ಹೆಣ್ಮಕ್ಕಳಿಗೆ ಕಡಿಮೆ ಫೀಸಿನಲ್ಲಿ ಡಿಪ್ಲೊಮಾ ಇಂಜಿನಿಯರಿಂಗ್ ಅವಕಾಶ ; ಫೀಸು ರೂ.1430 ಮಾತ್ರ !

12-09-20 01:04 pm       Mangalore Correspondent   ಕರಾವಳಿ

ಕರ್ನಾಟಕ ಸರಕಾರದ ಅಧೀನದಲ್ಲಿರುವ ಈ ಪಾಲಿಟೆಕ್ನಿಕ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಸೆಪ್ಟೆಂಬರ್ 16 ರ ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಮಂಗಳೂರು, ಸೆಪ್ಟೆಂಬರ್ 11: ಮಂಗಳೂರಿನ ಬೋಂದೆಲ್ ಜಂಕ್ಷನ್ ನಲ್ಲಿರುವ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರಕಾರದ ಅಧೀನದಲ್ಲಿರುವ ಈ ಪಾಲಿಟೆಕ್ನಿಕ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಸೆಪ್ಟೆಂಬರ್ 16 ರ ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಡಿಪ್ಲೊಮಾಗೆ ಆಯ್ಕೆಯಾದ ಅಭ್ಯರ್ಥಿಗಳು ವರ್ಷಕ್ಕೆ ಕೇವಲ ರೂ.1430 ಮಾತ್ರ ಫೀಸು ಪಾವತಿಸಬೇಕಷ್ಟೆ. ಇಷ್ಟೊಂದು ಕಡಿಮೆ ದರದಲ್ಲಿ ಡಿಪ್ಲೊಮಾ ಕಲಿಯಲು ಹೆಣ್ಣುಮಕ್ಕಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆ ತಿಳಿಸಿದೆ. 

ಲಭ್ಯವಿರುವ ಕೋರ್ಸ್ ವಿವರ ಇಂತಿವೆ :

  1. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್,
  2. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್,
  3. ಕಮರ್ಷಿಯಲ್ ಪ್ರಾಕ್ಟೀಸಸ್( ಕನ್ನಡ, ಇಂಗ್ಲೀಷ್) 
  4.  ಲೈಬ್ರರಿ ಅಂಡ್ ಇನ್‍ಫಾರ್‍ಮೇಷನ್ ಸೈನ್ಸ್ 

ಆನ್ ಲೈನ್ ನಾನ್ ಇಂಟರಾಕ್ಟಿವ್ ಕೌನ್ಸಿಲ್ (ಆನ್‍ಲೈನ್ ಆಪ್ಷನ್ ಎಂಟ್ರಿ) ನಡೆಸುವ ಮೂಲಕ ರಾಜ್ಯದ ಯಾವುದೇ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶ ಪಡೆಯಬಹುದಾದ ವ್ಯವಸ್ಥೆಯನ್ನು ಸರ್ಕಾರವು ಅಳವಡಿಸಿದೆ. ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿ ಸಲ್ಲಿಸಲು ವೆಬ್‍ಸೈಟ್ ಅಥವಾ dtek.Karnataka.gov.in ಸಂಪರ್ಕಿಸಬಹುದು.  

ವಿವಿಧ ಪ್ರವರ್ಗಗಳಡಿ ಹಾಗೂ ವಿಶೇಷ ಮೀಸಲಾತಿಯಡಿ ಪ್ರವೇಶ ಬಯಸಿದ್ದಲ್ಲಿ ಸಂಬಂಧಿಸಿದ ದಾಖಲಾತಿಗಳನ್ನು ಅಪ್‍ಲೋಡ್ ಮಾಡಲು ಸಂಸ್ಥೆಯ ಪ್ರಾಂಶುಪಾಲರ ನೇತೃತ್ವದಲ್ಲಿ ಬೋಧಕ ಸಿಬ್ಬಂದಿಯವರ ಸಹಕಾರದೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಗಳೂರು, ದೂರವಾಣಿ ಸಂಖ್ಯೆ 0824-2482334, 9480744667 ಸಂಪರ್ಕಿಸುವಂತೆ ಸಂಸ್ಥೆಯ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Join our WhatsApp group for latest news updates