ಬ್ರೇಕಿಂಗ್ ನ್ಯೂಸ್
01-07-21 05:24 pm Mangalore Correspondent ಕರಾವಳಿ
ಮಂಗಳೂರು, ಜುಲೈ 1: ಜಮ್ಮು ವಾಯುನೆಲೆಯ ಮೇಲೆ ಡ್ರೋಣ್ ದಾಳಿಯ ಬೆನ್ನಲ್ಲೇ ದೇಶಾದ್ಯಂತ ಬಂದರು, ವಿಮಾನ ನಿಲ್ದಾಣ ಸೇರಿ ಪ್ರಮುಖ ಕೇಂದ್ರಗಳಲ್ಲಿ ಅಲರ್ಟ್ ಮಾಡಲಾಗಿದೆ. ಆದರೆ, ಫಕ್ಕನೆ ಡ್ರೋಣ್ ದಾಳಿಯಾದಲ್ಲಿ ಅದನ್ನು ನೇರವಾಗಿ ಎದುರಿಸಬಲ್ಲ ತಂತ್ರಜ್ಞಾನ ಎಲ್ಲ ಕಡೆಯೂ ಇಲ್ಲ. ಇದೇ ವೇಳೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಡ್ರೋಣ್ ದಾಳಿಯ ಅಪಾಯ ಎದುರಿಸಲು ಇಸ್ರೇಲ್ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ ನಡೆದಿದೆ. ಇದಕ್ಕಾಗಿ ಮಂಗಳೂರಿನ ಪೊಲೀಸ್ ಇಲಾಖೆ ಮತ್ತು ಏವಿಯೇಶನ್ ಮಿನಿಸ್ಟ್ರಿಯ ಏಜನ್ಸಿ ಜೊತೆಗೆ ಮಾತುಕತೆ ನಡೆಸಲಾಗಿದೆ.
ವಿಮಾನ ನಿಲ್ದಾಣ ಆವರಣದಲ್ಲಿ ಡ್ರೋಣ್ ಇನ್ನಿತರ ಯಾವುದೇ ರೀತಿಯ ಹಾರಾಟ ನಡೆಸುವಂತಿಲ್ಲ ಎಂಬ ಕಾನೂನಿದೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ವರ್ಷದಲ್ಲಿ ಎರಡು ಬಾರಿ ಡ್ರೋಣ್ ರೀತಿಯ ವಸ್ತುಗಳು ಪತ್ತೆಯಾಗಿ ಆತಂಕ ಮೂಡಿಸಿರುವುದು ಪೊಲೀಸರಿಗೆ ಸವಾಲಾಗಿದೆ. ವರ್ಷದ ಹಿಂದೆ ಹೆಲಿಕಾಪ್ಟರ್ ರೀತಿಯ ಆಟಿಕೆ ವಸ್ತುವೊಂದು ಹಾರಾಟ ನಡೆಸಿದ್ದು, ಆತಂಕ ಸೃಷ್ಟಿಸಿತ್ತು. ಬಳಿಕ ಸಿಐಎಸ್ಎಫ್ ಭದ್ರತಾ ಪಡೆ ನಿಲ್ದಾಣದ ಆವರಣದಲ್ಲಿ ಕೂಲಂಕುಷ ತಪಾಸಣೆ ನಡೆಸಿತ್ತು. ಇತ್ತೀಚೆಗೆ ಮತ್ತೊಮ್ಮೆ ಡ್ರೋಣ್ ಮಾದರಿಯ ವಸ್ತು ಹಾರಾಟ ನಡೆಸಿದ್ದು, ಅದನ್ನು ಭದ್ರತಾ ಪಡೆ ವಶಕ್ಕೆ ಪಡೆದಿತ್ತು.
ಡ್ರೋಣ್ ಅಥವಾ ಇನ್ನಿತರ ಸಾಧಾರಣ ಗಾತ್ರದ ವಸ್ತುಗಳು ವಿಮಾನ ಟೇಕಾಫ್ ಅಥವಾ ಲ್ಯಾಂಡ್ ಆಗುವ ಸನ್ನಿವೇಶದಲ್ಲಿ ವಿಮಾನಕ್ಕೆ ಡಿಕ್ಕಿಯಾದಲ್ಲಿ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಭಯೋತ್ಪಾದಕರು ಇದನ್ನೇ ಅಸ್ತ್ರವಾಗಿಸ್ಕೊಂಡು ಡ್ರೋಣ್ ದಾಳಿ ನಡೆಸುವ ಅಪಾಯವನ್ನರಿತ ಭದ್ರತಾ ಪಡೆ ಯಾವುದೇ ಅಹಿತಕರ ವಸ್ತುವಿನ ಹಾರಾಟ ಕಂಡುಬಂದ ಕೂಡಲೇ ನಾಶ ಪಡಿಸುವ ತಂತ್ರಜ್ಞಾನದ ಅಗತ್ಯ ಇರುವ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿತ್ತು. ಇದಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರದಡಿ ತಂತ್ರಜ್ಞಾನ ಅಳವಡಿಸುವ ಬಿಎಸಿಎಸ್ ಎನ್ನುವ ಸಂಸ್ಥೆ ಇದೀಗ ಮಂಗಳೂರಿನಲ್ಲಿ ಇಸ್ರೇಲ್ ಟೆಕ್ನಾಲಜಿ ಅಳವಡಿಸಲು ಮುಂದಾಗಿದೆ.
ಏನಿದು ಇಸ್ರೇಲ್ ಟೆಕ್ನಾಲಜಿ
ಇಸ್ರೇಲ್ ನಲ್ಲಿ ರಾಡಾರ್ ಕನೆಕ್ಟೆಡ್ ಆಗಿ ಏಂಟಿ ಮಿಸೈಲ್ ಸಿಸ್ಟಮ್ ಇದೆ. ಯಾವುದೇ ಡ್ರೋಣ್ ಆಗಲೀ, ವಿರೋಧಿ ರಾಷ್ಟ್ರಗಳ ಕಡೆಯಿಂದ ತೂರಿ ಬರುವ ಕ್ಷಿಪಣಿ ಆಗಲೀ ದೇಶದ ವಾತಾವರಣ ಪ್ರವೇಶ ಮಾಡಿದ ಕೂಡಲೇ ಆಟೊಮೆಟಿಕ್ ಆಗಿ ಉಡಾಯಿಸಬಲ್ಲ ತಂತ್ರಜ್ಞಾನ ಇಸ್ರೇಲ್ ನಲ್ಲಿದೆ. ಇತ್ತೀಚೆಗೆ ಜೆರುಸಲೇಂ ಕಡೆಯಿಂದ ತೂರಿ ಬಂದ ಕ್ಷಿಪಣಿಗಳು ಅಷ್ಟೇ ವೇಗದಲ್ಲಿ ಪಟಾಕಿ ಒಡೆದು ಹೋದ ರೀತಿ ಢಾಂ ಢೂಂ ಆಗಿ ಠುಸ್ಸಾಗಿದ್ದ ವಿಡಿಯೋ ವೈರಲ್ ಆಗಿತ್ತು. ಅದು ಇಸ್ರೇಲಿನ ರಾಡಾರ್ ತಂತ್ರಜ್ಞಾನದ ಅದ್ಭುತ ದುಡಿಮೆಯ ಪ್ರತೀಕವಾಗಿತ್ತು.
ಅದೇ ರೀತಿಯಲ್ಲಿ ವಿಮಾನ ನಿಲ್ದಾಣ, ಬಂದರು ಆವರಣದಲ್ಲಿ ಯಾವುದೇ ವಸ್ತುಗಳು ಪರ್ಯಾವರಣದಲ್ಲಿ ಹಾರಿಬಂದ ಕೂಡಲೇ ಅವನ್ನು ತನ್ನಿಂದ ತಾನೇ ಸ್ಫೋಟಿಸಬಲ್ಲ ಅಥವಾ ನಿಷ್ಕ್ರಿಯಗೊಳಿಸಬಲ್ಲ ತಂತ್ರಜ್ಞಾನವೂ ಇದೆ. ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಅಳವಡಿಸಿರುವ ಈ ರೀತಿಯ ಇಸ್ರೇಲ್ ಮೂಲದ ತಂತ್ರಜ್ಞಾನವನ್ನು ಭಯೋತ್ಪಾದಕರ ಸುಲಭ ಗುರಿಯಾಗಿರುವ ಮಂಗಳೂರಿನ ವಿಮಾನ ನಿಲ್ದಾಣಕ್ಕೂ ಅಳವಡಿಕೆ ಮಾಡುವ ಚಿಂತನೆಯಿದೆ. ಅಲ್ಲದೆ, ರಾಡಾರ್ ತಂತ್ರಜ್ಞಾನ ಬಳಸ್ಕೊಂಡು ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ನಿಷ್ಕ್ರಿಯಗೊಳಿಸುವುದಕ್ಕೂ ಸಾಧ್ಯವಿದೆ.
ಇದೀಗ ವಿಮಾನ ಸಚಿವಾಲಯದಡಿ ಭದ್ರತಾ ಕೆಲಸಗಳನ್ನು ನಿರ್ವಹಿಸುವ ಬ್ಯೂರೋ ಆಫ್ ಸಿವಿಲ್ ಏವಿಯೇಶನ್ ಸೆಕ್ಯುರಿಟಿ ಏಜನ್ಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆಯ ಬಗ್ಗೆ ಕಣ್ಣಿರಿಸಲು ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಮಂಗಳೂರಿನಲ್ಲಿ ಎನ್ಎಂಪಿಟಿ ಬಂದರು, ಎಸ್ಇಝೆಡ್, ಎಂಆರ್ ಪಿಎಲ್, ವಿಮಾನ ನಿಲ್ದಾಣ ಹೀಗೆ ಹಲವಾರು ಮುಂಚೂಣಿ ನೆಲೆಗಳು ಇರುವ ಹಿನ್ನೆಲೆಯಲ್ಲಿ ಇಲ್ಲಿ ಯಾವ ರೀತಿಯ ತಂತ್ರಜ್ಞಾನದ ಅಗತ್ಯವಿದೆ ಎನ್ನುವ ಬಗ್ಗೆ ಏಜನ್ಸಿಯೇ ನಿರ್ಧರಿಸಲಿದೆ. ಈ ಬಗ್ಗೆ ಈಗಾಗ್ಲೇ ಇಸ್ರೇಲ್ ತಂತ್ರಜ್ಞಾನ ಅಳವಡಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಹೆಡ್ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಎಲ್ಲವೂ ಅಂದುಕೊಂಡ ರೀತಿಯಲ್ಲೇ ನಡೆದಲ್ಲಿ ಆದಷ್ಟು ಬೇಗನೇ ಇಸ್ರೇಲ್ ಟೆಕ್ನಾಲಜಿ ಮಂಗಳೂರಿನ ವಿಮಾನ ನಿಲ್ದಾಣಕ್ಕಂತೂ ಬರಲಿದೆ. ಇದರ ಜೊತೆಗೆ ಯಾವುದೇ ರೀತಿಯ ಡ್ರೋಣ್ ಹಾರಾಟ ನಡೆಸುವುದಕ್ಕೂ ಏವಿಯೇಶನ್ ಮಿನಿಸ್ಟ್ರಿಯಿಂದ ಅನುಮತಿ ಪಡೆದಿರಬೇಕು ಎನ್ನುವ ಷರತ್ತನ್ನೂ ವಿಧಿಸಲಾಗಿದೆ. ಅಲ್ಲದೆ, ಡ್ರೋಣ್ ಹಾರಾಟ ಮಾಡುವವರು ಪೈಲಟ್ ತರಬೇತಿ ಪಡೆದಿರುವ ಬಗ್ಗೆ ಐಡಿಯನ್ನೂ ಹೊಂದಿರಬೇಕಾಗಿದೆ. ಮದುವೆ ಇನ್ನಿತರ ಉದ್ದೇಶಕ್ಕೂ ಡ್ರೋಣ್ ಹಾರಿಸುವುದಿದ್ದರೂ ಆಯಾ ಭಾಗದ ಪೊಲೀಸರ ಗಮನಕ್ಕೆ ತಂದಿರಬೇಕು ಅನ್ನುವ ನಿಯಮವನ್ನು ತರಲಾಗಿದೆ.
Video:
Mangalore Airport and Surroundings on High alert after drone attack in Jammu. Flying drones without permission is restricted. DCP Hariram Shankar talks exclusively about high alert in Mangalore.
05-02-25 12:29 pm
Bangalore Correspondent
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am