ಬ್ರೇಕಿಂಗ್ ನ್ಯೂಸ್
21-12-21 12:19 pm Mangalore correspondent ಕರಾವಳಿ
ಮಂಗಳೂರು, ಡಿ.21: ನೋಡಿದರೆ ನೋಡುತ್ತಲೇ ಇರಬೇಕೆನ್ನುವ ಸ್ಫುರದ್ರೂಪಿ. ಸೌಂದರ್ಯವೇ ಮೈವೆತ್ತಿ ನಿಂತಂತಿರುವ ಅಪೂರ್ವ ಚೆಲುವೆ. ಇನ್ನೇನು ಎಂಬಿಬಿಎಸ್ ಪೂರೈಸಿ, ಕೆಲವೇ ದಿನಗಳಲ್ಲಿ ವೈದ್ಯೆಯಾಗುವ ಕನಸನ್ನೂ ಈಡೇರಿಸಿಕೊಳ್ಳುತ್ತಿದ್ದಳು. ಆದರೆ ಹರೆಯದ ಮನಸ್ಸಿನ ತಲ್ಲಣ, ಲಂಗು ಲಗಾಮು ಇಲ್ಲದ ಮೆಡಿಕಲ್ ಕಾಲೇಜಿನ ಮೈಮಾಟ, ಹರೆಯದ ಹುಡುಗಾಟಿಕೆಯ ಹುಚ್ಚಾಟ ಆಕೆಯ ಜೀವವನ್ನೇ ಆಹುತಿ ಪಡೆದಿದೆ.
ಹೌದು... ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ನಡೆಸುತ್ತಿದ್ದ ವೈದ್ಯೆ ವೈಶಾಲಿ ಗಾಯಕ್ವಾಡ್ (25) ಆತ್ಮಹತ್ಯೆ ಮಾಡಿಕೊಂಡಿದ್ದೇ ಅಚಾನಕ್ ಮತ್ತು ಹುಚ್ಚುತನದಿಂದ ಎನ್ನುವ ಮಾತುಗಳು ಕೇಳಿಬಂದಿವೆ. ಭಾನುವಾರ ಬೆಳಗ್ಗೆ ತಾನು ವಾಸವಿದ್ದ ಕುತ್ತಾರಿನ ಅಪಾರ್ಟ್ಮೆಂಟಿನಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರುವ ವೈಶಾಲಿಗೆ ಪ್ರೀತಿಯಲ್ಲಿ ಭ್ರಮ ನಿರಸನ ಆಗಿತ್ತೋ, ಪ್ರೀತಿಯ ನೆಪದ ಅಮಲು ಆವರಿಸಿಕೊಂಡಿತ್ತೋ ಗೊತ್ತಿಲ್ಲ.
ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ, ಆನಂತರ ಇಂಟರ್ನೀ ಆಗಿ ಅದೇ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡುತ್ತಿದ್ದಳು. ಇಂಥ ಹುಡುಗಿ ಯಾರೂ ಊಹಿಸದ ರೀತಿಯಲ್ಲಿ ಸಾವು ಕಂಡಿದ್ದಾಳೆ. ಬೀದರ್ ಜಿಲ್ಲೆಯ ಆನಂದ್ ನಗರದ ನಿವಾಸಿಯಾಗಿದ್ದ ವೈಶಾಲಿ ಐದು ವರ್ಷಗಳ ಹಿಂದೆ 2016ರಲ್ಲಿ ಎಂಬಿಬಿಎಸ್ ಕಲಿಯಲು ಕಣಚೂರು ಕಾಲೇಜು ಸೇರಿದ್ದಳು. ಅತ್ಯಂತ ಪ್ರತಿಭಾನ್ವಿತೆಯಾಗಿದ್ದ ವೈಶಾಲಿ, ಸರಕಾರಿ ಕೋಟಾದಲ್ಲಿ ಖಾಸಗಿ ಕಾಲೇಜಿನಲ್ಲಿ ಮೆರಿಟ್ ಸೀಟು ಪಡೆದಿದ್ದಳು. ಅಂದು ಕಾಲೇಜಿಗೆ ಸೇರಿಸಿದ್ದ ಹೆತ್ತವರ ಕೈಗಳು ಇಂದು ಆಕೆಯ ಮೃತದೇಹವನ್ನು ನೋಡಿದ್ದು ತಮ್ಮ ಕಣ್ಣುಗಳನ್ನೇ ನಂಬದಾಗಿದ್ದರು.
ವೈಶಾಲಿ ಎಂಬಿಬಿಎಸ್ ಕಲಿಯುತ್ತಿದ್ದಾಗ ಅಲ್ಲಿ ಪರಿಚಯ ಆಗಿದ್ದ ತನಗಿಂತ ಒಂದು ವರ್ಷ ಕಿರಿಯನಾದ ಕೇರಳದ ಪಾಲಕ್ಕಾಡ್ ಮೂಲದ ಸುಜೀಶ್(24) ಜೊತೆಗೆ ಲವ್ವಲ್ಲಿ ಬಿದ್ದಿದ್ದಳು. ಮೂರು ವರ್ಷದಿಂದ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ದ ಈ ಜೋಡಿ ಮದುವೆಯಾಗುವುದಕ್ಕೂ ನಿರ್ಧರಿಸಿತ್ತು. ಸುಜೀಶ್, ಆಕೆಯನ್ನು ತನ್ನ ಪಾಲಕ್ಕಾಡಿನ ಮನೆಗೂ ಕರೆದೊಯ್ದಿದ್ದ. ಮದುವೆಯ ವಿಚಾರ ಎರಡೂ ಕುಟುಂಬಗಳಲ್ಲಿ ಪ್ರಸ್ತಾಪವಾಗಿದ್ದು, ಒಪ್ಪಿಗೆ ದೊರಕಿತ್ತು. ಇನ್ನೇನು ಸ್ವರ್ಗಕ್ಕೆ ಎರಡೇ ಮೆಟ್ಟಿಲು ಅನ್ನುವ ರೀತಿ ಜೋಡಿ ವಿಹರಿಸಿದ್ದೂ ಆಗಿತ್ತು. ಮೇಲಾಗಿ ಕುತ್ತಾರಿನ ಒಂದೇ ಅಪಾರ್ಟ್ಮೆಂಟ್ ನಲ್ಲಿ ಇವರಿಬ್ಬರೂ ವಾಸವಿದ್ದರು. ಎಂಟನೇ ಮಹಡಿಯಲ್ಲಿ ತನ್ನ ಗೆಳೆತಿಯರ ಜೊತೆಗೆ ವೈಶಾಲಿ ಇದ್ದರೆ, 12ನೇ ಮಹಡಿಯಲ್ಲಿ ತನ್ನ ಗೆಳೆಯರ ಜೊತೆ ಸುಜೀಶ್ ಇದ್ದ. ಇವರಿಬ್ಬರ ಸ್ನೇಹ ಉಳಿದವರಿಗೂ ತಿಳಿದಿತ್ತು.
ಆದರೆ, ಇವರ ನಡುವೆ ಇತ್ತೀಚಿನ ದಿನಗಳಲ್ಲಿ ಅದೇನಾಗಿತ್ತೋ ಗೊತ್ತಿಲ್ಲ. ಸಣ್ಣ ಸಣ್ಣ ವಿಷಯಗಳಲ್ಲಿ ವೈಮನಸ್ಸು ಉಂಟಾಗಿತ್ತು. ಸುಜೀಶ್ ಹೊರಗೆ ಹೋಗುತ್ತಿದ್ದ ಸಂದರ್ಭದಲ್ಲಿ ವೈಶಾಲಿ ಡೌಟ್ ಮಾಡುತ್ತಿದ್ದಳು. ಪ್ರತಿ ಬಾರಿ ಫೋನ್ ಮಾಡಿ, ವಾಟ್ಸಪ್ ಕರೆ ಮಾಡು, ವಿಡಿಯೋ ಕಳಿಸು.. ನೀನಿರುವ ಜಾಗದ ಫೋಟೋ ಕಳಿಸು ಎಂದು ಪೀಡಿಸುತ್ತಿದ್ದಳಂತೆ. ಈ ಬಗ್ಗೆ ಸುಜೀಶ್ ಹೇಳಿಕೊಂಡಿದ್ದು, ಆಕೆಯ ಈ ರೀತಿಯ ವರ್ತನೆಯಿಂದ ರೋಸಿಹೋಗಿದ್ದೆ. ಇದರಿಂದ ಇತ್ತೀಚೆಗೆ ಮಾನಸಿಕ ತಜ್ಞರನ್ನೂ ಭೇಟಿಯಾಗಿದ್ದೆ. ಅದೇ ಬೇಸರದಲ್ಲಿ ಒಂದು ವಾರದಿಂದ ಫೋನನ್ನು ಸ್ವಿಚ್ ಆಫ್ ಮಾಡಿದ್ದೆ ಎಂದು ಹೇಳುತ್ತಾನೆ. ಆದರೆ, ಈತ ಫೋನ್ ಸ್ವಿಚ್ ಆಫ್ ಮಾಡಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ವೈಶಾಲಿ, ಅದೇ ಬೇಸರದಲ್ಲಿ ಲೋಕವನ್ನೇ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾಳೆ.
ಶನಿವಾರ ಕೊನೆಯ ಬಾರಿಗೆ ಸುಜೀಶ್ ನನ್ನು ಭೇಟಿಯಾಗಿದ್ದ ವೈಶಾಲಿ, ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಳು. ತನ್ನ ಪ್ರೀತಿಗೆ ನೀನು ಕೊಡುತ್ತಿರುವ ಗೌರವ ಇಷ್ಟೇನಾ ಎಂದು ಕೇಳಿ, ದುಃಖ ತೋಡಿಕೊಂಡಿದ್ದಳು. ಆದರೆ, ಸುಜೀಶ್ ಆಗ ಏನು ಹೇಳಿಕೊಂಡಿದ್ದನೋ ಗೊತ್ತಿಲ್ಲ. ಈತನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದೇ ಇದ್ದುದನ್ನು ಕಂಡು ವೈಶಾಲಿ ತನ್ನ ಬಾಳನ್ನೇ ಕೊನೆಗೊಳಿಸಲು ನಿರ್ಧರಿಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಶನಿವಾರ ಹಾಗೆ ಭೇಟಿಯಾಗಿ ಹೋಗಿದ್ದ ವೈಶಾಲಿ ಮರುದಿನ ಬೆಳಗ್ಗೆ ಏಳಲೇ ಇಲ್ಲ. ಬದಲಾಗಿ, ನಸುಕಿನಲ್ಲೇ ಕೊಠಡಿ ಬಾಗಿಲು ಮುಚ್ಚಿಕೊಂಡು ನೇಣಿಗೆ ಶರಣಾಗಿದ್ದಾಳೆ. ಈಕೆಯ ಬಗ್ಗೆ ತಿಳಿದಿದ್ದ ಇತರ ಗೆಳತಿಯರು ಬೆಳಗ್ಗೆ ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಗೆಳೆಯರಿಗೆ ಮತ್ತು ಪೊಲೀಸರಿಗೆ ತಿಳಿಸಿ, ಬಾಗಿಲು ಒಡೆದು ನೋಡಿದಾಗ ವೈಶಾಲಿ ಬಾರದ ಲೋಕಕ್ಕೆ ಹೋಗಿದ್ದಳು. ಒಂದು ಕ್ಷಣದ ಸಿಟ್ಟು, ಪ್ರೀತಿಯ ಹೆಸರಿನಲ್ಲಿ ಮನಸ್ಸಿಗೆ ಘಾಸಿ ಮಾಡಿಕೊಂಡಿದ್ದ ಹುಚ್ಚುತನ ಆಕೆಯ ಬಾಳನ್ನೇ ಆಹುತಿ ತೆಗೆದಿತ್ತು.
ಅಷ್ಟಕ್ಕೂ ವೈಶಾಲಿ ಗಾಯಕ್ವಾಡ್ ಅಂಥ ಮುಗ್ಧ ಮನಸ್ಸಿನವಳಲ್ಲ ಎನ್ನುತ್ತಾರೆ ಕುಟುಂಬಸ್ಥರು. ವೈಶಾಲಿ ಸತ್ತಿದ್ದನ್ನು ತಿಳಿದು ಧಾವಿಸಿ ಬಂದಿದ್ದ ಆಕೆಯ ಹೆತ್ತ ತಾಯಿ ಮತ್ತು ಮಾವಂದಿರು, ತಮ್ಮ ಕೈಯಲ್ಲಿ ಆಡಿ ಬೆಳೆದಿದ್ದ ಕಂದಮ್ಮ ಇನ್ನಿಲ್ಲವಾಗಿದ್ದನ್ನು ನೋಡಿ ಅಳುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ತಂದೆ ವಿಜಯಕುಮಾರ್ ಸರಕಾರಿ ನೌಕರರಾಗಿದ್ದು 2014ರಲ್ಲಿ ರೈಲು ಡಿಕ್ಕಿಯಾಗಿ ಜೀವ ಕಳಕೊಂಡಿದ್ದರು. ಆನಂತರ, ಮಾವಂದಿರು ಮತ್ತು ವೃದ್ಧ ತಾಯಿಯ ಆಶ್ರಯದಲ್ಲಿ ಬೆಳೆದಿದ್ದ ವೈಶಾಲಿ ತುಂಬ ಪ್ರತಿಭಾವಂತೆ ಆಗಿದ್ದುದರಿಂದ ವೈದ್ಯೆಯಾಗುವ ಕನಸು ಈಡೇರಿಸಲು ದೂರದ ಕಣಚೂರು ಕಾಲೇಜಿಗೆ ಸೇರಿಸಿದ್ದರು. ಈಕೆಯ ತಮ್ಮ ಇನ್ನೂ ಕಾಲೇಜು ಓದುತ್ತಿದ್ದಾನೆ. ಇಬ್ಬರೇ ಮಕ್ಕಳು. ಹೆತ್ತ ತಾಯಿಗೆ ಮುದ್ದು ಮಗಳ ಶವವಾಗಿ ಮಲಗಿದ್ದನ್ನು ಕಂಡು ಎದೆ ಒಡೆದು ಹೋದ ಅನುಭವ ಆಗಿತ್ತು. ಬಾಯಿ ತೆರೆಯಲಾಗದೆ ಮೂಕರಾಗಿ ಹೋಗಿದ್ದರು.
ನಾಲ್ಕು ವರ್ಷಗಳ ಹಿಂದೆ ಮೆಡಿಕಲ್ ಓದಿಸಲು ಕರೆತಂದು ಇಲ್ಲಿ ಬಿಟ್ಟು ಹೋಗಿದ್ದೆವು. ಸರಕಾರಿ ಕೋಟಾದಲ್ಲಿ ಸೀಟು ಸಿಕ್ಕಿದ್ದಕ್ಕೆ ಇಷ್ಟು ದೂರ ಬಿಟ್ಟಿದ್ದೆವು. ಇಲ್ಲದಿದ್ದರೆ ಬಿಡುತ್ತಿರಲಿಲ್ಲ. ಆದರೆ ಈಗ ಇದೇ ಕೈಗಳಲ್ಲಿ ಆಕೆಯ ಶವ ಹೊತ್ತು ಸಾಗುವಂತಾಗಿದೆ ಎಂದು ಬಿಕ್ಕಳಿಸಿದರು ಆಕೆಯ ಮಾವ ವಿನೋದ್ ಕುಮಾರ್. ವೈಶಾಲಿ ಸಾಯುವಂಥ ಹುಡುಗಿಯಲ್ಲ. ಇದಕ್ಕೆಲ್ಲ ಸುಜೀಶನೇ ಕಾರಣ. ಆತ ಮದುವೆಯಾಗುತ್ತೇನೆಂದು ಹೇಳಿ ದೂರ ಮಾಡಿದ್ದೇ ಕೃತ್ಯಕ್ಕೆ ಕಾರಣ ಎಂದು ದೂರಿದರು. ಘಟನೆಗೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಸುಜೀಶ್ ವಿರುದ್ಧ ವೈಶಾಲಿ ತಾಯಿ ದೂರು ದಾಖಲಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ದೇರಳಕಟ್ಟೆಯಲ್ಲಿ ಭಾರೀ ಕಾರುಬಾರು !
ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಕೇರಳದ ವಿದ್ಯಾರ್ಥಿಗಳೇ ಹೆಚ್ಚಿದ್ದು, ದೇರಳಕಟ್ಟೆಯಲ್ಲಿ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ ಅನ್ನುವ ಮಾತನ್ನು ಸ್ಥಳೀಯರು ಹೇಳುತ್ತಿದ್ದಾರೆ. ಸಂಜೆಯಾಗುತ್ತಲೇ ಹುಡು- ಹುಡುಗಿ ಅನ್ನುವ ಭೇದ ಇಲ್ಲದೆ ಬಾರ್ ಒಳನುಗ್ಗುವ ವಿದ್ಯಾರ್ಥಿಗಳು ಓಪನ್ನಾಗಿ ಕುಳಿತು ಸಿಗರೇಟ್ ಸೇದುತ್ತಾ ಮದ್ಯ ಕುಡಿಯುತ್ತಾರೆ. ಡ್ರಗ್ಸ್, ಮದ್ಯದ ಅಮಲು, ಈ ರೀತಿಯ ಸ್ವೇಚ್ಛಾಚಾರಗಳೇ ವೈದ್ಯಕೀಯ ಓದುವ ಹರೆಯದ ಯುವ ಹೃದಯಗಳನ್ನು ಇಂಥ ಘೋರ ದುರಂತಗಳಿಗೆ ಕಾರಣವಾಗಿಸುತ್ತಿವೆ ಅನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಕಡಿವಾಣ ಹಾಕಬೇಕಾದ ಕಾಲೇಜಿನ ಆಡಳಿತ ಮೌನದಲ್ಲಿವೆ. ಇತ್ತ ಪೊಲೀಸ್ ವ್ಯವಸ್ಥೆಯೂ ಕಂಡರೂ ಕಾಣದಂತೆ ಕಣ್ಣು ಮುಚ್ಚಿ ಕುಳಿತುಬಿಟ್ಟಿದೆ.
ಪ್ರೀತಿಯಲ್ಲಿ ವೈಮನಸ್ಸು ; ಕಣಚೂರು ಆಸ್ಪತ್ರೆಯ ಯುವ ವೈದ್ಯೆ ನೇಣಿಗೆ ಶರಣು ! ಪ್ರಿಯಕರ ಪೊಲೀಸ್ ವಶಕ್ಕೆ
Mangalore love affair 25 year old MBBS intern dies by suicide at apartment shocking information revealed. the police have arrested her lover named Sujish (24), a native of Palakkad who was studying with her in the same class and staying in the same building. Sources said that Sukesh and Vaishali were in involved in a love affair and some misunderstanding and doubt has lead to suicide. The police have arrested him and has been sent to judicial custody.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am