ಬ್ರೇಕಿಂಗ್ ನ್ಯೂಸ್
28-06-21 05:58 pm Mangalore Correspondent ಕರಾವಳಿ
ಮಂಗಳೂರು, ಜೂನ್ 28: ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯ ಪ್ರವೇಶದ ಗಡಿಭಾಗದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ರಾಜ್ಯ ಸರಕಾರದ ಸೂಚನೆಯಂತೆ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಲರ್ಟ್ ಮಾಡಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ತಲಪಾಡಿ ಸೇರಿದಂತೆ ಸಾರಡ್ಕ, ಜಾಲ್ಸೂರು ಗಡಿಯಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಕೇರಳದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ರಾಜ್ಯ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ರಾಜೇಂದ್ರ ಅವರು ಇಂದು ತಲಪಾಡಿ ಗಡಿಗೆ ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ. ಅಲ್ಲದೆ, ಪೊಲೀಸರು 24 ಗಂಟೆ ಕಾಲ ಗಡಿಯಲ್ಲಿದ್ದು, ಒಳಬರುವ ಜನರನ್ನು ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದ್ದಾರೆ.
'
'
ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಕೂಡ ಹೆಚ್ಚು ಪತ್ತೆಯಾಗಿವೆ. ಅದರ ಜೊತೆಗೆ, ಅಲ್ಲಿ ಪಾಟಿಸಿಟಿವಿಟಿ ರೇಟ್ ಹತ್ತಕ್ಕಿಂತ ಮೇಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ 5ರ ಒಳಗಿರುವುದರಿಂದ ಮೂರನೇ ಅಲೆಯ ಭೀತಿ ಇರುವುದರಿಂದ ಸೋಂಕು ಹರಡದಂತೆ ನಿಗಾ ವಹಿಸಲಾಗಿದೆ. ಇದಕ್ಕಾಗಿ ಗಡಿಭಾಗದಲ್ಲಿ ಸ್ಥಳದಲ್ಲೇ ಕೋವಿಡ್ ತಪಾಸಣೆಗೂ ಅವಕಾಶ ಮಾಡಲಾಗಿದೆ. ಜೂನ್ 29ರಿಂದ (ಮಂಗಳವಾರ) ಈ ಬಗ್ಗೆ ಕಟ್ಟುನಿಟ್ಟಿನ ತಪಾಸಣೆ ಮತ್ತು ಪರಿಶೀಲನೆ ನಡೆಯಲಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಆಯಾ ಭಾಗದ ಪಂಚಾಯತ್ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಲಪಾಡಿ ಗಡಿಭಾಗಕ್ಕೆ ಸಹಾಯಕ ಆಯುಕ್ತ ಮದನ್ ಮೋಹನ್ ಜೊತೆಗೆ ಜಿಲ್ಲಾಧಿಕಾರಿಯೇ ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ. ಕಾಸರಗೋಡು ಗಡಿಭಾಗದಲ್ಲಿ ಹೆಚ್ಚಿನ ಜನರು ಆಸ್ಪತ್ರೆ, ವಿವಿಧ ಕಾರಣಗಳಿಗಾಗಿ ಮಂಗಳೂರನ್ನು ಆಶ್ರಯಿಸಿದ್ದಾರೆ. ಹಾಗಾಗಿ, ಪೂರ್ತಿ ನಿರ್ಬಂಧ ವಿಧಿಸಿಲ್ಲವಾದರೂ, ಜನರು ಆದಷ್ಟು ಕೋವಿಡ್ ನೆಗೆಟಿವ್ ಆಗಿರುವುದನ್ನು ತೋರಿಸಿಕೊಳ್ಳಬೇಕು. ಸೋಂಕಿನ ಬಗ್ಗೆ ಜಾಗೃತಿ ವಹಿಸಿ, ಇನ್ನಷ್ಟು ಹರಡದಂತೆ ಮುಂಜಾಗ್ರತೆ ವಹಿಸಬೇಕು. ತುರ್ತು ಸನ್ನಿವೇಶಗಳ ಹೊರತುಪಡಿಸಿ ಕಡ್ಡಾಯ ತಪಾಸಣೆ ಮಾಡಿಯೇ ಒಳಬರಬೇಕಾಗಿದೆ. ಅಗತ್ಯ ಇಲ್ಲದ ಸಂದರ್ಭದಲ್ಲಿ ವಿನಾಕಾರಣ ಓಡಾಡುವುದನ್ನು ನಿಲ್ಲಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
The district deputy commissioner Dr Rajendra on Monday, June 28 said that the travellers coming from Kerala to the district should mandatorily possess negative RT-PCR test reports. As per the guidance of the state government and suspected delta variant cases traced in Kerala, the government has asked to take precautionary measures on borders connecting Kerala and Karnataka. Therefore, checkposts that will function 24/7 will be set up in Talapady, Nettanigemudnoor, Saradka, Jalsoor.
28-11-24 05:04 pm
Bangalore Correspondent
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 06:05 pm
Mangalore Correspondent
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm