ಮಂಗಳೂರಿನಲ್ಲಿ ಟ್ರಾಫಿಕ್ ಡ್ರೈವ್ ; ನಂಬರ್ ಪ್ಲೇಟ್ ದೋಷ ಹೆಸರಲ್ಲಿ 900 ಕೇಸು, ಒಂದೇ ದಿನ 4.5 ಲಕ್ಷ ದಂಡ ಸಂಗ್ರಹ ! ಎಸಿಪಿ ವಾಹನಕ್ಕೇ ಇರಲಿಲ್ಲ IND !!

28-09-21 11:01 pm       Mangaluru Correspondent   ಕರಾವಳಿ

ಟ್ರಾಫಿಕ್ ಡ್ರೈವ್ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ದೋಷ ನೆಪದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ‌ವಾರ ಪೂರ್ತಿ ನಡೆಯಲಿರುವ ಕಾರ್ಯಾಚರಣೆಯಲ್ಲಿ ಇಂದು ನಂಬರ್ ಪ್ಲೇಟ್ ಸಮಸ್ಯೆ ಬಗ್ಗೆ ಕಾರ್ಯಾಚರಣೆ ನಡೆದಿದ್ದು ಬರೋಬ್ಬರಿ 900 ಕೇಸು ಬಿದ್ದಿವೆ. 

ಮಂಗಳೂರು, ಸೆ.28: ಟ್ರಾಫಿಕ್ ಡ್ರೈವ್ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ದೋಷ ನೆಪದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ‌ವಾರ ಪೂರ್ತಿ ನಡೆಯಲಿರುವ ಕಾರ್ಯಾಚರಣೆಯಲ್ಲಿ ಇಂದು ನಂಬರ್ ಪ್ಲೇಟ್ ಸಮಸ್ಯೆ ಬಗ್ಗೆ ಕಾರ್ಯಾಚರಣೆ ನಡೆದಿದ್ದು ಬರೋಬ್ಬರಿ 900 ಕೇಸು ಬಿದ್ದಿವೆ. 

ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ತೊಕ್ಕೊಟ್ಟು ಸೇರಿ ನಗರದ ವಿವಿಧ ಕಡೆಗಳಲ್ಲಿ ನಂಬರ್ ಪ್ಲೇಟ್ ಕಾರ್ಯಾಚರಣೆ ನಡೆಸಿದ್ದಾರೆ.‌ ದಿನವಿಡೀ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ ವಾಹನಗಳು ಸೇರಿ 900 ಕೇಸುಗಳನ್ನು ಹಾಕಲಾಗಿದ್ದು ಒಟ್ಟು 4.5 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. 

ವಾಹನಗಳ ನೋಂದಣಿ ಸಂಖ್ಯಾ ಬೋರ್ಡಲ್ಲಿ IND ಗುರುತು ಇಲ್ಲದಿದ್ದಲ್ಲಿ ಮತ್ತು ನಂಬರ್ ಪ್ಲೇಟಲ್ಲಿ ಇತರ ದೋಷ ಇದ್ದರೆ ಪೊಲೀಸರು ಅಂತಹ ವಾಹನಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ. 

ಟ್ರಾಫಿಕ್ ಎಸಿಪಿ ವಾಹನಕ್ಕೇ ಐಎನ್ ಡಿ ಇರಲಿಲ್ಲ ! 

ತೊಕ್ಕೊಟ್ಟಿನ ಫ್ಲೈ ಓವರ್ ಕೆಳಗಡೆ ಇಂದು ಟ್ರಾಫಿಕ್ ಪೊಲೀಸರು ವಾಹನಗಳ ನಂಬರ್ ಪ್ಲೇಟ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರು.‌ ಅಲ್ಲಿ ಟ್ರಾಫಿಕ್ ವಿಭಾಗದ ಎಸಿಪಿಯವರ ವಾಹನವೂ ನಿಂತಿತ್ತು‌. ವಿಚಿತ್ರ ಅಂದರೆ, IND ಗುರುತು ಇಲ್ಲದ ನಂಬರ್ ಪ್ಲೇಟ್ ಗಳನ್ನು ಪತ್ತೆ ಮಾಡಿ ದಂಡ ಹಾಕುತ್ತಿದ್ದರೆ, ಅಲ್ಲಿದ್ದ ಟ್ರಾಫಿಕ್ ಎಸಿಪಿ ವಾಹನದಲ್ಲಿಯೇ ಐಎನ್ ಡಿ ನಂಬರ್ ಪ್ಲೇಟ್ ಇರಲಿಲ್ಲ. 

ಟ್ರಾಫಿಕ್ ಎಸಿಪಿಯವರ ಇಲಾಖಾ ವಾಹನದ ಮುಂದಿನ ನಂಬರ್ ಪ್ಲೇಟ್ ನಲ್ಲಿ ಐಎನ್ ಡಿ ಇದ್ದರೆ ಹಿಂದುಗಡೆ ನಂಬರ್ ಪ್ಲೇಟಲ್ಲಿ IND ಇರಲಿಲ್ಲ. ಸ್ವತಃ ಪೊಲೀಸ್ ಕಮಿಷನರ್ ಅವರೇ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಅಲ್ಲಿಯೇ ನಿಲ್ಲಿಸಿದ್ದ ತಮ್ಮ ಇಲಾಖೆಯ ವಾಹನದಲ್ಲಿಯೇ ಆ ರೀತಿಯ ನಂಬರ್ ಪ್ಲೇಟ್ ಇರಲಿಲ್ಲ. ಬಡ ಟ್ಯಾಕ್ಸಿ ಚಾಲಕರಿಗೆ ದಂಡ ವಿಧಿಸುತ್ತಿದ್ದರು ಎಂದು ತೊಕ್ಕೊಟ್ಟಿನ ಟ್ಯಾಕ್ಸಿ ಚಾಲಕರು ಹೆಡ್ ಲೈನ್ ಕರ್ನಾಟಕ ಗಮನಕ್ಕೆ ತಂದಿದ್ದಾರೆ.

ಮಂಗಳೂರಿನಲ್ಲಿ ಸ್ಪೆಷಲ್ ಟ್ರಾಫಿಕ್ ಡ್ರೈವ್ ; ಒಂದೇ ದಿನ 550 ಕೇಸು, ಬರೋಬ್ಬರಿ 2.75 ಲಕ್ಷ ಕಲೆಕ್ಷನ್ !  

Special drive against defective number plates in Mangalore 900 vehicles fined 4.50 lakh fine collected. Traffic police department started a week-long campaign in the city with a view of safety of public. They are checking the percentage of tint of the vehicles using Tint Check Meter on Monday September 27. Huge number of vehicles are running under the limits of city commissionerate. Accidents and crimes on road are on the rise. Hence, the traffic drive campaign is started by the police.