ಕೊರಗಜ್ಜನ ಬಳಿಕ ಗುಳಿಗಜ್ಜನಿಗೆ ಅವಮಾನ ; ಟಾರ್ಗೆಟ್ ಹಿಂದುತ್ವ ಹೆಸರಲ್ಲಿ ಗುಳಿಗ, ಶಿವಾಜಿ ಬಗ್ಗೆ ಅಶ್ಲೀಲ ಚಿತ್ರಣ ! ಇನ್ ಸ್ಟಾ ಪೇಜ್ ನಲ್ಲಿ ಕಿಡಿಗೇಡಿ ಕೃತ್ಯ!

29-12-21 09:34 pm       Mangalore Correspondent   ಕರಾವಳಿ

ತುಳುನಾಡಿನ ಜನರು ಭಕ್ತಿಯಿಂದ ಆರಾಧಿಸುವ ಗುಳಿಗಜ್ಜ ಮತ್ತು ಮರಾಠಿಗರು ತಮ್ಮ ವಂಶಸ್ಥನೆಂದು ಭಾವಿಸುವ ಶಿವಾಜಿ ಮಹಾರಾಜರನ್ನು ಹೀನಾಯವಾಗಿ ಚಿತ್ರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಹಿಂದುಗಳ ಭಾವನೆಗೆ ಘಾಸಿಗೊಳಿಸುವ ಕಿಡಿಗೇಡಿ ಸಂಚು ನಡೆದಿದೆ.

Photo credits : Headline Karnataka

ಮಂಗಳೂರು, ಡಿ.29 : ತುಳುನಾಡಿನ ಜನರು ಭಕ್ತಿಯಿಂದ ಆರಾಧಿಸುವ ಗುಳಿಗಜ್ಜ ಮತ್ತು ಮರಾಠಿಗರು ತಮ್ಮ ವಂಶಸ್ಥನೆಂದು ಭಾವಿಸುವ ಶಿವಾಜಿ ಮಹಾರಾಜರನ್ನು ಹೀನಾಯವಾಗಿ ಚಿತ್ರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಹಿಂದುಗಳ ಭಾವನೆಗೆ ಘಾಸಿಗೊಳಿಸುವ ಕಿಡಿಗೇಡಿ ಸಂಚು ನಡೆದಿದೆ.

ಸಾಮಾನ್ಯ ಜನರು ಹೆಚ್ಚು ಬಳಕೆ ಮಾಡದ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಇನ್ ಸ್ಟಾ ಗ್ರಾಮ್ ಸೋಶಿಯಲ್ ಮೀಡಿಯಾ ತಾಣದಲ್ಲಿ ಈ ರೀತಿ ಚಿತ್ರಿಸಲಾಗಿದೆ. ಟಾರ್ಗೆಟ್ ಹಿಂದುತ್ವ ಎನ್ನುವ ಹೆಸರಿನ ಪೇಜ್ ನಲ್ಲಿ ಗುಳಿಗನ ಕೋಲದ ವಿಡಿಯೋ ಹಾಕಿ, ಎದುರಲ್ಲಿ ಇಟ್ಟಿದ್ದ ಮದ್ಯದ ಬಾಟಲಿಗಳನ್ನು ವಿಕೃತವಾಗಿ ಚಿತ್ರಿಸಿದ್ದಾರೆ. ಬಿಯರ್ ಗುಳಿಗ ಎಂದು ಹೇಳಿ, ಮುಂದೆ ಹತ್ತು ಬಿಯರ್ ಬಾಟಲಿಗಳು, ಕೈಯಿಂದ ಹಿಚುಕುವ ಬಜಿಲ್ ಬೆಲ್ಲದ ಪ್ರಸಾದ ಎಂದು ಬರೆದು ಅಶ್ಲೀಲವಾಗಿ ಚಿತ್ರಿಸಿದ್ದಾರೆ. ಅಲ್ಲದೆ ಡಿಜಿಟಲ್ ಗುಳಿಗ ಎಂದು ಮೇಲೋಂದು ಟ್ಯಾಗ್ ಲೈನ್ ಕೊಟ್ಟಿದ್ದಾರೆ.  

ಮತ್ತೊಂದು ವಿಡಿಯೋದಲ್ಲಿ ಶಿವಾಜಿ ಮಹಾರಾಜನ ಪ್ರತಿಮೆಯ ತಲೆಗೆ ನಾಯಿ ಹುಚ್ಚೆ ಹೊಯ್ಯುವ ರೀತಿ ಚಿತ್ರಿಸಲಾಗಿದೆ. ಅದೇ ವೇಳೆ, ಹಂದಿ ಮತ್ತು ನಾಯಿ ಮೂಸಿ ನೋಡುತ್ತಿರುವಂತೆ ಮಾಡಲಾಗಿದೆ. ಇನ್ನೊಂದು ವಿಡಿಯೋದಲ್ಲಿ ಲವ್ ಜಿಹಾದ್ ಹೆಸರಲ್ಲಿ ಮುಸ್ಲಿಂ ಬಾಯ್ – ಹಿಂದು ಗರ್ಲ್ ಬೆಸ್ಟ್ ಕಪಲ್ ಎಂದು ಬರೆದು ವಿಕಾರ ಮಾಡಲಾಗಿದೆ. ಟಾರ್ಗೆಟ್ ಹಿಂದುತ್ವ ಎನ್ನುವ ಹೆಸರಿನ ಪೇಜ್ ನಲ್ಲಿ ಈ ರೀತಿ ವಿಕೃತಿ ಮೆರೆದ ಪೋಸ್ಟ್ ಕಂಡುಬಂದಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

ಹಿಂದುಗಳ ಭಾವನೆಗೆ ಘಾಸಿಗೊಳಿಸುವುದಕ್ಕಾಗಿಯೇ ಈ ರೀತಿ ಮಾಡಲಾಗಿದೆ ಅನ್ನುವ ನೆಲೆಯಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರು ಇದರ ಸ್ಕ್ರೀನ್ ಶಾಟ್ ತೆಗೆದು ಹಂಚುತ್ತಿದ್ದಾರೆ. ಫೇಸ್ಬುಕ್ ಮತ್ತು ವಾಟ್ಸಪ್ ಜಾಲತಾಣದಲ್ಲಿ ಇದರ ಸ್ಕ್ರೀನ್ ಶಾಟ್ ಮಾತ್ರ ಇದ್ದು, ಇನ್ ಸ್ಟಾ ಗ್ರಾಮ್ ಏಪ್ ಹೊಂದಿದ್ದವರು ಮಾತ್ರ ಇದನ್ನು ಸರ್ಚ್ ಮಾಡಿ ನೋಡಬಹುದಾಗಿದೆ. ಈವರೆಗೆ ಫೇಸ್ಬುಕ್, ವಾಟ್ಸಪ್ ನಲ್ಲಿ ಮಾತ್ರ ಇರುತ್ತಿದ್ದ ಹಿಂದು ದೇವರ ನಿಂದೆ ಈಗ ಇನ್ ಸ್ಟಾ ಗ್ರಾಮ್ ಪೇಜಿಗೂ ಕಾಲಿಟ್ಟಿದೆ. ಇಂಥ ಪೇಜ್ ಗಳಲ್ಲಿ ಹೆಚ್ಚಾಗಿ ಕಾಲೇಜು ಓದುವ ಯುವಕ- ಯುವತಿಯರು ಹೆಚ್ಚು ಸಕ್ರಿಯರಾಗಿದ್ದಾರೆ.

Mangalore Target Hindutva Instagram page created, Koragajja and Shivaji videos morphed, deformation content posted about deity of Dakshina Kannada. Posts supporting love jihad posted.