ಕಿಚ್ಚು ಹಚ್ಚಿದ ಹಿಜಾಬ್ ; ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ, ಹೈಕೋರ್ಟ್ ತೀರ್ಪು ಬರುವ ವರೆಗೂ ರಥಬೀದಿ ಸರಕಾರಿ ಕಾಲೇಜಿಗೆ ರಜೆ ಘೋಷಣೆ 

05-03-22 02:10 pm       Mangalore Correspondent   ಕರಾವಳಿ

ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಮಂಗಳೂರಿನ ರಥಬೀದಿಯ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ನೀಡಲಾಗಿದೆ. 

ಮಂಗಳೂರು, ಮಾ.5: ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಮಂಗಳೂರಿನ ರಥಬೀದಿಯ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ನೀಡಲಾಗಿದೆ. 

ಕಾಲೇಜಿನಲ್ಲಿ ಕಳೆದ ಎರಡು ದಿನಗಳಿಂದ ಹಿಜಬ್ ವಿಚಾರಕ್ಕೆ ಗೊಂದಲ ಏರ್ಪಟ್ಟಿತ್ತು. ಶುಕ್ರವಾರ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಕೆಲವು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದ್ದು, ಹಿಜಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಗೆ ತೆರಳದಂತೆ ಪ್ರಾಂಶುಪಾಲರು ಸಲಹೆ ಮಾಡಿದ್ದರು. ಅದರಂತೆ, ಹೊರಬಂದ ವಿದ್ಯಾರ್ಥಿನಿಯರು ಆಕ್ಷೇಪಿಸಿದ್ದ ಹುಡುಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 

ಈ ಹಿನ್ನೆಲೆಯಲ್ಲಿ ಮತ್ತೆ ಗೊಂದಲಕ್ಕೆ ಕಾರಣವಾಗದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಾಲೇಜಿಗೆ ಅನಿರ್ದಿಷ್ಟ ಕಾಲ ರಜೆ ಘೋಷಿಸಲಾಗಿದೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಆಂತರಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸದ್ಯ ಆನ್‌ಲೈನ್ ತರಗತಿಯನ್ನು ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಮೆಸೇಜ್ ಕಳುಹಿಸಲಾಗಿದೆ. ಕೆಲವೇ ದಿನಗಳಲ್ಲಿ ಹೈಕೋರ್ಟ್ ತೀರ್ಪು ಬರಲಿದೆ ಎನ್ನಲಾಗುತ್ತಿದ್ದು ಅಲ್ಲೀ ವರೆಗೂ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಮಂಗಳೂರು ನಗರಕ್ಕೂ ಬಂತು ಹಿಜಾಬ್ ಕಿಚ್ಚು ; ಪೊಲೀಸ್ ಠಾಣೆಯೇರಿದ ವಿದ್ಯಾರ್ಥಿನಿಯರು- ವಿದ್ಯಾರ್ಥಿಗಳ ನಡುವಿನ ಮಾತಿನ ಚಕಮಕಿ, ಈವರೆಗಿಲ್ಲದ ವಿವಾದ ಈಗ ಬಂದಿದ್ದು ಹೇಗೆ ?

 

Hijab row in Mangalore Dayanand Pai college declares holiday until further hight court order. Indefinite holiday has been declared for Dayananda Pai-Sathish Pai government first grade college in car street here where Hijab controversy has been vitiating atmosphere for the last three days. Under the instructions of the deputy commissioner of Dakshina Kannada district, all the examinations have been postponed for the present. The college has sent messages to students informing that online classes will be conducted for now. It may be recalled that a second year degree girl student of the college has complained to Bunder police station about blocking entry of Hijab clad girls at the college and engaging in verbal friction.