ಬ್ರೇಕಿಂಗ್ ನ್ಯೂಸ್
04-08-21 05:59 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 4: ಉಳ್ಳಾಲದ ಮಾಜಿ ಶಾಸಕ, ಕವಿ ಹೃದಯಿ ದಿವಂಗತ ಬಿ.ಎಂ. ಇದಿನಬ್ಬ ಹೆಸರು ಮತ್ತೆ ಸುದ್ದಿಗೆ ಬಂದಿದೆ. ಐದಾರು ವರ್ಷಗಳ ಹಿಂದೆ ಅವರ ಮರಿ ಮಗಳು ಕೇರಳದಲ್ಲಿ ನಾಪತ್ತೆಯಾಗಿದ್ದು, ಆಬಳಿಕ ಐಸಿಸ್ ಸೇರಿದ್ದಾರೆಂಬ ಸುದ್ದಿಯಿಂದಾಗಿ ಇದಿನಬ್ಬ ಹೆಸರು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಇದಿನಬ್ಬ ಕುಟುಂಬದ ಸೊಸೆ ಮತ್ತು ಮೊಮ್ಮಗನ ಮೇಲೆ ಎನ್ಐಎ ಅಧಿಕಾರಿಗಳಿಗೆ ಶಂಕೆ ಮೂಡಿದ್ದು ಇಂದು ಬೆಳ್ಳಂಬೆಳಗ್ಗೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಇದಿನಬ್ಬರ ಮಗ ಬಿ.ಎಂ.ಬಾಷಾ ಮನೆಗೆ ದಾಳಿ ನಡೆಸಿದ್ದಾರೆ.
ಎನ್ಐಎ ಮೂಲಗಳ ಪ್ರಕಾರ, ಬಿ.ಎಂ. ಬಾಷಾ ಅವರ ಮೂರನೇ ಮಗ ಅನಾಸ್ ಮತ್ತು ಆತನ ಪತ್ನಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಅನಾಸ್ ಮತ್ತು ಆತನ ಪತ್ನಿ ಕನ್ವರ್ಟೆಡ್ ಮುಸ್ಲಿಂ ಆಗಿರುವ ಮರಿಯಂ ಐಸಿಸ್ ಜಾಲದ ಬಗ್ಗೆ ಸಂಪರ್ಕ ಹೊಂದಿದ್ದರು ಎನ್ನಲಾಗುತ್ತಿದೆ. ಅಲ್ಲದೆ, ಜಮ್ಮು ಕಾಶ್ಮೀರದ ಉಗ್ರ ಸಂಘಟನೆಗಳ ಲಿಂಕ್ ಹೊಂದಿದ್ದು ಇವರ ನಡುವೆ ಮೊಬೈಲ್ ಸಂಪರ್ಕ ಆಗಿತ್ತು ಎನ್ನುವ ಮಾಹಿತಿಗಳಿವೆ. ಇದೇ ಕಾರಣಕ್ಕೆ ಎನ್ಐಎ ಅಧಿಕಾರಿಗಳು ಇವರನ್ನು ಹುಡುಕಿಕೊಂಡು ಉಳ್ಳಾಲಕ್ಕೆ ಬಂದಿದ್ದು ಎರಡು ತಿಂಗಳ ಕಾಲ ನಿಗಾ ಇಟ್ಟಿದ್ದರು. ಈಗ ಅನಾಸ್ ಮತ್ತು ಆತನ ಪತ್ನಿಯನ್ನು ಐಸಿಸ್ ಸಂಪರ್ಕದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಹಿಂದು ಯುವತಿಯಾದ್ಲು ಕಟ್ಟರ್ ಮುಸ್ಲಿಂ !
ಬಿ.ಎಂ. ಬಾಷಾ ಅವರ ಮೂರನೇ ಮಗನಾಗಿರುವ ಅನಾಸ್, ಹತ್ತು ವರ್ಷಗಳ ಹಿಂದೆ ಕೊಡಗು ಮೂಲದ ಹಿಂದು ಯುವತಿಯನ್ನು ಮದುವೆಯಾಗಿದ್ದ. ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಯುವತಿಯಾಗಿದ್ದು, ಹತ್ತು ವರ್ಷಗಳ ಹಿಂದೆ ದೇರಳಕಟ್ಟೆಯ ಮೆಡಿಕಲ್ ಕಾಲೇಜಿನಲ್ಲಿ ಬಿಡಿಎಸ್ ಓದುತ್ತಿದ್ದಾಗ ಇವರ ನಡುವೆ ಸಂಪರ್ಕ ಆಗಿತ್ತು. ಬಳಿಕ ಅದೇ ಸಮಯದಲ್ಲಿ ಇಬ್ರಾಹಿಂ ಬಾಷಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಲಫಿಗಳ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಯುವತಿ ಪಾಲ್ಗೊಂಡಿದ್ದಳು ಎನ್ನಲಾಗಿತ್ತು. ಆನಂತರ ಅನಾಸ್ ಜೊತೆಗೆ ಯುವತಿ ಮದುವೆಯಾಗಿದ್ದು ತನ್ನ ಹೆಸರನ್ನು ಮರಿಯಂ ಎಂದು ಪರಿವರ್ತನೆ ಮಾಡಿಕೊಂಡಿದ್ದಳು.
ಕೊಡಗಲ್ಲಿ ನೆಲೆಸಿದ್ದ ಬಂಟರ ಕುಟುಂಬದ ಕುಡಿ
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಡ್ಡೆಹೊಸೂರು ಗ್ರಾಮದಲ್ಲಿ ನೆಲೆಸಿದ್ದ ಮಂಗಳೂರು ಮೂಲದ ಬಂಟರ ಕುಟುಂಬದ ಕುಡಿಯೇ ಅನಾಸ್ ವರಿಸಿದ್ದ ಯುವತಿ. ಆಕೆಯ ಮೂಲ ಹೆಸರು ದೀಪ್ತಿ ಮಾರ್ಲ ಅನ್ನುವುದಾಗಿತ್ತು ಎನ್ನುವ ಮಾಹಿತಿ ಲಭಿಸಿದೆ. ಅನಾಸ್ ಜೊತೆಗೆ ಮದುವೆಯಾದ ನಂತರ ದೀಪ್ತಿ ತನ್ನ ಕುಟುಂಬದ ಜೊತೆಗಿನ ನಂಟನ್ನು ಕಡಿದುಕೊಂಡಿದ್ದಳು. ಹಾಸ್ಟೆಲ್ ನಲ್ಲಿ ಇದ್ದು ಬಿಡಿಎಸ್ ಓದುತ್ತಿದ್ದಾಗ ಅದು ಹೇಗೆ ಅನಾಸ್ ಸಂಪರ್ಕ ಆಗಿತ್ತು. ಸಲಫಿಯಾಗಲು ಏನು ಪ್ರೇರಣೆಯಾಗಿತ್ತು ಎನ್ನುವುದು ಗೊತ್ತಾಗಿಲ್ಲ. ಆದರೆ, ಅನಾಸ್ ಏನೂ ಹೆಚ್ಚು ಓದಿಕೊಂಡವನಲ್ಲ ಎನ್ನಲಾಗುತ್ತಿದೆ. ದಕ್ಕೆಯಲ್ಲಿ ಒಂದೊಮ್ಮೆ ಮೀನು ಉದ್ಯಮವನ್ನು ನಡೆಸುತ್ತಿದ್ದ. ಆನಂತರ ವಿದೇಶಕ್ಕೆ ಹೋಗಿದ್ದ. ಈ ನಡುವೆ, ಪತ್ನಿ ಜೊತೆ ವಿದೇಶದಲ್ಲೇ ಇದ್ದು ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ. ಊರಿಗೆ ಬಂದರೆ, ಮನೆಯಲ್ಲಿ ಕಂಪ್ಯೂಟರ್ ಜೊತೆಗೇ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ. ಆದರೆ ತುಂಬ ಹೈಫೈ ಆಗಿ ಗುರುತಿಸಿಕೊಂಡಿದ್ದ ಎನ್ನುವ ಮಾಹಿತಿಯನ್ನು ಸ್ಥಳೀಯರು ಹೇಳುತ್ತಾರೆ.
ಬಾಷಾರದ್ದು ಮರ್ಯಾದಸ್ಥ ಕುಟುಂಬ
ಇದಿನಪ್ಪ ಅವರ ಪುತ್ರಿ ಬಿ.ಎಂ. ಬಾಷಾಗೆ ಆರು ಜನ ಮಕ್ಕಳು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಮಕ್ಕಳು. ಈ ಪೈಕಿ ದೊಡ್ಡ ಮಗನ ಹೆಸರು ಅಮೀರ್. ಈತ ಹಿಂದೆ ಅಮೆರಿಕದಲ್ಲಿ ಕೆಲಸದಲ್ಲಿದ್ದು ಬಳಿಕ ಮಂಗಳೂರಿಗೆ ಬಂದು ನೆಲೆಸಿದ್ದ. ಮಂಗಳೂರಿನಲ್ಲಿ ಗೋಲ್ಡ್ ಜುವೆಲ್ಲರಿ ಹೊಂದಿರುವ ವ್ಯಕ್ತಿಯೊಬ್ಬರ ಮಗಳನ್ನು ಮದುವೆಯಾಗಿದ್ದ. ಆನಂತರ ಅಮೀರ್ ಮಾವನಾಗಿದ್ದ ಜುವೆಲ್ಲರಿ ಮಾಲೀಕರ ಜೊತೆಗೆ ಬಿ.ಎಂ. ಬಾಷಾ ಕೂಡ ಸೇರಿಕೊಂಡಿದ್ದರು. ಇಬ್ಬರ ಪಾಲುದಾರಿಕೆಯಲ್ಲಿ ಗೋಲ್ಡ್ ಜುವೆಲ್ಲರಿ ನಡೆಯುತ್ತಿದ್ದಾಗಲೇ ಕುಟುಂಬದಲ್ಲಿ ದ್ವೇಷ ಮೂಡಿತ್ತು. ಮಗ ಅಮೀರ್ ಮತ್ತು ಆತನ ಮಾವ ಸೇರಿ ಬಿ.ಎಂ. ಬಾಷಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆನಂತರ ಇವರ ನಡುವೆ ವೈಷಮ್ಯ ಬೆಳೆದಿತ್ತು ಎನ್ನಲಾಗುತ್ತಿದೆ.
ಬಿ.ಎಂ.ಬಾಷಾ ಅವರು ಉಳ್ಳಾಲದ ಮಸೀದಿ ಒಂದರಲ್ಲಿ ಟ್ರಸ್ಟಿಯಾಗಿದ್ದು ಸ್ಥಳೀಯವಾಗಿ ಪ್ರಭಾವಿ ಮತ್ತು ತುಂಬ ಮರ್ಯಾದಸ್ಥ ವ್ಯಕ್ತಿ. ಸಲಫಿ ಪಂಗಡದ ಶಿಕ್ಷಣ ಸಂಸ್ಥೆ ಕಲ್ಲಾಪಿನಲ್ಲಿರುವ ಪೀಸ್ ಪಬ್ಲಿಕ್ ಸ್ಕೂಲ್ ಸೊಸೈಟಿಯಲ್ಲಿ ಚೇರ್ಮನ್ ಕೂಡ ಆಗಿದ್ದಾರೆ. ಸದ್ಯಕ್ಕೆ ಬಾಷಾ ಅವರು ಇದಿನಬ್ಬ ಕುಟುಂಬದಲ್ಲಿ ಹಿರಿಯ ವ್ಯಕ್ತಿಯಾಗಿದ್ದು, ಮನೆಯಲ್ಲೇ ಇದ್ದಾರೆ. ಬಾಷಾ ಅವರ ತಮ್ಮ ಬದ್ರುದ್ದೀನ್ ತಂದೆ ಇದಿನಬ್ಬ ಅವರ ಹಳೆಯ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದಾರೆ.
2015ರಲ್ಲಿ ಐಸಿಸ್ ಸೇರಿದ್ದ ಬಾಷಾ ಮೊಮ್ಮಗಳು
2015ರಲ್ಲಿ ಬಿ.ಎಂ.ಬಾಷಾ ಅವರ ಹಿರಿಯ ಮಗಳ ಪುತ್ರಿ, ಕಾಸರಗೋಡಿಗೆ ಮದುವೆಯಾಗಿದ್ದ ಅಜ್ಮಳಾ ನಾಪತ್ತೆಯಾಗಿದ್ದಳು. ಪತಿಯ ಜೊತೆಗೆ ನಾಪತ್ತೆಯಾಗಿದ್ದ ಈಕೆ, ಬಳಿಕ ಕುವೈತ್ ಮೂಲಕ ಐಸಿಸ್ ಸೇರ್ಪಡೆಯಾಗಿದ್ದಾಳೆ ಎನ್ನಲಾಗಿತ್ತು. ಈ ವಿಚಾರದ ಬಗ್ಗೆ ಕೇರಳದ ಎನ್ಐಎ ತಂಡ ಮತ್ತು ಗುಪ್ತಚರ ಇಲಾಖೆ ಸಾಕಷ್ಟು ತನಿಖೆ ನಡೆಸಿತ್ತು. ಕಾಸರಗೋಡಿನ ಪಡನ್ನ ಪಂಚಾಯತ್ ವ್ಯಾಪ್ತಿಯಲ್ಲಿ ಮಿಸ್ಸಿಂಗ್ ಆಗಿದ್ದ 22 ಮಂದಿಯಲ್ಲಿ ಅಜ್ಮಳಾ ಕೂಡ ಒಬ್ಬಳು.
Breaking: ಉಳ್ಳಾಲದ ಮಾಜಿ ಶಾಸಕ, ದಿ. ಬಿ.ಎಂ.ಇದಿನಬ್ಬ ಕುಟುಂಬಸ್ಥರ ಮನೆಗೆ ಎನ್ಐಎ ದಾಳಿ ; ಐಸಿಸ್ ಸಂಪರ್ಕ ಶಂಕೆ !
NIA raid Ex-Karnataka MLA Idinabba son's residence in Ullal, Mangalore over suspected links with ISIS, Great-grandson and wife are said to have links with Islamic State. Officials of National Investigation Agency (NIA) raided the residence of the son of former Ullal MLA B M Idinabba, in the early hours of Wednesday August 4. The officials who arrived at dawn from Bengaluru, began their investigation forthwith.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm