ಪದ್ಮಶ್ರೀ ಹರೇಕಳ ಹಾಜಬ್ಬ‌ ಸೇರಿದಂತೆ ಮೂವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ 

29-06-21 07:19 pm       Mangaluru Correspondent   ಕರಾವಳಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ 2021ನೇ ಸಾಲಿನ “ಗೌರವ ಪ್ರಶಸ್ತಿ” ಮತ್ತು ಗೌರವ ಪುರಸ್ಕಾರಕ್ಕೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. 

ಮಂಗಳೂರು, ಜೂನ್ 29: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ 2021ನೇ ಸಾಲಿನ “ಗೌರವ ಪ್ರಶಸ್ತಿ” ಮತ್ತು ಗೌರವ ಪುರಸ್ಕಾರಕ್ಕೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. 

ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ, ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ, ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಮಂದಿ ಗಣ್ಯರನ್ನು ಅಕಾಡೆಮಿ 2021ರ ಸಾಲಿನ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಗೌರವ ಪ್ರಶಸ್ತಿಯು ರೂ.50,000/- ನಗದು (ಪ್ರಯಾಣ ವೆಚ್ಚ ಮತ್ತು ವಾಸ್ತವ್ಯ ವೆಚ್ಚಸೇರಿ) ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಪುರಸ್ಕಾರವು ರೂ.10000/- ನಗದು (ಪ್ರಯಾಣ ವೆಚ್ಚ ಮತ್ತು ವಾಸ್ತವ್ಯ ವೆಚ್ಚ ಸೇರಿ) ಶಾಲು, ಹಾರ, ಸ್ಮರಣಿಕೆ ಮತ್ತು ಪುರಸ್ಕಾರ ಪತ್ರಗಳನ್ನು ಒಳಗೊಂಡಿರುತ್ತದೆ. 

ಕೊರೊನಾದ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾದ ಬಳಿಕ, ಮುಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ದಿನಾಂಕವನ್ನು ನಿಗದಿಪಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಗೌರವ ಪ್ರಶಸ್ತಿ -2021

  1. ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ : ಹರೇಕಳ ಹಾಜಬ್ಬ
  2. ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ : ಹುಸೈನ್ ಕಾಟಿಪಳ್ಳ 
  3. ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ : ಡಾ.ಇ.ಕೆ.ಎ.ಸಿದ್ದೀಕ್ ಆಡ್ಡೂರು 

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪುರಸ್ಕಾರಕ್ಕೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.‌

ಗೌರವ ಪುರಸ್ಕಾರ 2021

  1. ಬ್ಯಾರಿ ಸಂಗೀತ ಕ್ಷೇತ್ರ : ಅಶ್ರಫ್ ಅಪೋಲೋ
  2. ಬ್ಯಾರಿ ಸಂಘಟನೆ ಕ್ಷೇತ್ರ : ಡಾ.ಕೆ.ಎ. ಮುನೀರ್ ಬಾವ
  3. ಬ್ಯಾರಿ ಮಹಿಳಾ ಸಾಧಕಿ: ಮರಿಯಮ್ ಫೌಝಿಯ ಬಿಯಸ್.
  4. ಬ್ಯಾರಿ ಯುವ ಪ್ರತಿಭೆ: ಬ್ಯಾರಿ ಝುಲ್ಫಿ
  5. ಬ್ಯಾರಿ ದಫ್ ಕ್ಷೇತ್ರ: ಮೊಹಮ್ಮದ್ ಬಶೀರ್ ಉಸ್ತಾದ್
  6. ಬ್ಯಾರಿ ಬಾಲ ಪ್ರತಿಭೆ: ಮೊಹಮ್ಮದ್ ಫರಾಝ್ ಆಲಿ

Nine Including Harekala Hajabba conferred Karnataka Beary Sahitya Academy Award in Mangalore.