ಬ್ರೇಕಿಂಗ್ ನ್ಯೂಸ್
05-07-21 07:10 pm Mangaluru Correspondent ಕರಾವಳಿ
ಮಂಗಳೂರು, ಜುಲೈ 5: ಮೇಕೆದಾಟು ಮಹತ್ವದ ಯೋಜನೆಯಾಗಿದ್ದು ನಮ್ಮ ಕಾಲದಲ್ಲಿ ಡಿಪಿಆರ್ ಮಾಡಿ, ಯೋಜನೆ ತಯಾರಿಸಿದ್ದೆವು. ಅದಕ್ಕೀಗ ಎನ್ ಜಿಟಿಯಿಂದಲೂ ಕ್ಲಿಯರೆನ್ಸ್ ಸಿಕ್ಕಿದೆ. ಆದರೆ, ತಮ್ಮದು ಡಬಲ್ ಇಂಜಿನ್ ಸರಕಾರ ಎನ್ನುತ್ತಿದ್ದ ಯಡಿಯೂರಪ್ಪ ಈಗ ತಮಿಳುನಾಡಿನ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಕೋಳಿ ಕೇಳಿಬಿಟ್ಟು ಮಸಾಲೆ ಅರೆಯುವ ಅಗತ್ಯ ಇಲ್ಲ. ಯಡಿಯೂರಪ್ಪ ಈಗ ತಮ್ಮ ಡಬಲ್ ಇಂಜಿನ್ ತಾಕತ್ತನ್ನು ತೋರಿಸಬೇಕು, ನಾವು ಪಕ್ಷಾತೀತವಾಗಿ ಬೆಂಬಲ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಮೇಕೆದಾಟು ನಮ್ಮ ಯೋಜನೆ. ನಮ್ಮ ರಾಜ್ಯದಲ್ಲೇ ನಡೆಯುವ ಯೋಜನೆ. ನಮ್ಮದೇ ಹಣದಲ್ಲಿ ನಡೆಸುತ್ತಿರುವ ಯೋಜನೆ. ಎನ್ ಜಿಟಿ ಕೋರ್ಟ್ ಕೂಡ, ಇದೇ ಮಾತನ್ನು ಹೇಳಿದ್ದು, ನಿಮ್ಮದೇ ರಾಜ್ಯದಲ್ಲಿ ಕಾಮಗಾರಿ ನಡೆಸುತ್ತಿರಬೇಕಾದ್ರೆ ಯಾವುದೇ ಆಕ್ಷೇಪ ಬೇಕಾಗಿಲ್ಲ ಎಂದು. ಆದರೆ, ಇಷ್ಟೆಲ್ಲ ಕ್ಲಿಯರೆನ್ಸ್ ಇದ್ದರೂ ಯಡಿಯೂರಪ್ಪ ತಮಿಳುನಾಡಿಗೆ ಹೋಗಿ, ಅಲ್ಲಿನ ಸಿಎಂ ಬಳಿ ಮಾತುಕತೆಗೆ ಹೋಗಿದ್ದಾರೆ. ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ, ಡಿಎಂಕೆ ಎಲ್ಲಾ ಒಂದೇ. ಅವರ ರಾಜ್ಯದ ವಿಚಾರ ಬಂದಾಗ ಎಲ್ಲದಕ್ಕೂ ಒಂದಾಗುತ್ತಾರೆ. ಅವರು ನಮ್ಮ ಮಾತನ್ನು ಕೇಳೋದಿಲ್ಲ.
ಹಾಗೆಂದು ತಮಿಳುನಾಡಿಗೆ ನೀರು ಬಿಡುವುದರಲ್ಲಿ ನಮ್ಮ ಆಕ್ಷೇಪ ಇಲ್ಲ. ಕೆಆರ್ ಎಸ್ ನಲ್ಲಿ ಎಷ್ಟು ನೀರು ಬಿಡಲಾಗುತ್ತದೆಯೋ ಅದನ್ನು ಬಿಡಲಾಗುತ್ತದೆ. ಅದರಲ್ಲಿ ಚೌಕಾಸಿ ಮಾಡಲ್ಲ. ಈಗ ಬೆಂಗಳೂರು ನಗರದ ಕುಡಿಯುವ ನೀರಿಗಾಗಿ ಮೇಕೆದಾಟು ಮಾಡಲು ಹೊರಟಿದ್ದು. ಅದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಯೋಜನೆಗೆ ನಾನು ಕಳೆದ ಬಾರಿ ನೀರಾವರಿ ಸಚಿವನಾಗಿದ್ದಾಗ ಪ್ಲಾನ್ ರೆಡಿ ಮಾಡಿದ್ದೆವು. ಮೇಕೆದಾಟು ಯೋಜನೆಯಲ್ಲಿ ಜಾಗ ಮುಳುಗುವುದೂ 95 ಶೇಕಡಾ ನನ್ನ ಕ್ಷೇತ್ರದ್ದೇ ಎಂದು ಹೇಳಿದರು ಡಿಕೆಶಿ.
ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಒಂದಷ್ಟು ಮಂದಿಯನ್ನು ತಗೊಂಡು ಡಬಲ್ ಇಂಜಿನ್ ಸರಕಾರ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದರೆ ಲಾಭ ಇದೆ ಅಂತಾ ಹೇಳ್ಕಂಡಿದ್ರು. ಈಗ ತಾಕತ್ತು ತೋರಿಸಲಿ. ಯಡಿಯೂರಪ್ಪ ರಾಜಕೀಯ ಬದ್ಧತೆ ತೋರಿಸಬೇಕು, ನಾವು ಪಕ್ಷಾತೀತವಾಗಿ ಬೆಂಬಲ ಕೊಡುತ್ತೀವಿ, ನಮ್ಮ ನೀರು, ನಾವು ಅಣೆಕಟ್ಟು ಕಟ್ಟಿಕೊಳ್ಳಲು ಯಾರ ಪರ್ಮಿಶನ್ ಕೂಡ ಬೇಕಾಗಿಲ್ಲ. ಇದರಲ್ಲಿ ಏನಾದ್ರೂ ತೊಡಕು ಬಂದ್ರೆ ನಿಮ್ಮ ಪಿಎಂ ಇದ್ದಾರಲ್ಲಾ, ಮಾತಾಡ್ಕೊಂಡು ಕೆಲಸ ಮಾಡಿಸಿ ಎಂದು ಕುಟುಕಿದರು ಡಿಕೆಶಿ.
ಬಿಜೆಪಿಯವ್ರಿಂದ ಕರಾವಳಿ ಜನರಿಗೆ ಮೋಸ
ನಾನು ಕರಾವಳಿಯಲ್ಲಿ ಜೀವನಾಡಿಯಾಗಿರುವ, ಈ ಭಾಗದ ಮುಖ್ಯ ಆರ್ಥಿಕ ಚಟುವಟಿಕೆಯ ಕೇಂದ್ರ ಆಗಿರುವ ಮೊಗವೀರ ಸಮುದಾಯದ ಜನರ ಸಮಸ್ಯೆ ಆಲಿಸಲು ಬಂದಿದ್ದೇನೆ. ಅವರ ಅಳಲು ಕೇಳಿದರೆ, ಈ ಬಿಜೆಪಿಯವರು ಇಷ್ಟೆಲ್ಲಾ ಶಾಸಕರು, ಸಂಸದರನ್ನು ಗೆದ್ದು ಏನು ಮಾಡಿದ್ದಾರೆ ಅಂತ ಕೇಳಬೇಕಾಗುತ್ತದೆ. ಅವರಿಗೆ ಸರಿಯಾದ ಸಬ್ಸಿಡಿಯೂ ಸಿಗುತ್ತಾ ಇಲ್ಲ. ಮೀನುಗಾರರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ಸೇರ್ಪಡೆ ಮಾಡಿಯೂ ಇಲ್ಲ. ಕೇರಳ, ಗೋವಾದಲ್ಲಿ ಇರುವಂತೆ ಸಿಆರ್ ಝೆಡ್ ಕಾನೂನನ್ನೂ ಸಡಿಲಿಕೆ ಮಾಡಿಲ್ಲ. ಈ ಭಾಗದ ಜನರ ಸಮಸ್ಯೆ ಆಲಿಸುವ ಕೆಲಸವನ್ನೂ ಮಾಡಿಲ್ಲ. ನಾವು ಕಾಂಗ್ರೆಸ್ ಪರವಾಗಿ ಹೇಳುತ್ತಿದ್ದೇವೆ. ಮೊಗವೀರರು ಮತ್ತು ಈ ಭಾಗದ ಎಲ್ಲ ಜನರ ಪರವಾಗಿ ನಿಲ್ಲುತ್ತೇವೆ. ರಾಜಕೀಯ ಕಾರಣಕ್ಕಾಗಿ ಅಲ್ಲ. ಇಲ್ಲಿನ ಜನರ ಸಮಸ್ಯೆ ನೀಗಿಸುವುದಕ್ಕಾಗಿ ಹೇಳುತ್ತೇನೆ ಎಂದರು ಡಿಕೆಶಿ.
KPCC President DK Shivakumar Slammed BJP Governemmt for not taking any care towards Fishermen Community. He also adds let Karnataka CM show his double engine power during the press meet held in Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm