ಬ್ರೇಕಿಂಗ್ ನ್ಯೂಸ್
09-09-21 10:16 pm Headline Karnataka News Network ಕರಾವಳಿ
ಮಂಗಳೂರು, ಸೆ.9 : ಅದು ಲವ್ ಜಿಹಾದ್ ಅಲ್ಲ. ಹಳೆ ಸೇಡಿನ ಪ್ರತೀಕಾರ ತೀರಿಸಿದ ಪರಿ. ಅಷ್ಟೇ.. ಹೌದು.. ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಎರಡೇ ದಿನದಲ್ಲಿ ನಾಪತ್ತೆಯಾಗಿದ್ದ ಯುವತಿಯ ಪ್ರಕರಣದಲ್ಲಿ ನಿಜ ವೃತ್ತಾಂತ ಹೊರಬಿದ್ದಿದೆ. 22 ವರ್ಷಗಳ ಹಿಂದೆ ತಾಯಿ ತನ್ನ ಧರ್ಮ ಬಿಟ್ಟು ಓಡಿಕೊಂಡು ಬಂದಿದ್ದಕ್ಕೆ ಆಕೆಯ ಬಂಧುಗಳೇ ಸೇರಿಕೊಂಡು ಸೇಡು ತೀರಿಸಿದ್ದಾರೆ.
ಆಕೆಯ ಮೂಲ ಹೆಸರು ಹಜರತ್. ಗದಗ ಜಿಲ್ಲೆಯ ನಿವಾಸಿ. ತನ್ನ ಮನೆಯ ಸಮೀಪದ ನಿವಾಸಿಯಾಗಿದ್ದ ವೀರೇಶ್ ಎಂಬ ಯುವಕನನ್ನು ಪ್ರೀತಿಸಿ, ಮದುವೆ ಮಾಡಿಕೊಂಡಿದ್ದರು. 20 ವರ್ಷಗಳ ಹಿಂದೆ ಹಿಂದು- ಮುಸ್ಲಿಂ ಮದುವೆಯಾಗುವುದಕ್ಕೆ ಅಲ್ಲಿ ದೊಡ್ಡ ಮಟ್ಟಿನ ಆಕ್ಷೇಪವೂ ಬಂದಿರಲಿಲ್ಲ. ಆದರೆ, ಆಕೆಯ ಮನೆಯವರು ಸಿಟ್ಟು ಮಾಡಿಕೊಂಡ ಕಾರಣಕ್ಕೆ ದಂಪತಿ ತಮ್ಮ ಊರನ್ನೇ ಬಿಟ್ಟು ಮಂಗಳೂರಿಗೆ ಬಂದಿದ್ದರು. ಕೂಲಿ ಮಾಡಿ ಬದುಕು ಕಟ್ಟುತ್ತೇವೆ ಎಂದು ನಿರ್ಧಾರ ಮಾಡಿಯೇ ಊರು ಬಿಟ್ಟಿದ್ದರು.
ಮಂಗಳೂರಿಗೆ ಬಂದವರು ಕಷ್ಟದಲ್ಲೇ ಜೀವನ ಕಟ್ಟಿಕೊಂಡಿದ್ದರು. ಗಂಡ ವೀರೇಶ್, ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಪತ್ನಿ ನಜರತ್ ತನ್ನ ಹೆಸರನ್ನು ಯಶೋಧಾ ಎಂದು ಬದಲಾಯಿಸಿಕೊಂಡು ಜೊತೆಯಾಗೇ ಬಾಳಬಂಡಿಗೆ ನೇಗಿಲು ಹಿಡಿದಿದ್ದರು. ಯಶೋಧಾ ಮನೆ, ಮನೆಗೆ ತೆರಳಿ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡಿದ್ದರೆ, ಗಂಡ ವೀರೇಶ್ ಬರಬರುತ್ತಾ ಕೆಲಸ ಕಲಿತು ಮೇಸ್ತ್ರಿಯಾಗಿದ್ದರು. ಮಂಗಳೂರಿನಲ್ಲಿ ಮೇಸ್ತ್ರಿಗಳಿಗೆ ದೊಡ್ಡ ಬೇಡಿಕೆಯೂ ಇತ್ತು. ಇವರಿಗೆ ಇಬ್ಬರು ಮಕ್ಕಳಾಗಿದ್ದರು. ಹಿರಿಯ ಪುತ್ರಿ ರೇಶ್ಮಾ. ಇನ್ನೊಬ್ಬ ಹುಡುಗ ಕಿರಿಯವ. ಇಬ್ಬರು ಮಕ್ಕಳಿಗೂ ಒಳ್ಳೆ ವಿದ್ಯೆ ಕೊಡಿಸಬೇಕೆಂದು ಶಾಲೆ, ಕಾಲೇಜು ಕಲಿಸಿದ್ದರು.
ಧರ್ಮ ಬೇರೆಯಾದರೂ ಕೂಡಿ ಬಾಳುತ್ತಿದ್ದ ದಂಪತಿ ಮದುವೆಯಾಗಿ ಇತ್ತ 22 ವರ್ಷಗಳು ತುಂಬಿದ್ದರೆ, ಮಗಳು ಮದುವೆಯಾಗುವ ಹಂತಕ್ಕೆ ಬಂದಿದ್ದಳು. ತಾವು ಕಲಿಯಲಿಲ್ಲ, ಮಕ್ಕಳಾದರೂ ಕಲಿಯಬೇಕೆಂದು ಮಗಳನ್ನು ಕಷ್ಟಪಟ್ಟು ಓದಿಸುತ್ತಿದ್ದರು. ಮಗಳು ರೇಷ್ಮಾ ಪದವಿ ಮುಗಿಸಿ, ಮಂಗಳೂರಿನ ಕೋಣಾಜೆ ವಿವಿಯಲ್ಲಿ ಎಂಎಸ್ಸಿ ಓದುತ್ತಿದ್ದಳು. ಓದಿನಲ್ಲಿ ಮುಂದಿದ್ದ ಆಕೆಯನ್ನು ಕಾಲೇಜಿನಲ್ಲಿ ಉಪನ್ಯಾಸಕಿ ಮಾಡೋ ಆಸೆ ತಾಯಿಗಿತ್ತು. ಇದೇ ವೇಳೆಗೆ, ಒಳ್ಳೆ ಸಂಬಂಧ ಕೂಡಿ ಬಂದಿತ್ತು. ಹುಡುಗ ಹಡಗಿನಲ್ಲಿ ಕೆಲಸ ಮಾಡುತ್ತಾನೆ, ಒಳ್ಳೆ ಸಂಬಳ ಇದೆಯೆಂದು ಯಾರೋ ಹೇಳಿ ಸಂಬಂಧ ಕುದುರಿಸಿದ್ದರು. ಆಗಸ್ಟ್ 23ರ ಸೋಮವಾರ ನಿಶ್ಚಿತಾರ್ಥ ಇಟ್ಟುಕೊಂಡಿದ್ದರು. ಆದರೆ, ನಿಶ್ಚಿತಾರ್ಥ ದಿನ ಹತ್ತಿರ ಬರುತ್ತಿದ್ದಂತೆ, ಮಗಳು ರೇಶ್ಮಾ ತನಗೆ ಆವತ್ತೇ ಎಕ್ಸಾಂ ಇದೆಯೆಂದು ಮನೆಯವರಲ್ಲಿ ಹೇಳಿದ್ದಳು.
ಮಗಳನ್ನು ಕಷ್ಟಪಟ್ಟು ಓದಿಸುತ್ತಿದ್ದ ಕಾರಣ, ಹೆತ್ತವರಿಗೂ ಎಕ್ಸಾಂ ಬಿಟ್ಟು ಎಂಗೇಜ್ಮೆಂಟ್ ಮಾಡೋದು ಬೇಡ ಎನಿಸಿತ್ತು. ಈ ಬಗ್ಗೆ ವರನ ಕಡೆಯವರಿಗೆ ತಿಳಿಸಿದಾಗ, ಸೋಮವಾರ ಬೇಡ.. ಶನಿವಾರವೇ ಎಂಗೇಜ್ಮೆಂಟ್ ಮಾಡೋಣ ಎಂದು ಎರಡು ದಿನ ಮೊದಲೇ ಸಮಾರಂಭಕ್ಕೆ ರೆಡಿಯಾಗಿದ್ದರು. ಅದರಂತೆ, ಮಂಗಳೂರಿನ ಬಳ್ಳಾಲ್ ಬಾಗ್ ನಲ್ಲಿ ವಾಚ್ ಮನ್ ಕೆಲಸ ಮಾಡುತ್ತಾ, ಅಲ್ಲಿಯೇ ಮನೆ ಮಾಡಿಕೊಂಡಿದ್ದ ಕಾರಣ, ಅದೇ ಅಪಾರ್ಟ್ಮೆಂಟಿನ ಟೆರೇಸಿನಲ್ಲಿ ಎಂಗೇಜ್ಮೆಂಟ್ ಏರ್ಪಡಿಸಲಾಗಿತ್ತು. ಮಗಳಿಗೆ ಚಿನ್ನದ ಸರ, ವರನ ಕಡೆಯಿಂದ ಉಂಗುರವನ್ನೂ ಕೊಡಿಸಿದ್ದರು. ಕಷ್ಟದಿಂದ ಕೂಡಿಟ್ಟಿದ್ದ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ, ಮಗಳ ಎಂಗೇಜ್ಮೆಂಟನ್ನು ಹೆತ್ತವರು ತಮಗೆ ಸಾಧ್ಯವಾದಷ್ಟು ಗಡದ್ದಾಗಿಯೇ ಮಾಡಿದ್ದರು. ಪರಿಸರದ ನಿವಾಸಿಗಳಿಗೂ ತನ್ನ ಮಗಳ ನಿಶ್ಚಿತಾರ್ಥದ ಬಗ್ಗೆ ಹೇಳಿಕೊಂಡು ತಾಯಿ ತನ್ನ ಭಾರ ಇಳಿಸುತ್ತಿದ್ದರು. ಎಲ್ಲವೂ ಯಾವುದೇ ಸಮಸ್ಯೆ, ಜಂಜಾಟವೇ ಇಲ್ಲದ ರೀತಿ ಮುಗಿದಿತ್ತು. ವರನ ಜೊತೆ ಮದುಮಗಳ ಫೋಟೋ ಸೆಷನ್ ಕೂಡ ಚೆನ್ನಾಗಿಯೇ ನಡೆದಿತ್ತು.
ಮರುದಿನ ಭಾನುವಾರ ಕಳೆದು ಸೋಮವಾರ ರೇಶ್ಮಾ ತನಗೆ ಎಕ್ಸಾಂ ಇದೆಯೆಂದು ಹೇಳಿ ಮನೆಯಿಂದ ಹೊರಟಿದ್ದಳು. ಆದರೆ, ಪರೀಕ್ಷೆ ಇದೆಯೆಂದು ಹೇಳಿ ಹೊರಟಿದ್ದ ರೇಶ್ಮಾ ಆವತ್ತು ಮನೆಗೆ ಮರಳಿರಲಿಲ್ಲ. ತಂದೆ, ತಾಯಿಗೆ ಮಗಳು ಕಾಲೇಜಿನಿಂದ ಬರದೇ ಇದ್ದುದು ಆತಂಕದ ನೆರಿಗೆ ಮೂಡಿಸಿತ್ತು. ಆಕೆಗೆ ಫೋನ್ ಮಾಡಿದರೆ, ಸ್ವಿಚ್ ಆಫ್ ಆಗಿತ್ತು. ಫೋನೂ ಇಲ್ಲ.. ಎಲ್ಲಿ ಹೋದಳು ಅನ್ನೋ ಮಾಹಿತಿಯೇ ಇಲ್ಲದೆ, ತಂದೆ, ತಾಯಿ ಅಕ್ಷರಶಃ ನಲುಗಿದ್ದರು. ಕಾಲೇಜಿನಲ್ಲಿ ವಿಚಾರಿಸಿದರೆ, ಅಂದು ಪರೀಕ್ಷೆಯೇ ಇರಲಿಲ್ಲ ಅನ್ನೋದು ಗೊತ್ತಾಗಿತ್ತು. ಮದುವೆ ನಿಶ್ಚಿತಾರ್ಥ ಮಾಡಿಕೊಂಡಾಕೆ ಎಲ್ಲಿ ಹೋಗಬಹುದು ಎಂದು ಚಿಂತೆಗೆ ಬಿದ್ದರೂ, ಆತಂಕ, ದುಗುಡದ ಮಧ್ಯೆಯೇ ಮರುದಿನ ಬರ್ಕೆ ಠಾಣೆಗೆ ದೂರು ನೀಡಿದ್ದರು.
ಎರಡು ದಿನ ಕಳೆದು ತಾಯಿ ಯಶೋಧಾ ಹುಬ್ಬಳ್ಳಿಯಲ್ಲಿರುವ ತನ್ನ ಅಣ್ಣನಿಗೆ ಫೋನ್ ಮಾಡಿದ್ದರು. ಮಗಳು ಕಾಣೆಯಾಗಿರುವ ವಿಚಾರದ ಬಗ್ಗೆ ಕೇಳಿದಾಗ, ಆತ ಅಸಡ್ಡೆ ವಹಿಸಿದ್ದು ಈಕೆಗೆ ಅನುಮಾನ ಮೂಡಿಸಿತ್ತು. ಆನಂತರ, ದಂಪತಿ ಇಬ್ಬರೂ ಸೇರಿಕೊಂಡು ಗದಗಕ್ಕೆ ತೆರಳಿದ್ದರು. ಅಲ್ಲಿನ ಪೊಲೀಸ್ ಠಾಣೆಯಲ್ಲೂ ವಿಚಾರ ತಿಳಿಸಿದ್ದಾರೆ. ಅಷ್ಟರಲ್ಲಿ ಮಗಳು ರೇಷ್ಮಾ ತನ್ನ ತಾಯಿಯ ಅಕ್ಕನ ಮಗನ ಜೊತೆ ತೆರಳಿರುವ ವಿಚಾರ ಗೊತ್ತಾಗಿದೆ. ಸಂಬಂಧದಲ್ಲಿ ದೊಡ್ಡಮ್ಮನ ಮಗನಾಗಿರುವ ಅಕ್ರಮ್ ಆಲಿ ಎಂಬಾತನ ಜೊತೆ ರೇಶ್ಮಾ ತೆರಳಿದ್ದಾಳೆ ಎಂಬ ಮಾಹಿತಿ ತಿಳಿದಿದ್ದು, ಈ ಬಗ್ಗೆ ಗದಗದ ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬಗಳ ಮಧ್ಯೆ ವಾಗ್ವಾದವೇ ನಡೆದಿತ್ತು. ನಜರತ್ ಅಲಿಯಾಸ್ ಯಶೋಧಾಳ ಸ್ವಂತ ಅಣ್ಣನೇ ವಿರುದ್ಧವಾಗಿ ನಿಂತಿದ್ದ. ಮಗಳು ರೇಶ್ಮಾಳನ್ನು ಅಣ್ಣನೇ ಮದುವೆಯಾಗಲು ಹೊರಟಿದ್ದ ವಿಚಾರಕ್ಕೆ ಸಾಥ್ ನಿಂತಿದ್ದ.
ಆನಂತರ ಮಗಳು ರೇಶ್ಮಾ ಪ್ರಾಯ ಪ್ರಬುದ್ಧಳಾಗಿದ್ದು, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೆ ಬಂದಿದ್ದರಿಂದ ಪೊಲೀಸರು ಕೂಡ ಅವರ ನಿರ್ಧಾರಕ್ಕೆ ಸಹಮತ ನೀಡಿದ್ದಾರೆ. ರೇಶ್ಮಾ ತನ್ನ ಸೋದರ ಸಂಬಂಧಿ ಅಕ್ರಮ್ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಳು. ಆನಂತರ, ಯಶೋಧಾ ಮತ್ತು ವೀರೇಶ್ ತಮ್ಮ ಬೇಳೆ ಬೇಯಲ್ಲ ಎಂದುಕೊಂಡು ಮರಳಿ ಮಂಗಳೂರಿಗೆ ಬಂದಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಬೇರೊಬ್ಬ ಹುಡುಗನ ಜೊತೆ ಓಡಿಹೋದ ವಿಚಾರ ನಿಧಾನವಾಗಿ ಸುದ್ದಿಯಾಗಿತ್ತು. ಅತ್ತ ಹಳೆ ಸೇಡನ್ನು ತೀರಿಸಿಕೊಂಡ ಸಂತಸದಲ್ಲಿ ತಾಯಿ ಕಡೆಯ ಸಂಬಂಧಿಕರಿದ್ದರೆ, ಕಷ್ಟಪಟ್ಟು ಓದಿಸಿ ಬೆಳೆಸಿದ ಮಗಳು ತಮ್ಮನ್ನು ಬಿಟ್ಟುಹೋದ ನೋವಲ್ಲಿ ಹೆತ್ತವರಿದ್ದಾರೆ.
ಮತ್ತೊಂದು ಕಡೆ, ನಿಶ್ಚಿತಾರ್ಥ ಮಾಡಿಕೊಂಡು ತೆರಳಿದ್ದ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಯುವಕ ಚಿಂತೆಗೆ ಬಿದ್ದಿದ್ದಾನೆ. ಬಂಗಾರಕ್ಕೆ ಹಾಕಿದ ಹಣವೂ ಹೋಯ್ತು. ಮರ್ಯಾದೆಯೂ ಹೋಯ್ತು ಅನ್ನುವ ನೋವು. ಇಷ್ಟರಲ್ಲೇ ಹೆತ್ತವರು ಮಗಳ ಮದುವೆ ಪ್ರಾಯಕ್ಕೆ ಹಣ ಬರಬೇಕೆಂದು ಇನ್ಶೂರೆನ್ಸ್ ಮಾಡಿಸಿದ್ದರು. ಕಷ್ಟದಿಂದ ಕಟ್ಟಿಕೊಂಡು ಬಂದ ಇನ್ಶೂರೆನ್ಸ್ ಮೆಚ್ಯೂರಿಟಿ ಆಗಿ 21 ವರ್ಷ ಪೂರ್ತಿಯಾಗುತ್ತಲೇ ಇತ್ತೀಚೆಗೆ ಆಕೆಯ ಖಾತೆಗೆ ಬಿದ್ದಿತ್ತು. ಇನ್ಶೂರೆನ್ಸಲ್ಲಿ ಬಂದಿದ್ದ 90 ಸಾವಿರ ಹಣ, ನಿಶ್ಚಿತಾರ್ಥಕ್ಕೆ ಹಾಕಿದ್ದ ಚಿನ್ನದ ಒಡವೆಗಳನ್ನೆಲ್ಲ ಕಟ್ಟಿಕೊಂಡು ಒಯ್ದಿದ್ದು ನೋಡಿದರೆ, ಆಕೆ ಪರಾರಿಯಾಗಲು ಮೊದಲೇ ಸ್ಕೆಚ್ ಹಾಕಿದ್ದಳು ಅನ್ನೋದು ಖರೇ ಆಗುತ್ತಿದೆ.
ನಿಶ್ಚಿತಾರ್ಥ ಆಗಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ ; ಹೆತ್ತವರ ದೂರು
ನಿಶ್ಚಿತಾರ್ಥ ಯುವತಿ ನಾಪತ್ತೆ ಹಿಂದೆ ಲವ್ ಜಿಹಾದ್ ಕೃತ್ಯ ; ಸಮಗ್ರ ತನಿಖೆಗೆ ವಿಹಿಂಪ ಒತ್ತಾಯ
Mangalore Engaged Girl flees with Muslim guy. Case which was stated to be as Love Jihad by Hindu Outfits has now got a big twist. The girl was kidnapped by her own Mothers family as revenge. Detailed report by Headline Karnataka.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm