ಬ್ರೇಕಿಂಗ್ ನ್ಯೂಸ್
30-06-21 04:26 pm Mangalore Correspondent ಕರಾವಳಿ
ಪುತ್ತೂರು, ಜೂನ್ 30: ಪೆಟ್ರೋಲಿಯಂ ಉತ್ಪನ್ನವಾದ ಫರ್ನೇಸ್ ಆಯಿಲನ್ನು ಟ್ಯಾಂಕರ್ ಗಳಿಂದ ಕಳವುಗೈದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದ ಪೊಲೀಸ್ ತಂಡ ಭೇದಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿಯ ಮಣ್ಣಗುಂಡಿ ಎಂಬಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಜಿ. ದಾಸ್, ಸಿಂಗರಾಜ್, ಎಸ್. ಕಾರ್ತಿ, ಹಾಗೂ ಸೆಲ್ವರಾಜ್ ಎಂದು ಗುರುತಿಸಲಾಗಿದೆ. ರಘುನಾಥನ್ ಮತ್ತು ಮುತ್ತುಪಾಂಡಿ ಎಂಬವರು ಈ ಜಾಲದ ಪ್ರಮುಖ ಆರೋಪಿಗಳಾಗಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರಿಂದ ಎರಡು ಟ್ಯಾಂಕುಗಳಲ್ಲಿದ್ದ ಸುಮಾರು 10,500 ಲೀಟರ್ ಫರ್ನೇಸ್ ಆಯಿಲ್, 2 ಟ್ಯಾಂಕರ್, 2 ಪಂಪ್ ಸೆಟ್, ಒಂದು ದ್ವಿಚಕ್ರ ವಾಹನ, 24,000 ರೂಪಾಯಿ ನಗದು, 5 ಮೊಬೈಲ್ ಸೇರಿದಂತೆ ಸುಮಾರು 35,21,400 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಫರ್ನೇಸ್ ಆಯಿಲ್ ಟ್ಯಾಂಕರ್ ಗಳ ಚಾಲಕರಿಗೆ ಹಣ ನೀಡಿ, ಟ್ಯಾಂಕರನ್ನು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಬರುವಂತೆ ಮಾಡಿ ಫರ್ನಿಶ್ ಆಯಿಲ್ ಕಳ್ಳತನ ಮಾಡುತ್ತಿದ್ದರು. ಪ್ರತಿ ಟ್ಯಾಂಕರ್ ನಿಂದ ಸುಮಾರು 50ರಿಂದ 200 ಲೀಟರ್ ವರೆಗೂ ಆಯಿಲ್ ಕದ್ದು ಅದನ್ನು ಭೂಗತ ಟ್ಯಾಂಕ್ ಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಬಳಿಕ ಅವುಗಳನ್ನು ತಮ್ಮದೇ ಆದ ಬೇರೆ ಟ್ಯಾಂಕರ್ ಗಳಲ್ಲಿ ತುಂಬಿಸಿ ಅಕ್ರಮವಾಗಿ ಚೆನ್ನೈಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಮುತ್ತುಪಾಂಡಿ ಮತ್ತು ರಘುನಾಥನ್ ಜಾಲದ ರೂವಾರಿಗಳಾಗಿದ್ದು ವ್ಯವಸ್ಥಿತವಾಗಿ ಟ್ಯಾಂಕರ್ ಮಾಲಕರಿಗೆ ತಿಳಿಯದಂತೆ ಲೂಟಿ ಮಾಡುತ್ತಿದ್ದರು.
Deputy superintendent of police, Dr Gana P Kumar along with some others, raided a spot at Mannagundi, Kaukrady village, Kadaba taluk, on Tuesday, June 29, and found that furnace oil was stolen illegally and stored there for resale without documents.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm