ಬ್ರೇಕಿಂಗ್ ನ್ಯೂಸ್
04-07-21 07:27 pm Richard, Mangaluru Correspondent ಕರಾವಳಿ
ಕಾರವಾರ, ಜುಲೈ 4: ಅಕ್ರಮವಾಗಿ ಭಟ್ಕಳದಲ್ಲಿ ವಾಸವಿದ್ದ ಪಾಕಿಸ್ತಾನ ಮೂಲದ ಮಹಿಳೆಗೆ ಭಾರತೀಯ ದಾಖಲೆಗಳನ್ನು ಮಾಡಿಕೊಂಡ ಬಗ್ಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.
2015ರಿಂದ ಅಕ್ರಮವಾಗಿ ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯಲ್ಲಿ ನೆಲೆಸಿದ್ದ ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ (32) ಎಂಬಾಕೆಯನ್ನು ಪೊಲೀಸರು ಜೂನ್ 9ರಂದು ಬಂಧಿಸಿದ್ದರು. ಪಾಕಿಸ್ತಾನದ ಪೌರತ್ವ ಹೊಂದಿದ್ದ ಈಕೆ, ಭಟ್ಕಳದ ಯುವಕನನ್ನು ಮದುವೆಯಾಗಿ ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ ಬಂದು ನೆಲೆಸಿದ್ದಳು.
ನವಾಯತ್ ಕಾಲೋನಿಯ ಜಾವೀದ್ ಮೊಹಿದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದ ಮಹಿಳೆ, 2014ರಲ್ಲಿ 3 ತಿಂಗಳ ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದಳು. ಆಬಳಿಕ 2016ರಲ್ಲಿ ಕಳ್ಳ ಮಾರ್ಗವಾಗಿ ಭಾರತಕ್ಕೆ ನುಸುಳಿ ಬಂದಿದ್ದು ನವಾಯತ ಕಾಲೋನಿಯಲ್ಲಿ ವಾಸವಾಗಿದ್ದಳು ಎನ್ನಲಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿ, ಬಂಧಿಸಿದ್ದರು. ಈಕೆ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಳು ಎಂಬುದು ಪೊಲೀಸರ ದಾಳಿಯಲ್ಲಿ ತಿಳಿದುಬಂದಿತ್ತು. ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದಲ್ಲಿ ಭಾರತದ ಪೌರತ್ವ ಪಡೆಯದಿದ್ದರೂ ಹೇಗೆ ಭಾರತೀಯ ದಾಖಲೆಗಳನ್ನು ಪಡೆದುಕೊಂಡಳು ಎಂಬ ಬಗ್ಗೆ ತನಿಖೆಗೆ ಇಳಿದ ಪೊಲೀಸರಿಗೆ ಅಚ್ಚರಿಯ ಮಾಹಿತಿಗಳು ಲಭಿಸಿವೆ. ಮಹಿಳೆ ಬಳಿ ಇದ್ದ ಆಧಾರ್ ಕಾರ್ಡ್‌ನಲ್ಲಿ ಭಟ್ಕಳದ ವಿಳಾಸವಿದ್ದರೆ, ಚುನಾವಣಾ ಗುರುತಿನ ಚೀಟಿ ಹೈದರಾಬಾದ್ ವಿಳಾಸದಲ್ಲಿದೆ. ರೇಷನ್ ಕಾರ್ಡ್ ಬೆಂಗಳೂರು ವಿಳಾಸದ್ದಾಗಿತ್ತು. ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಬೇರೆ ಬೇರೆ ಕಡೆಗಳ ವಿಳಾಸ ನೀಡಿ ಈ ದಾಖಲೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನಲಾಗಿದ್ದು, ಮೂರೂ ದಾಖಲೆಗಳನ್ನು ಪೌರತ್ವವೇ ಇಲ್ಲದ ಮೇಲೆ ಹೇಗೆ ಮಾಡಲಾಗಿತ್ತು ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಇದರ ಹಿಂದೆ ವ್ಯವಸ್ಥಿತ ಜಾಲ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆಗೆ ಇಳಿದಿದ್ದಾರೆ.
ಪಾಕಿಸ್ತಾನಿ ಮಹಿಳೆಗೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಟ್ಟ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪೌರತ್ವ ಪಡೆಯದೇ ಇತರ ದಾಖಲೆಗಳನ್ನು ಪಡೆದುಕೊಂಡಿರುವುದು ಕ್ರಿಮಿನಲ್ ಅಪರಾಧ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
Karnataka Police has arrested a Pakistani national who has been staying illegally with her husband and three children at Bhatkal in Uttara Kannada district since 2015. Police arrested Khadija Mehrin (33), who had married Mohiddin Rukkuddin from Bhatkal in 2014 in Dubai. Mehrin has been remanded in judicial custody, Bhatkal police informed on Thursday. police share shocking information on this case.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 10:11 pm
Mangalore Correspondent
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm