ಡಬಲ್ ಇಂಜಿನ್ ಸರ್ಕಾರ ಇದ್ದು ಒಳ್ಳೆ ಆಡಳಿತ ಕೊಡೋಕೆ ಆಗಿಲ್ಲಾಂದ್ರೆ ಯಾಕಿರಬೇಕ್ರೀ ? ಡಿಕೆಶಿ ಪ್ರಶ್ನೆ

23-07-21 02:14 pm       Mangalore Correspondent   ಕರಾವಳಿ

 ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇದ್ದರೂ ಒಳ್ಳೆ‌ ಸರ್ಕಾರ ಕೊಡೋಕೆ ಆಗಿಲ್ಲ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಮಂಗಳೂರು, ಜುಲೈ 23: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇದ್ದರೂ ಒಳ್ಳೆ‌ ಸರ್ಕಾರ ಕೊಡೋಕೆ ಆಗಿಲ್ಲ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ.‌ ಡಬಲ್ ಇಂಜಿನ್ ಸರ್ಕಾರ ಇದ್ರು ಒಳ್ಳೆ ಆಡಳಿತ ಸಾಧ್ಯವಾಗಿಲ್ಲ ಅಂದ್ರ ಇವ್ರು ಆಡಳಿತದಲ್ಲಿ ಯಾಕಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. 

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವರ ಸರ್ಕಾರಕ್ಕೆ ಗೌರವ ಎಲ್ಲಿದೆ. ಅವರಲ್ಲಿ ಎಷ್ಟೇ ಮುಖ್ಯಮಂತ್ರಿ ಚೇಂಜ್ ಆದ್ರು ಅವರ ಪಕ್ಷದ ಬಗ್ಗೆ ಮಾತಾಡೋಕೆ ಏನಿದೆ ? ಆದರೆ ರಾಜ್ಯದ ಆಡಳಿತ ವ್ಯವಸ್ಥೆಯ ಕಥೆಯೇನು ಎನ್ನೋದು ಚಿಂತೆಯಾಗಿದೆ.‌ ಯಾವ ಅಧಿಕಾರಿಗಳು ಇವರ ಮಾತು ಕೇಳ್ತಾರೆ ಎಂದು ಮೂದಲಿಸಿದರು. 

ಸಿಎಂ ಎದ್ದು ಹೋಗುವ ಸಂದರ್ಭದಲ್ಲಿ ತರಾತುರಿಯಲ್ಲಿ ಎಲ್ಲಾ ಫೈಲ್ ಗಳ ಸಹಿ ಆಗ್ತಿದೆ. ಅದರಲ್ಲು ನೀರಾವರಿ ಇಲಾಖೆಯಲ್ಲಿ ಎಷ್ಟೋ ಫೈಲ್ ಕ್ಲಿಯರ್ ಆಗ್ತಿದೆ. ಅಸೆಂಬ್ಲಿ ಬಂದಾಗ ದಾಖಲೆಯೆಲ್ಲ ತೆಗೆದು ಮಾತಾಡ್ತೇನೆ ಎಂದು ಹೇಳಿದ ಡಿಕೆಶಿ, ಕಾಂಗ್ರೆಸ್ ಸೇರೋರನ್ನು ಸೇರಿಸ್ತೀರಾ ಎಂಬ ಪ್ರಶ್ನೆಗೆ ಯಾರಾದರೂ ಕಾಂಗ್ರೆಸ್ ಬರೋರಿದ್ರೆ ಅರ್ಜಿ ಸಲ್ಲಿಸಲಿ. ಆಮೇಲೆ ಕೂತು ಮಾತಾನಾಡೋಣ. ಕಾಂಗ್ರೆಸ್ ಪಾರ್ಟಿಗೆ ಬರಬೇಕು ಅಂತಾ ಇಷ್ಟ ಇರೋರು ಬಹಳಷ್ಟು ಜನ ಇದ್ದಾರೆ. ಅವರ ಹೆಸರು ಹೇಳೋದಕ್ಕೆ ಹೋಗಲ್ಲ ಎಂದರು. 

ಚುನಾವಣೆ ಟೈಮಲ್ಲಿ ಹೋಗಿ ಮಾತಾನಾಡಿಸಿದಕ್ಕೆ ಈಗ ಮಠಾಧೀಶರು ಬಂದಿದ್ದಾರೆ.‌ ನೀವೆ ಹೋಗಿಲ್ಲ ಅಂದ್ರೆ ಹೇಗೆ ಬರ್ತಿದ್ರು ? ಅವರ ಅಭಿಪ್ರಾಯ ಅವರು ಹೇಳ್ತಾ ಇದ್ದಾರೆ. ಅವರದು ತಪ್ಪುಅಂತಾ ನಾನು ಹೇಳ್ತಿಲ್ಲ ಎಂದರು ಡಿಕೆಶಿ.


Even with BJPs double engine govt they couldn't give good governance in Karnataka slams DK Shivakumar in Mangalore. DKS came last night to Visit Former Union minister Oscar Fernandes who has been admitted to the hospital also spoke today about the recent development In BJP party.