ಬ್ರೇಕಿಂಗ್ ನ್ಯೂಸ್
26-06-21 06:05 pm Mangalore Correspondent ಕರಾವಳಿ
ಮಂಗಳೂರು, ಜೂನ್ 26: ಜೂನ್ 26 ವಿಶ್ವ ಡ್ರಗ್ಸ್ ವಿರೋಧಿ ದಿನ. ಈ ದಿನವಾದ್ರೂ ಡ್ರಗ್ಸ್ ಮುಟ್ಚಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ಜನರಿಗೆ ಎಚ್ಚರಿಸಿದ ದಿನ. ಇದೇ ದಿನವನ್ನು ಜಗತ್ತಿನಾದ್ಯಂತ ವಿಶ್ವ ಡ್ರಗ್ಸ್ ವಿರೋಧಿ ದಿನವನ್ನಾಗಿ ಆಯಾ ಸರಕಾರಗಳು ಆಚರಿಸಿಕೊಂಡು ಬಂದಿವೆ. ಹೀಗಾಗಿ ಕರ್ನಾಟಕದಲ್ಲಿ ಪ್ರತಿ ಬಾರಿ ಇದೇ ದಿನವನ್ನು ಆಯ್ದುಕೊಂಡು ಪೊಲೀಸರು ಬೇರೆ ಬೇರೆ ಪ್ರಕರಣಗಳಲ್ಲಿ ಹಿಡಿದು ಕೂಡಿಟ್ಟ ಗಾಂಜಾ ಸೇರಿ ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ಸುಟ್ಟು ಬೂದಿ ಮಾಡುತ್ತಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ, ಮಂಗಳೂರಿನಲ್ಲಿಯೂ ಡ್ರಗ್ಸ್ ಸುಡುವ ಕಾರ್ಯಕ್ರಮ ನಗರದ ಹೊರವಲಯದ ಮುಲ್ಕಿ ಬಳಿಯ ಬಯೋವೇಸ್ಟ್ ಫ್ಯಾಕ್ಟರಿಯಲ್ಲಿ ನಡೆಯಿತು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ವಶಕ್ಕೆ ಪಡೆದಿದ್ದ 1.38 ಕೋಟಿ ಮೌಲ್ಯದ 130 ಕೇಜಿಗೂ ಹೆಚ್ಚು ಗಾಂಜಾ, 68 ಎಂಡಿಎಂಎ, 41 ಎಲ್ ಎಸ್ ಡಿ ಸ್ಟ್ರಿಪ್ಸ್, ಅಲ್ಪ ಪ್ರಮಾಣದ ಕೊಕೇನ್ ಮತ್ತು ಬ್ರೌನ್ ಶುಗರ್ ಅನ್ನು ಕೂಡ ಸುಟ್ಟು ನಾಶ ಪಡಿಸಲಾಯ್ತು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಠಾಣೆಗಳಲ್ಲಿ ವಶಕ್ಕೆ ಪಡೆದ ಮಾದಕ ದ್ರವ್ಯಗಳನ್ನೂ ಇದೇ ವೇಳೆ ಮುಲ್ಕಿಯ ಬಯೋ ತ್ಯಾಜ್ಯ ಘಟಕದಲ್ಲಿ ನಾಶ ಪಡಿಸಲಾಯಿತು. ಜಿಲ್ಲಾ ವ್ಯಾಪ್ತಿಯಲ್ಲಿ 25 ಲಕ್ಷ ಮೌಲ್ಯದ 221 ಕೇಜಿಯಷ್ಟು ಗಾಂಜಾ ಸಂಗ್ರಹ ಇತ್ತು. ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಪ್ರಕರಣಗಳಲ್ಲಿ 153 ಮಂದಿಯನ್ನು ಬಂಧಿಸಿ, 383 ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ನ್ಯಾಯಾಲಯದ ಆದೇಶದಂತೆ, 221 ಕೇಜಿ ಗಾಂಜಾ ನಾಶ ಪಡಿಸಲಾಗಿದೆ ಎಂದು ಎಸ್ಪಿ ಋಷಿಕುಮಾರ್ ಸೋನವಾಣೆ ತಿಳಿಸಿದ್ದಾರೆ.
ಮಂಗಳೂರು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿ, ಡ್ರಗ್ಸ್ ಚಟ ಅಂದರೆ, ಕೆಲವು ಮರಗಳಲ್ಲಿ ಬಂದಣಿಕೆ ಸಸ್ಯ ಅಡರಿಕೊಂಡಂತೆ. ಅದು ದೇಹಕ್ಕೆ ಒಮ್ಮೆ ಅಂಟಿಕೊಂಡರೆ, ಇಡೀ ಶರೀರವನ್ನು ಕೊಲ್ಲುತ್ತಾ ಹೋಗುತ್ತದೆ. ಚಟದಿಂದ ಹೊರ ಬರುವುದಕ್ಕೂ ಕಷ್ಟವಾಗುತ್ತದೆ. ಹೀಗಾಗಿ ಯಾರಾದ್ರೂ ಈ ರೀತಿಯ ಚಟದಲ್ಲಿ ಬಿದ್ದಿದ್ದರೆ, ನಿಮ್ಮ ಸಂಬಂಧಿಕರೇ ಆಗಿದ್ದರೂ ಅವರನ್ನು ಪಾರು ಮಾಡುವುದಕ್ಕಾಗಿ ಪೊಲೀಸರ ಸಹಾಯ ಪಡೆಯಿರಿ. ಕಳೆದ ನಾಲ್ಕು ತಿಂಗಳಲ್ಲಿ ಕಾಸರಗೋಡು ಭಾಗದವರು ಸೇರಿದಂತೆ ಹಲವು ಮಂದಿ ಪೆಡ್ಲರ್ ಗಳನ್ನು ಬಂಧಿಸಿದ್ದೇವೆ. ಡ್ರಗ್ ಮೂಲಕ್ಕೆ ಹೋಗಿ ನೈಜೀರಿಯನ್ ಪ್ರಜೆಯನ್ನೂ ಬಂಧಿಸಿದ್ದೇವೆ. ಆದರೆ, ಡ್ರಗ್ಸ್ ಅಭಿಯಾನದ ಮೂಲಕ ಸಮಾಜಕ್ಕೆ ಅಂಟಿದ ಪಿಡುಗನ್ನು ದೂರ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಜನರು ಸಹಕಾರ ಕೊಡಬೇಕು ಎಂದು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ 1.28 ಕೋಟಿ ಮೌಲ್ಯದ ಡ್ರಗ್ ನಾಶ
ಉಡುಪಿ ಜಿಲ್ಲೆಯ ನಂದಿಕೂರಿನ ಆಯುಷ್ ಬಯೋ ಮೆಟ್ರಿಕ್ ವೇಸ್ಟ್ ನಿರ್ವಹಣಾ ಘಟಕದಲ್ಲಿ 50 ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ 1.28 ಕೋಟಿ ರೂ. ಮೌಲ್ಯದ ಗಾಂಜಾ ಸೇರಿ ವಿವಿಧ ರೀತಿಯ ಡ್ರಗ್ಸ್ ಅನ್ನು ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಉಡುಪಿ ಎಸ್ ಪಿ ವಿಷ್ಣುವರ್ಧನ್, 2008ರಿಂದ 2021ರ ಇದುವರೆಗಿನ ಎಲ್ಲಾ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ. ಇನ್ನು ಪ್ರತೀ ವರ್ಷವೂ ಇದನ್ನು ಮಾದಕ ದ್ರವ್ಯ ವಿರೋಧಿ ದಿನವಾದ ಜೂ. 26ರಂದು ಮುಂದುವರಿಸಲಾಗುವುದು. ಉಡುಪಿ ಜಿಲ್ಲೆಯ ಎಲ್ಲಾ ಮಾದಕ ದ್ರವ್ಯ ವ್ಯಸನಿಗಳು ಮತ್ತು ಕಳ್ಳಸಾಗಣೆದಾರರ ಮೇಲೆ ಇಲಾಖೆ ನಿಗಾ ಇಡಲಾಗಿದೆ. ಮಾದಕ ದ್ರವ್ಯ ವ್ಯಸನದ ವಿರುದ್ಧ ಇಲಾಖಾ ಸಮರವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
Video:
On International Day against Drug Abuse, seized drugs worth Rs 1.38 crore were destroyed by Mangaluru and Udupi police on Saturday, June 26. Drugs worth approximately Rs 10 lac were destroyed in Mangaluru while the same worth Rs Rs 1,00,28,600 was disposed of in Udupi.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm