ಬ್ರೇಕಿಂಗ್ ನ್ಯೂಸ್
20-08-21 02:10 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 20: ಸಿಟಿ ಸೆಂಟರ್ ಮಾಲ್ ನಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಮ್ಯಾನೇಜರ್ ಆಗಿದ್ದ ಹರೀಶ್ ಶೆಟ್ಟಿ (42) ನಿನ್ನೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದರು. ಮೃತದೇಹವನ್ನು ರಾತ್ರಿ ಬೆಂದೂರು ವೆಲ್ ಕೊಲೊಸೊ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದರೆ, ಇಂದು ಬೆಳಗ್ಗೆ ನೋಡಿದಾಗ ಹರೀಶ್ ಶೆಟ್ಟಿ ಅವರ ಕಿವಿಯಲ್ಲಿದ್ದ ಡೈಮಂಡ್ ರಿಂಗ್ ಕಾಣೆಯಾಗಿತ್ತು.
ಹರೀಶ್ ಶೆಟ್ಟಿ ನಿನ್ನೆ ಬೆಳಗ್ಗೆ ತನ್ನ ಪತ್ನಿ, ಮಕ್ಕಳೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ಮಧ್ಯಾಹ್ನ ಹೊಟೇಲ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ದಿಢೀರ್ ಆಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಸ್ಥಳೀಯರು ಸೇರಿ ಅಲ್ಲಿನ ಆಸ್ಪತ್ರೆಗೆ ಒಯ್ದಿದ್ದರು. ವೈದ್ಯರು ಪರಿಶೀಲಿಸಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಇದರಿಂದ ಹರೀಶ್ ಶೆಟ್ಟಿ ಆಪ್ತರು ಮತ್ತು ಕುಟುಂಬಸ್ಥರಿಗೆ ತೀವ್ರ ಆಘಾತ ಆಗಿತ್ತು.
ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಹರೀಶ್ ಶೆಟ್ಟಿ ಮೃತದೇಹವನ್ನು ಬೆಂದೂರುವೆಲ್ ನಲ್ಲಿರುವ ಕೊಲಾಸೊ ಆಸ್ಪತ್ರೆಯ ಶವಾಗಾರಕ್ಕೆ ತಂದಿರಿಸಲಾಗಿತ್ತು. ಈ ವೇಳೆ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆದಿರಿಸಿದ್ದು, ಎರಡೂ ಕಿವಿಯಲ್ಲಿದ್ದ ಡೈಮಂಡ್ ರಿಂಗನ್ನು ತೆಗೆದಿರಲಿಲ್ಲ. ಪತ್ನಿ ಪ್ರೀತಿಯಿಂದ ನೀಡಿದ್ದ ಕಾಣಿಕೆ ಆಗಿದ್ದರಿಂದ ಅಂತ್ಯಕ್ರಿಯೆ ವೇಳೆ ತೆಗೆಯೋಣ ಎಂದು ಹಾಗೆಯೇ ಬಿಟ್ಟಿದ್ದರು. ಅಲ್ಲದೆ, ಈ ಬಗ್ಗೆ ಶವಾಗಾರದಲ್ಲಿದ್ದ ಸೆಕ್ಯುರಿಟಿ ಸಿಬಂದಿಗೆ ತಿಳಿಸಿಯೇ ಶವ ಇಟ್ಟಿದ್ದರು. ಆದರೆ, ಇಂದು ಬೆಳಗ್ಗೆ ಏಳು ಗಂಟೆಗೆ ಶವ ಹೊರತೆಗೆದಾಗ ಕಿವಿಯಲ್ಲಿದ್ದ ಡೈಮಂಡ್ ರಿಂಗ್ ಇರಲಿಲ್ಲ.
ಈ ಬಗ್ಗೆ ಸೆಕ್ಯುರಿಟಿ ಸ್ಟಾಫ್ ಬಳಿ ಕೇಳಿದಾಗ, ನಮಗೇನೂ ಗೊತ್ತಿಲ್ಲ. ದೇವರಾಣೆ ನಾವೇನು ತೆಗೆದಿಲ್ಲ ಎಂದಿದ್ದಾರೆ. ಅದೇ ವೇಳೆ, ಅಲ್ಲಿದ್ದ ಸೆಕ್ಯುರಿಟಿಯ ಪತ್ನಿ (ಅಲ್ಲಿಯೇ ಕೆಲಸ ಮಾಡುವುದು) ಯಾರಾದ್ರೂ ತೆಗೆದಿರಬಹುದು, ನೀವ್ಯಾಕೆ ನಮ್ಮ ಮೇಲೆ ಸಂಶಯ ಪಡುತ್ತೀರಿ. ಆಮೇಲೆ ಕೂಡ ಕೆಲವರು ಬಂದು ಶವ ನೋಡಿದ್ದಾರೆ ಎಂದಿದ್ದಾರೆ. ರಾತ್ರಿ ವೇಳೆ ಯಾರು ಕೂಡ ಶವ ನೋಡಲು ಹೋಗಿಲ್ಲವಾದರೂ, ಶವ ನೋಡಲು ಬಂದಿದ್ದಾಗಿ ಸೆಕ್ಯುರಿಟಿ ಸಿಬಂದಿ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.
ಬೆಳಗ್ಗೆ ಶವ ಹೊರ ತೆಗೆಯುವ ವೇಳೆ ಈ ಬಗ್ಗೆ ಹೆಚ್ಚು ಪ್ರಶ್ನೆ ಮಾಡಲು ಹೋಗಿಲ್ಲ. ಜೊತೆಗಿದ್ದ ಆಪ್ತನೇ ಮೃತಪಟ್ಟಿದ್ದರಿಂದ ನಾವೆಲ್ಲ ದುಃಖದಲ್ಲಿದ್ದೆವು. ಶವ ಒಯ್ಯುವ ಸಂದರ್ಭದಲ್ಲಿ ಗಲಾಟೆ ಮಾಡುವುದೂ ಸರಿಯಾಗಲ್ಲ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ. ಶವಾಗಾರದಲ್ಲಿ ಇಟ್ಟಿದ್ದ ಹೆಣದಿಂದಲೂ ಡೈಮಂಡ್ ರಿಂಗ್ ಕದ್ದಿರುವುದು ನೋಡಿದರೆ, ಅಲ್ಲಿ ಯಾವತ್ತೂ ಇದೇ ರೀತಿ ಕಳವು ನಡೆಸಿರುವ ಸಾಧ್ಯತೆಯಿದೆ. ಶವ ಒಯ್ಯುವ ಗಡಿಬಿಡಿಯ ನಡುವೆ ಈ ವಿಚಾರವನ್ನು ಹೆಚ್ಚಾಗಿ ಮರೆತು ಬಿಡುತ್ತಾರೆ. ಆದರೆ ಯಾರು ಕೂಡ ಈ ರೀತಿ ಮಾಡಬಾರದು ಎಂದು ಹರೀಶ್ ಶೆಟ್ಟಿಯ ಆಪ್ತರೊಬ್ಬರು ಹೆಡ್ ಲೈನ್ ಕರ್ನಾಟಕಕ್ಕೆ ಕರೆ ಮಾಡಿ, ಕೊಲಾಸೊ ಆಸ್ಪತ್ರೆಯಲ್ಲಿ ಆಗಿರುವ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾರೆ.
ಲಕ್ಷಾಂತರ ಮೌಲ್ಯದ ಡೈಮಂಡ್ ರಿಂಗ್
ಹರೀಶ್ ಶೆಟ್ಟಿ ಕೊರಳಿಗೆ ಬಂಗಾರದ ಸರ, ಕಿವಿಗಳಿಗೆ ರಿಂಗ್ ಹಾಕಿಕೊಳ್ಳುವ ಹವ್ಯಾಸ ಇಟ್ಟುಕೊಂಡಿದ್ದರು. ಕುತ್ತಿಗೆಯಲ್ಲಿ ಸಾಮಾನ್ಯವಾಗಿ ಹಲವಾರು ಸರಗಳು ನೇತಾಡುತ್ತಿದ್ದವು. ಕಿವಿಯಲ್ಲಿ ಹೆಂಡ್ತಿ ಕೊಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್ ರಿಂಗನ್ನು ಹಾಕ್ಕೊಂಡಿದ್ದರು. ಪಡೀಲಿನ ನಿವಾಸಿಯಾಗಿದ್ದ ಹರೀಶ್ ಶೆಟ್ಟಿ ಆನಂತರ ಪತ್ನಿ ಜೊತೆ ಬಲ್ಲಾಳ್ ಬಾಗ್ ನಲ್ಲಿ ಫ್ಲಾಟ್ ಒಂದರಲ್ಲಿ ನೆಲೆಸಿದ್ದರು.
Mangalore Harish Shetty death dead mans Diamond ring goes missing from Colaco hospital in Bendoor. The family are now alleging that the security guard has stolen it, But the hospital authorities have refused the allegations made by the family. Harish shetty who was the chief in charge of security department at City Centre mall died of heart attack.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am