ಕೊರೊನಾ ಓಡಿಸಲು ಬಂದ ಹಾಲಿವುಡ್​​​ ಡೆವಿಲ್​​ ; ರವಿ ವಿಶಿಷ್ಟ ಪ್ರಯತ್ನಕ್ಕೆ ಜನಸ್ಪಂದನೆ

11-09-20 05:22 pm       Mangalore Correspondent   ಕರಾವಳಿ

ಹಾಲಿವುಡ್‌ನ ಡೆವಿಲ್ ಅವತಾರದಲ್ಲಿ ಕಾಣಿಸಿಕೊಂಡ ರವಿ ಕಟಪಾಡಿ.

ಉಡುಪಿ, ಸೆಪ್ಟೆಂಬರ್ 11: ಅಷ್ಟಮಿ ಬಂತಂದ್ರೆ ಪ್ರತಿ ವರ್ಷ ಉಡುಪಿಯಲ್ಲಿ ವೇಷಗಳದ್ದೇ ಅಬ್ಬರ. ‌ಆದ್ರೆ ಈ ಬಾರಿ ಕೊರೊನಾದಿಂದಾಗಿ ಕೃಷ್ಣನೂರಿನಲ್ಲಿ ವೇಷಗಳ ಅಬ್ಬರಕ್ಕೆ ಬ್ರೇಕ್ ಬಿದ್ದಿದೆ. ಆದರೆ ಪ್ರತೀ ಬಾರಿ ವಿಶಿಷ್ಟ ವೇಷದ ಮೂಲಕ ಗಮನ ಸೆಳೆಯುವ ರವಿ ಕಟಪಾಡಿ ಈ ಬಾರಿ ಹಾಲಿವುಡ್​​​ ಡೆವಿಲ್​​ ಆಗಿ ಮಿಂಚುತ್ತಿದ್ದಾರೆ.

ರವಿ ಕಟಪಾಡಿ ಈ ಬಾರಿ ಕೊರೊನಾ ವಿರುದ್ಧ ಅರಿವು ಮೂಡಿಸಲು ವಿಶೇಷ ವೇಷದ ಮೂಲಕ‌ ಸುದ್ದಿಯಾಗ್ತಿದ್ದಾರೆ. ಹಾಲಿವುಡ್ ಡೆವಿಲ್ ಎನ್ನುವ ಹೆಸರಲ್ಲಿ ವಿಶಿಷ್ಟ ವೇಷ ತೊಟ್ಟಿರುವ ರವಿಯವರು, ಎರಡು ದಿನಗಳ‌ ಕಾಲ ಹಳ್ಳಿ ಹಳ್ಳಿಗೆ ತೆರಳಿ ಕೊರೊನಾ ವೇಷದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

ಪ್ರತಿವರ್ಷ ರವಿ ವಿಶೇಷ ವೇಷಗಳ‌ನ್ನು ಧರಿಸಿ ಹಣ ಸಂಗ್ರಹಿಸಿ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದರು. ಈ ಬಾರಿ ಮಾತ್ರ ಕೊರೊನಾದಿಂದಾಗಿ ಫಂಡ್ ಕಲೆಕ್ಟ್ ಮಾಡುವುದನ್ನು ನಿಲ್ಲಿಸಿದ್ದಾರೆ. ಈವರೆಗೆ ಕಷ್ಟದಲ್ಲಿರುವ ಮಂದಿ ಮತ್ತು ಭೀಕರ ಕಾಯಿಲೆಯಿಂದ ಬಳಲುತ್ತಿರುವ 58 ಮಂದಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ಸಹಾಯವನ್ನು ರವಿ ಕಟಪಾಡಿ ಮಾಡಿದ್ದಾರೆ.

ವೃತ್ತಿಯಲ್ಲಿ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿರುವ ರವಿ ಕಟಪಾಡಿ ಅಷ್ಟಮಿ‌ ಬಂದ ಕೂಡಲೇ ಅವರ ತಂಡದೊಂದಿಗೆ ವಿಶೇಷ ವೇಷದ ಮೂಲಕ ಗಮನ ಸೆಳೆಯುತ್ತಾರೆ. ರವಿಯವರ ಸಾಮಾಜಿಕ ಕಾಳಜಿ ಜೊತೆಗೆ ಅಪರೂಪದ ವೇಷಭೂಷಣ ಜನರ ಮನಗೆದ್ದಿದೆ.

Join our WhatsApp group for latest news updates