ಬ್ರೇಕಿಂಗ್ ನ್ಯೂಸ್
23-12-21 06:14 pm HK Impact ಕರಾವಳಿ
ಉಳ್ಳಾಲ, ಡಿ.23 : ಕಸದ ಕೊಂಪೆಯಾಗಿದ್ದ ಕೋಟೆಪುರ ಕಡಲ ತೀರದ ಬಗ್ಗೆ ಹೆಡ್ ಲೈನ್ ಕರ್ನಾಟಕ ಮಾಡಿದ್ದ ವರದಿ ಇಂಪ್ಯಾಕ್ಟ್ ಆಗಿದೆ. ಕಡಲು ಸೇರುತ್ತಿದ್ದ ಕಸದ ಬಗ್ಗೆ ವರದಿ ನೋಡಿದ ಉಳ್ಳಾಲ ನಗರಸಭೆ ಪೌರಾಯುಕ್ತರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಲ್ಲದೆ, ತಕ್ಷಣವೇ ಕಸ ತೆರವು ಕೆಲಸ ಆರಂಭಿಸಿದ್ದಾರೆ.
ಉಳ್ಳಾಲದ ಕೋಟೆಪುರ ಕಡಲ ತೀರದಲ್ಲಿ ಕಸ ಸುರಿಯುತ್ತಿದ್ದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಬಗ್ಗೆ ವರದಿ ಮಾಡಲಾಗಿತ್ತು. ಕಡಲಲ್ಲಿ ಕಸಗಳೇ ತೇಲುತ್ತಿರುವ ಕುರಿತ ಹೆಡ್ ಲೈನ್ ಕರ್ನಾಟಕ ವರದಿಗೆ ಸ್ಪಂದಿಸಿದ ಉಳ್ಳಾಲ ಪೌರಾಯುಕ್ತ ರಾಯಪ್ಪ ಇಂದು ಬೆಳಗ್ಗೆ ಖುದ್ದಾಗಿ ಕೋಟೆಪುರ ಸಮುದ್ರ ತೀರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಬಿದ್ದಿದ್ದ ಟನ್ ಗಟ್ಟಲೆ ಕಸದ ರಾಶಿಯನ್ನ ಗಮಿನಿಸಿದ್ದಲ್ಲದೆ, ಕಡಲು ಸೇರುತ್ತಿದ್ದ ಕಸಗಳನ್ನು ವಿಲೇವಾರಿ ಮಾಡಲು ನಗರಸಭೆಯ ಪೌರ ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ. ಸಮುದ್ರ ತೀರದಲ್ಲಿ ಬಿದ್ದಿರುವ ಟನ್ ಗಟ್ಟಲೆ ಕಸದ ರಾಶಿಯನ್ನ ಹೆಕ್ಕಿ ತೆಗೆದು ವಿಲೇವಾರಿಗೊಳಿಸುವ ಕಾರ್ಯ ನಡೆಸಿದ್ದಾರೆ.
ಇದೇ ವೇಳೆ, ಕೋಟೆಪುರ ಸಮುದ್ರ ತೀರದಲ್ಲಿ ಬಿದ್ದಿರುವ ಕಸದ ರಾಶಿ ಇಲ್ಲಿ ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಫ್ಯಾಕ್ಟರಿಗಳ ಕೋಲ್ಡ್ ಸ್ಟೋರೇಜ್ ಗಳ ತ್ಯಾಜ್ಯವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ತ್ಯಾಜ್ಯ ಸುರಿಯದಂತೆ ಸೂಚನೆ
ಕೋಟೆಪುರದಲ್ಲಿ 10ಕ್ಕೂ ಹೆಚ್ಚು ಫಿಶ್ ಮೀಲ್ ಫ್ಯಾಕ್ಟರಿಗಳಿದ್ದು ಸ್ಥಳಕ್ಕೆ ತೆರಳಿದ ಉಳ್ಳಾಲ ನಗರ ಆಯುಕ್ತ ರಾಯಪ್ಪ ಅವರು ತ್ಯಾಜ್ಯಗಳನ್ನ ಕಡಲಿಗೆ ಬಿಡದಂತೆ ಅವುಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಲ್ಲದೆ ಕಸ ಹಾಕಿದವರ ಪತ್ತೆಗಾಗಿ ಫ್ಯಾಕ್ಟರಿಗಳದ್ದೇ ಸಿಸಿಟಿವಿ ಪರಿಶೀಲಿಸಲು ಮುಂದಾಗಿದ್ದಾರೆ. ಆದರೆ ಆಯುಕ್ತರ ವರಸೆಗೆ ಫ್ಯಾಕ್ಟರಿ ಮುಖ್ಯಸ್ಥರು ಪ್ರತಿ ವರಸೆಯಾಗಿ ಸಿಸಿಟಿವಿ ಫೂಟೇಜ್ ದಾಖಲೆ ಮಂಗಳೂರಿನ ಕಚೇರಿಗಳಲ್ಲಿದೆ ಎಂದು ಸಬೂಬು ನೀಡಿ ನುಣುಚಿಕೊಂಡಿದ್ದಾರೆ. ಪಟ್ಟು ಬಿಡದ ಆಯುಕ್ತ ರಾಯಪ್ಪರು ಸಿಸಿಟಿವಿ ದಾಖಲೆಗಳನ್ನ ನಾಳೆಯೇ ತಂದುಕೊಡುವಂತೆ ಆದೇಶಿಸಿದ್ದಾರೆ.
ಸದ್ಯಕ್ಕೆ ಕೋಟೆಪುರ ಸಮುದ್ರ ತೀರದಲ್ಲಿ ರಾಶಿ ಬಿದ್ದಿರುವ ಟನ್ ಗಟ್ಟಲೆ ಕಸವನ್ನ ನಗರ ಸಭೆ ವಾಹನಗಳಲ್ಲಿ ವಿಲೇವಾರಿ ಮಾಡಲು ಆರಂಭಿಸಿದ್ದು, ಪೂರ್ತಿಯಾಗಿ ತೆರವುಗೊಳ್ಳಲು ಎರಡು ದಿವಸ ತಗುಲಬಹುದು ಎನ್ನಲಾಗುತ್ತಿದೆ. ಕಸ ಸಂಪೂರ್ಣ ವಿಲೇವಾರಿ ನಡೆಸಿದ ಬಳಿಕ ಸ್ಥಳದಲ್ಲಿ ನಗರಸಭೆ ವತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಿ ಸೂಚನಾ ಫಲಕ ಹಾಕಲಾಗುವುದೆಂದು ಉಳ್ಳಾಲ ನಗರಸಭಾ ಆಯುಕ್ತ ರಾಯಪ್ಪ ಅವರು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
BEFORE:
Headline Karnataka News Impact Kotepur beach turns dumping yard in Mangalore, Ullal Town Municipality officer orders for immediate action and garbage that was dumped in tons near by the sea has been completely cleaned up.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm