್ ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. 

ಮಂಗಳೂರು, ಜೂನ್ 21: ಪಣಂಬೂರು ಎನ್ಎಂಪಿಟಿ ಬಂದರಿನಲ್ಲಿ ಹಡಗಿನಿಂದ ಅದಿರು ಹೊತ್ತೊಯ್ಯಲು ಬಂದಿದ್ದ ಕಂಟೇನರ್ ಲಾರಿ ಅಕಸ್ಮಾತ್ ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. 

ಡೆಲ್ಟಾ ಕಂಪನಿಗೆ ಸೇರಿದ ಟ್ರಕ್  ನಿನ್ನೆ ರಾತ್ರಿ ‌10.30ರ ಸುಮಾರಿಗೆ ಹಡಗಿನಿಂದ ಕಬ್ಬಿಣದ ಅದಿರು ಅನ್ಲೋಡ್ ಮಾಡಿ ತುಂಬಿಸಿಕೊಳ್ಳಲು 14ನೇ ಬರ್ತ್ ಗೆ ಬಂದಿತ್ತು. ಆದರೆ ಖಾಲಿಯಿದ್ದ ಟ್ರಕ್ ಅಕಸ್ಮಾತ್ ಸಮುದ್ರಕ್ಕೆ ಬಿದ್ದು ಮುಳುಗಿದ್ದು ಅದರಲ್ಲಿದ್ದ ಚಾಲಕ ಮತ್ತು ಕ್ಲೀನರ್ ನೀರಿನಲ್ಲಿ ಮುಳುಗಿದ್ದಾರೆ. ಇದೇ ವೇಳೆ ಅಲ್ಲಿಂದ ಪಾಸ್ ಆಗಿದ್ದ ಟಗ್ ಬೋಟಿನ ಸಿಬಂದಿ ಲಾರಿ ಮುಳುಗಿದ್ದನ್ನು ಬಂದರಿನ ರಕ್ಷಣಾ ವಿಭಾಗಕ್ಕೆ ಮಾಹಿತಿ ನೀಡಿದ್ದರು.‌

ಉತ್ತರ ಭಾರತ ಮೂಲದ ಚಾಲಕ ರಾಜೇಸಾಬ್ (26) ಮತ್ತು ಇನ್ನೊಬ್ಬ ಕ್ಲೀನರ್ ಭೀಮಪ್ಪ (22) ಈ ವೇಳೆ ಲಾರಿಯಲ್ಲಿದ್ದರು. ಕೂಡಲೇ ಲಾರಿ ನೀರಿಗಿಳಿದ ಘಟನೆಯ ಬಗ್ಗೆ ಸಿಐಎಸ್ಎಫ್ ಗೆ ಮಾಹಿತಿ ನೀಡಲಾಗಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ. 11.50ರ ವೇಳೆಗೆ ಒಬ್ಬನನ್ನು ಮೇಲಕ್ಕೆತ್ತಿ ತಕ್ಷಣ ನಗರದ ಎಜೆ ಆಸ್ಪತ್ರೆಗೆ ತರಲಾಗಿದ್ದು ಅಲ್ಲಿ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಆತನನ್ನು ಟ್ರಕ್ ಚಾಲಕ ರಾಜೇಸಾಬ್ ಎಂದು ಗುರುತಿಸಲಾಗಿದೆ. 

ಭೀಮಪ್ಪ ನಾಪತ್ತೆಯಾಗಿದ್ದು ಬೆಳಗ್ಗಿನ ವರೆಗೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭೀಮಪ್ಪ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಟ್ರಕ್ ಸಿಬಂದಿಯಾಗಿದ್ದ. 

ರಾತ್ರಿ ವೇಳೆಗೆ ಅನ್ಲೋಡಿಂಗ್ ಕೆಲಸ ಆಗುತ್ತಿತ್ತೇ ಅಥವಾ ಯಾಕೆ ಟ್ರಕ್ ಅಷ್ಟು ತೀರಕ್ಕೆ ಬಂದಿತ್ತು. ಬಂದರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಆಗಿದೆಯೇ ಎನ್ನುವ ಬಗ್ಗೆ ಪಣಂಬೂರು ಪೊಲೀಸರು ತನಿಖೆ ನಡೆಸಬೇಕಾಗಿದೆ.

In a shocking incident that occurred at around 10.30 pm on Sunday June 20 at New Mangalore Port Trust (NMPT) in the city, a container truck fell into the sea as the driver lost control over the vehicle. The truck belonging to Delta company bearing registration number KA 22 C 8257, fell into the sea near berth no. 14 west.