ಬ್ರೇಕಿಂಗ್ ನ್ಯೂಸ್
02-07-21 10:03 pm Mangaluru Correspondent ಕರಾವಳಿ
ಉಳ್ಳಾಲ, ಜು.2: ಮುಸ್ಲಿಂ ಶಾಸಕ ಯು.ಟಿ.ಖಾದರ್ ಅವರು ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ಅಳವಡಿಸಲು ಇನ್ಪೋಸಿಸ್ ನಂತಹ ಅಂತರಾಷ್ಟ್ರೀಯ ಕಂಪೆನಿಯಿಂದ ಒಂದೂವರೆ ಕೋಟಿ ಅನುದಾನ ತಂದುದರ ವಿರುದ್ಧ ಭೂಕಬಳಿಕೆ ಸ್ವರೂಪ ನೀಡುವುದು ಸಲ್ಲದೆಂದು ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ್ ಉಳ್ಳಾಲ್ ಹೇಳಿದ್ದಾರೆ.
ತೊಕ್ಕೊಟ್ಟಿನಲ್ಲಿ ಪತ್ರಿಕಾಗೋಷ್ಟಿ ಕರೆದು ಅವರು ಮಾತನಾಡಿದರು. ಯು.ಟಿ.ಖಾದರ್ ಅವರು ತಾನೊಬ್ಬ ಮುಸ್ಲಿಮನಾದರೂ ಸಹ ಬಹಳ ಮುತುವರ್ಜಿ ವಹಿಸಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್ಫೋಸಿಸ್ ಕಂಪನಿಯಿಂದ ಒಂದೂವರೆ ಕೋಟಿ ಅನುದಾನ ತಂದಿದ್ದಾರೆ. ಆದರೆ ಕೆಲವರು ಷಡ್ಯಂತರ ನಡೆಸಿ ಭೂಕಬಳಿಕೆ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಇರುವ ಒಂದೂವರೆ ಕೋಟಿ ಅನುದಾನದಲ್ಲಿ ಈಗಿರುವ ಕಟ್ಟಿಗೆಯ ಚಿತಾಗಾರದ ಬಳಿಯಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲು ಸಾಧ್ಯ ,ಹತ್ತಿರದ ಶವ ಹೂಳುವ 45 ಸೆಂಟ್ಸ್ ಜಾಗದಲ್ಲಿ ನಿರ್ಮಿಸೋದಾದರೆ 50 ಲಕ್ಷ ಹೆಚ್ಚು ಹಣ ಬೇಕೆಂದು ಕಂಪನಿ ಪ್ರಮುಖರು ಹೇಳಿದ್ದಾರೆ. ಉಳ್ಳಾಲದ ಇತಿಹಾಸದಲ್ಲೇ ಯಾರೊಬ್ಬ ನಾಯಕರೂ ರುದ್ರಭೂಮಿಗೆ ಇಷ್ಟೊಂದು ದೊಡ್ಡ ಅನುದಾನ ತಂದಿಲ್ಲ. ಆದರೂ ಭೂಕಬಳಿಕೆ ಎಂದು ಗುಳ್ಳೆಬ್ಬಿಸಿ ಶಾಸಕ ಯು.ಟಿ.ಖಾದರ್ ಅವರನ್ನು ಎತ್ತಿ ಕಟ್ಟುತ್ತಿರುವುದು ಸರಿಯಲ್ಲ. ಬದಲಾವಣೆ ಬೇಕಿದ್ದರೆ ಶಾಸಕರೊಂದಿಗೆ ಮಾತನಾಡಲಿ, ಅದು ಬಿಟ್ಟು ಈ ರೀತಿ ಅಪಪ್ರಚಾರ ಮಾಡೋದನ್ನ ನಿಲ್ಲಿಸಲಿ ಎಂದರು.
ಮುಖಂಡರಾದ ಸುರೇಶ್ ಭಟ್ನಗರ ಮಾತನಾಡಿ ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಗೆ ಅನೇಕ ವರುಷಗಳ ಇತಿಹಾಸವಿದೆ. ಇನ್ನು ಇದನ್ನ ಕಬಳಿಸೋ ಪ್ರಶ್ನೆ ಎಲ್ಲಿಂದ ಬರುತ್ತೆ. ಇನ್ಫೋಸಿಸ್ ನಿಂದ ವಿದ್ಯುತ್ ಚಿತಾಗಾರ ನಿರ್ಮಾಣವಾಗೋ ವಿಚಾರವನ್ನ ಸ್ಮಶಾನದ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅವರಲ್ಲಿ ಹೇಳಿದಾಗ ಅವರೂ ಆ ಯೋಜನೆಯನ್ನ ಪ್ರಶಂಸಿಸಿದ್ದಾರೆ. ಪ್ರಸ್ತುತ ಸ್ಮಶಾನದಲ್ಲಿ ಶವ ಸುಡಲು ಸುಮಾರು 4000 ರೂಪಾಯಿ ಖರ್ಚು ತಗಲುತ್ತಿದ್ದು, ಕೇವಲ 200 ರೂಪಾಯಿ ಖರ್ಚಲ್ಲಿ ಜನರು ಶವ ಸುಡುವಂತಾಗಲಿ ಎಂಬ ಸದುದ್ದೇಶದಿಂದ ಯು.ಟಿ.ಖಾದರ್ ಅವರು ಈ ಯೋಜನೆಯನ್ನ ತಂದಿದ್ದಾರೆ. ಸುಖಾಸುಮ್ಮನೆ ಸ್ಮಶಾನದ ಜಾಗ ಕಬಳಿಸುತ್ತಿದ್ದಾರೆ ಎಂದು ಷಡ್ಯಂತರದಿಂದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು. ಚೆಂಬುಗುಡ್ಡೆ ಪ್ರದೇಶ ಎತ್ತರ ಇರೋದರಿಂದ ಸ್ಮಶಾನಕ್ಕೆ ಕಾಯ್ದಿರಿಸಿದ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಲಾಯಿತು. ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಸಿಗಬೇಕೆಂಬ ಸದುದ್ದೇಶದಿಂದ ಶಾಸಕರು ಈ ಕಾಮಗಾರಿ ನಡೆಸಿದರೂ ಅದಕ್ಕೂ ಸ್ಮಶಾನದ ಜಾಗ ಮಾರಾಟ ನಡೆಸಿದ್ದಾರೆಂದು ಅಪಪ್ರಚಾರ ನಡೆಸಿದರು. ಶಾಸಕ ಯು.ಟಿ ಖಾದರ್ ಅವರಿಂದ ಹಿಂದೂಗಳಿಗೆ ಎಂದಿಗೂ ಅನ್ಯಾಯವಾಗಿಲ್ಲ ಎಂದರು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ, ಸದಸ್ಯರಾದ ಶಶಿಕಲಾ, ಪ್ರಮುಖರಾದ ದೀಪಕ್ ಪಿಲಾರ್, ನಾಗೇಶ್ ಶೆಟ್ಟಿ, ವಸಂತ್ ಭಟ್ನಗರ, ಕಿಶೋರ್ ಮೊದಲಾದವರು ಇದ್ದರು.
Ullal Ishwar Ullal appreciates MLA UT Khaders efforts for Chembugudde Electric Crematorium implementation
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm