ನಳಿನ್ ವೈಫಲ್ಯ ; ರಾಜ್ಯಾಧ್ಯಕ್ಷ ಪಟ್ಟ ನಿಮ್ಮ ಭಿಕ್ಷೆಯಲ್ಲ ಎಂದ ಜಿಲ್ಲಾಧ್ಯಕ್ಷರ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು, ಜಾಲತಾಣದಲ್ಲಿ ತೀವ್ರ ಆಕ್ರೋಶ  

16-12-21 10:20 pm       HK Desk news   ಕರಾವಳಿ

ಕಾರ್ಯಕರ್ತರ ಆಕ್ರೋಶಕ್ಕೆ ಈಡಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪರವಾಗಿ ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಸುದ್ದಿಗೋಷ್ಠಿ ನಡೆಸಿ, ಕಾರ್ಯಕರ್ತರ ವಿರುದ್ಧ ಹರಿಹಾಯ್ದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ.

 ಮಂಗಳೂರು, ಡಿ.16 : ಕಾರ್ಯಕರ್ತರ ಆಕ್ರೋಶಕ್ಕೆ ಈಡಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪರವಾಗಿ ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಸುದ್ದಿಗೋಷ್ಠಿ ನಡೆಸಿ, ಕಾರ್ಯಕರ್ತರ ವಿರುದ್ಧ ಹರಿಹಾಯ್ದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ. ಸುದರ್ಶನ ಮೂಡುಬಿದ್ರೆ ವಿರುದ್ಧ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಿಡಿಕಾರುವ ಕಮೆಂಟ್ ಗಳನ್ನು ಹಾಕಿದ್ದಾರೆ.

ರಾಜ್ಯಾಧ್ಯಕ್ಷರು ರಾಜಿನಾಮೆ ನೀಡಲು ನೀವು ನೀಡಿದ ಭಿಕ್ಷೆಯಲ್ಲ, ಅತೃಪ್ತ ಆತ್ಮಗಳು ಎಂಬ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಯ ಬಗ್ಗೆ ಬಹಳಷ್ಟು ಜನ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಧ್ಯಕ್ಷರು ಹೇಳಿದ ಹಾಗೆ ಕೇಳೋದು, ಬಕೆಟ್ ಹಿಡಿಯೋದು ಈಗಿನ ರಾಜಕೀಯ. ಯಾರೆಲ್ಲ ತಪ್ಪನ್ನು ತಪ್ಪು ಎಂದು ಹೇಳುತ್ತಾರೋ ಅವರೆಲ್ಲ ಅತೃಪ್ತ ಆತ್ಮಗಳು ಇವರ ಲೆಕ್ಕದಲ್ಲಿ... ನಾವು ಬಿಜೆಪಿಗೆ ವೋಟ್ ಹಾಕಿದ್ದು ಮೋದಿ ಮುಖ ನೋಡಿ, ನಿಮ್ಮ ಮುಖಕ್ಕೆ ಅಲ್ಲ... ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡುತ್ತೇವೆ, ನಿಮಗೆ.. ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು ರಾಜ್ಯಾಧ್ಯಕ್ಷ ಪಟ್ಟ ಬಿ.ಎಲ್.ಸಂತೋಷ್ ಕೊಟ್ಟ ಭಿಕ್ಷೆ ಎನ್ನುವುದು ಗೊತ್ತಿದೆ. ಈ ನಳಿನ್ ಕುಮಾರ್, ಸತ್ಯಜಿತ್ ಸುರತ್ಕಲ್, ಶರಣ್ ಪಂಪ್ವೆಲ್, ಅರುಣ್ ಪುತ್ತಿಲ ಅವರನ್ನು ಹೇಗೆ ಬಲಿಪಶು ಮಾಡಿದರು ಅನ್ನೋದು ಗೊತ್ತಿದೆ... ಇದು ನಾವೇ ಕೊಟ್ಟ ಭಿಕ್ಷೆ. ಅಧಿಕಾರದ ಅಮಲಿನಲ್ಲಿ ಬೊಗಳುವುದು ಬೇಡ.. ನಾವೇನು ಗುಲಾಮರ ಪಕ್ಷದವರಲ್ಲ... ಕಳೆದ ಸಲ ಮೋದಿಜಿ ಮುಖ ನೋಡಿ ಓಟು ಹಾಕಿದ್ದೇವೆ. ಈ ಸಲ ಮತ್ತೆ ಏನಾದ್ರೂ  ನಾಲಾಯಕ್ ಎಂಪಿಗೆ ಟಿಕೆಟ್ ಕೊಟ್ಟರೆ ನಮ್ಗೆ ನಿಮ್ಮನ್ನು ಹೇಗೆ ಇಳಿಸಬೇಕು ಅಂತ ಗೊತ್ತಿದೆ.. ನಿಮ್ಮ ಬಕೆಟ್ ಹಿಡಿಯುವ ನಾಲ್ಕು ಜನರನ್ನು ಇಟ್ಕೊಂಡು ಹೇಗೆ ಗೆಲ್ಲಿಸ್ತೀರಾ.. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಕತ್ತಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ತೋರಿಸಲಿ. ಮೋದಿ ಹವಾದಿಂದ ಗೆದ್ದು ಪೋಸು ಕೊಡೋದಲ್ಲಾ... ಮೋದಿ ಇರೋದ್ರಿಂದ ಗೆಲ್ಲೋದು ವಿನಾ ನಿನ್ನ ರಾಜ್ಯಾಧ್ಯಕ್ಷನಿಂದ ಅಲ್ಲ.. ನಾವು ಮೋದಿಗೆ ಹಾಕಿದ ಭಿಕ್ಷೆಯಿಂದ ನಿನ್ನ ರಾಜ್ಯಾಧ್ಯಕ್ಷ ಅಧಿಕಾರದಲ್ಲಿರುವುದು.. ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಆದರೆ ನಾಯಕರನ್ನು ವಿಷಯಾಧಾರಿತವಾಗಿ ಪ್ರಶ್ನಿಸಬಾರದು. ಪ್ರಶ್ನಿಸಿದರೆ ಕಾಂಗ್ರೆಸ್ ಏಜಂಟ್ ಎಂಬ ಬಿರುದು.. ಮೋದಿ ಹೆಸರಲ್ಲಿ ವಿಜಯಿಯಾದ ಸಂಸದರಲ್ಲಿ ಕೆಲಸ ಮಾಡದಾಗಲೇ ರಾಜಿನಾಮೆ ಕೇಳುವುದು.. ಸಂಸದರು ಸಂಘದಲ್ಲಿ ಪ್ರಚಾರಕರಾಗಿ ಕೆಲಸ ಮಾಡಿಲ್ಲ. ಯಾಕಂದರೆ, ಅವರಿಗೆ ಆ ಕೆಲಸ ಮಾಡಲು ಅರ್ಹತೆಯ ಕೊರತೆ ಇತ್ತು. ಅದು ನಿಮಗೂ ಏನೆಂಬುದು ಗೊತ್ತು. ಮೋದಿಜೀಯ ಆದರ್ಶ ನಗರ ವಾರಣಾಸಿ ಹೇಗಿದೆ, ನಳಿನಣ್ಣನ ಆದರ್ಶನ ಗ್ರಾಮ ಬಳ್ಪ ಹೇಗಿದೆ.. ಎಂದು ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಕರಾವಳಿಯ ಸಂಘ ಪರಿವಾರದ ಕಾರ್ಯಕರ್ತರು ಕಿಡಿ ಕಾರುತ್ತಿದ್ದು, ಇದೇ ವಿಚಾರ ಸಂಘ ಪರಿವಾರದೊಳಗೆ ಒಡಕು ಸೃಷ್ಟಿಸಿದೆ. ಲವ್ ಜಿಹಾದ್ ವಿಚಾರದಲ್ಲಿ ಹೊತ್ತಿದ ಕಿಡಿ ಸಂಸದರ ವೈಫಲ್ಯದ ಬಗ್ಗೆ ಜನರು ಪ್ರಶ್ನೆ ಮಾಡುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಒಳಗಿನ ಅಸಮಾಧಾನವನ್ನೂ ಹೊರಹಾಕಿದೆ.

ಇದೇ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ನಳಿನ್ ಕುಮಾರ್ ಬೆಂಬಲಿಗರು ಸೋಶಿಯಲ್ ಮೀಡಿಯಾದಲ್ಲಿ ನಳಿನ್ ಕುಮಾರ್ ಗೆ ಸಂಘ ಹೇಳಿಕೊಡುತ್ತದೆ ಎಂಬ ಟ್ಯಾಗ್ ಲೈನಲ್ಲಿ ಪೋಸ್ಟ್ ಹಾಕಿದ್ದಕ್ಕೂ ಸಂಘ ಪರಿವಾರದ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಕೆಟ್ ರಾಜಕೀಯ ಅನ್ನುವ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರು, ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಕೂಡ ಕಿಡಿಕಾರುವ ಕಮೆಂಟ್ ಗಳನ್ನು ಹಾಕಿದ್ದಾರೆ.

ರಾಜ್ಯಾಧ್ಯಕ್ಷ ರಾಜಿನಾಮೆ ನೀಡಲು ನೀವು ಕೊಟ್ಟ ಭಿಕ್ಷೆಯಲ್ಲ, ಇದರ ಹಿಂದೆ ಅತೃಪ್ತ ಆತ್ಮಗಳಿವೆ, ಕಾಣದ ಕೈಗಳಿವೆ ; ಕಾರ್ಯಕರ್ತರ ವಿರುದ್ಧ ಹರಿಹಾಯ್ದ ಬಿಜೆಪಿ ಜಿಲ್ಲಾಧ್ಯಕ್ಷ !

Mangalore Facebook loaded with hate posts and comments by Vhp and Bagarang Dal members against Nalin and Sudarshan Moodbidri. Mangalore Nalin Kumar Kateel is BJP president not by begging a statement that was made by Sudarshan Moodbidri to VHP leaders has gone controversy on social media. The Bajarang Dal and VHP members are constantly making campaigns on social media demanding the resignation of BJP state president Nalin Kumar Kateel.