ಬ್ರೇಕಿಂಗ್ ನ್ಯೂಸ್
17-03-22 02:26 pm Mangalore Correspondent ಕರಾವಳಿ
ಮಂಗಳೂರು, ಮಾ.17: ಒಂದ್ಕಡೆ ಸುರತ್ಕಲ್ ಟೋಲ್ ಗೇಟ್ ವಿರೋಧಿಸಿ ಹೋರಾಟ, ಮತ್ತೊಂದ್ಕಡೆ ಸಂಸದ ನಳಿನ್ ಕುಮಾರ್ ಮತ್ತು ಸಚಿವ ನಿತಿನ್ ಗಡ್ಕರಿಯಿಂದ ಸಭೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸುರತ್ಕಲ್ ಟೋಲ್ ಗೇಟನ್ನು ಎನ್ಎಂಪಿಟಿ ಬಂದರಿನೊಳಗೆ ಸ್ಥಳಾಂತರಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಇದೇ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಸುರತ್ಕಲ್ ಟೋಲ್ ಗೇಟ್ ಗುತ್ತಿಗೆಯನ್ನು ಹೊಸ ಕಂಪನಿಗೆ ನೀಡಲು ಮುಂದಾಗಿದ್ದಾರೆ.
ವಾರದ ಹಿಂದೆ ಟೋಲ್ ಗೇಟ್ ಗುತ್ತಿಗೆ ನೀಡಲು ಹೊಸತಾಗಿ ಬಿಡ್ ಕರೆದಿದ್ದು, ಅದನ್ನು ಗುಜರಾತ್ ಮೂಲದ ಸಂಸ್ಥೆಯೊಂದು ಪಡೆದಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಗುಜರಾತ್ ಸಂಸ್ಥೆ ದಿನದಲ್ಲಿ 11.8 ಲಕ್ಷ ರೂ. ಸಂಗ್ರಹಿಸಿ ಪ್ರಾಧಿಕಾರಕ್ಕೆ ನೀಡುವುದಾಗಿ ಬಿಡ್ ಸಲ್ಲಿಸಿದ್ದು, ಅದನ್ನೇ ಹೈವೇ ಅಧಿಕಾರಿಗಳು ಅಂತಿಮಗೊಳಿಸುವ ಸಾಧ್ಯತೆ ಇದೆ. ಹೆದ್ದಾರಿ ಅಧಿಕಾರಿಗಳು ದಿನವೊಂದರಲ್ಲಿ ಸುರತ್ಕಲ್ ಟೋಲ್ ಗೇಟ್ ನಲ್ಲಿ 13.06 ಲಕ್ಷ ಸಂಗ್ರಹಿಸುವ ಗುರಿ ಇರಿಸಿದ್ದಾರೆ. ಸದ್ಯ ಗುತ್ತಿಗೆ ಹೊಂದಿರುವ ದೆಹಲಿ ಮೂಲದ ಕಂಪನಿ 11.2 ಲಕ್ಷ ರೂ.ಗೆ ಬಿಡ್ ಮಾಡಿದ್ದು ಜನವರಿ 22ರಿಂದ ಮೂರು ತಿಂಗಳ ಗುತ್ತಿಗೆ ಪಡೆದಿದ್ದರು. ಆದರೆ, ಅದಕ್ಕಿಂತಲೂ ಹೆಚ್ಚು ಮೊತ್ತವನ್ನು ಸಂಗ್ರಹಿಸುವ ಟಾರ್ಗೆಟ್ ಇಟ್ಟುಕೊಂಡಿರುವ ಹೈವೇ ಅಧಿಕಾರಿಗಳು, ಅದಕ್ಕಾಗಿ ಮತ್ತೆ ಬಿಡ್ ಕರೆದಿದ್ದರು.
ಸದ್ಯಕ್ಕೆ 15 ಲಕ್ಷ ಆಸುಪಾಸು ದಿನದಲ್ಲಿ ಸಂಗ್ರಹ ಆಗುತ್ತಿದೆ ಎನ್ನಲಾಗಿದ್ದರೂ, ಅದರಲ್ಲಿ ಹೈವೇ ಪ್ರಾಧಿಕಾರಕ್ಕೆ 11 ಲಕ್ಷದಷ್ಟು ಮೊತ್ತವನ್ನು ಗುತ್ತಿಗೆ ಸಂಸ್ಥೆ ನೀಡಬೇಕಾಗಿದೆ. ಆದರೆ, ಕೆಲವು ದಿನಗಳಲ್ಲಿ ಕಡಿಮೆ ಮೊತ್ತ ಸಂಗ್ರಹ ಆಗುವುದರಿಂದ ಟೋಲ್ ಗೇಟ್ ನಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ಈಗಿನ ಗುತ್ತಿಗೆ ಸಂಸ್ಥೆ ಹೇಳುತ್ತದೆ. ದೆಹಲಿ ಮೂಲದ ಸಂಸ್ಥೆ ಗುತ್ತಿಗೆ ಪಡೆದಿದ್ದರೂ, ಸ್ಥಳೀಯವಾಗಿ ಉಡುಪಿ ಮೂಲದ ಬಿಜೆಪಿ ನಾಯಕರು ಸಬ್ ಕಾಂಟ್ರಾಕ್ಟ್ ಪಡೆದು ಟೋಲ್ ಗೇಟ್ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಹೈವೇ ಅಧಿಕಾರಿಗಳು ದಿನದಲ್ಲಿ ಕನಿಷ್ಠ 13 ಲಕ್ಷ ತನಗೆ ಸಿಗಬೇಕು ಅನ್ನುವ ನೆಲೆಯಲ್ಲಿ ಕಳೆದ ಬಾರಿ ಮೂರು ತಿಂಗಳಿಗೆ ಮಾತ್ರ ಟೆಂಡರ್ ನೀಡಿತ್ತು. ಇದೀಗ ಹೈವೇ ಪ್ರಾಧಿಕಾರ ಸದ್ದಿಲ್ಲದೆ, ಹೊಸತೊಂದು ಕಂಪನಿಗೆ ಗುತ್ತಿಗೆಯನ್ನು ನೀಡಲು ಮುಂದಾಗಿದೆ.
ಇದರ ನಡುವೆ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಟೋಲ್ ಗೇಟನ್ನು ಅಲ್ಲಿಂದ ತೆರವುಗೊಳಿಸಿ, ಎನ್ಎಂಪಿಟಿ ಬಂದರು ಒಳಗೆ ಸ್ಥಳಾಂತರಿಸಲು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಚಿವ ಗಡ್ಕರಿ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದು ಯಾವಾಗ ಕಾರ್ಯರೂಪಕ್ಕೆ ಬರುತ್ತೋ ಗೊತ್ತಿಲ್ಲ. ಅದರ ನಡುವೆಯೇ ಹೈವೇ ಅಧಿಕಾರಿಗಳು ಮಾತ್ರ ಮತ್ತೊಂದು ಕಂಪನಿಗೆ ಟೆಂಡರ್ ವಹಿಸಲು ಮುಂದಾಗಿರುವುದು ಗಡ್ಕರಿ ಸೂಚನೆಗೆ ಬೆಲೆ ಇಲ್ಲವೇ ಅನ್ನುವ ಪ್ರಶ್ನೆ ಮೂಡಿಸಿದೆ. ಕೇವಲ 9 ಕಿಮೀ ಅಂತರದಲ್ಲಿರುವ ಈ ಅಕ್ರಮ ಟೋಲ್ ಗೇಟನ್ನು ತೆರವು ಮಾಡಲೇಬೇಕೆಂದು ಟೋಲ್ ಗೇಟ್ ವಿರೋಧಿ ಸಮಿತಿ ಹೋರಾಟ ಕೈಗೆತ್ತಿಕೊಂಡಿದ್ದು, ಮಾ.22ರಂದು ಕಾಲ್ನಡಿಗೆ ಜಾಥಾ ನಡೆಸಲು ದಿನ ನಿಗದಿಪಡಿಸಿದೆ. ಹಲವು ಬಾರಿ ಹೋರಾಟ, ಪ್ರತಿಭಟನೆ ನಡೆದಿದ್ದರೂ, ಹೈವೇ ಅಧಿಕಾರಿಗಳು ಮಾತ್ರ ತನಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಟೋಲ್ ದರ ಮತ್ತೆ ಏರಿಕೆ ಸಾಧ್ಯತೆ
ಪ್ರತಿ ವರ್ಷ ಏಪ್ರಿಲ್ ಆರಂಭದಲ್ಲಿ ದೇಶಾದ್ಯಂತ ಹೆದ್ದಾರಿ ಟೋಲ್ ಗೇಟ್ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ, ಈ ಬಾರಿ ಸುರತ್ಕಲ್ ಟೋಲ್ ಗೇಟ್ ನಲ್ಲಿಯೂ ದರವನ್ನು ಏರಿಕೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇದೆ. ಸ್ಥಳೀಯರ ವಿರೋಧ ಮಧ್ಯೆಯೂ ಕಳೆದ 2015-16ರಲ್ಲಿ ಸುರತ್ಕಲ್ ಬಳಿಯ ಎನ್ಐಟಿಕೆ ಮುಂಭಾಗದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಗೇಟ್ ಆರಂಭಿಸಲಾಗಿತ್ತು. ಆಗ ವರ್ಷಕ್ಕೆ ಟೋಲ್ ಕಲೆಕ್ಷನ್ ಗುರಿ ಇದ್ದಿದ್ದು 4.43 ಕೋಟಿ, ದಿನಕ್ಕೆ ನಾಲ್ಕು ಲಕ್ಷ ರೂ. ಆಗಿತ್ತು. ಆಗಿನ ಸಮಯದಲ್ಲಿ ಕಾರು ಇನ್ನಿತರ ನಾಲ್ಕು ಚಕ್ರದ ವಾಹನಗಳಿಗೆ 30 ರೂ., ಹೋಗಿ ಬರಲು 50 ರೂ. ನಿಗದಿ ಮಾಡಲಾಗಿತ್ತು. ಈಗ ಫಾಸ್ಟ್ ಟ್ಯಾಗ್ ಪ್ರಕಾರ, ಏಕಮುಖ ಸಂಚಾರಕ್ಕೆ 50 ರೂ., ಹೋಗಿ ಬರಲು 80 ರೂ. ತೆರ ಬೇಕಾಗಿದೆ. ಟೋಲ್ ದರವನ್ನು ಪ್ರತಿ ವರ್ಷ ಶೇ.3ರಷ್ಟು ಏರಿಸಲಾಗುತ್ತಿದ್ದು, ಇಲ್ಲಿಯೂ ಏರಿಕೆಯಾದರೆ ಜನರಿಗೆ ಮತ್ತೊಂದು ಹೊರೆಯಾಗಲಿದೆ.
The controversial Surathkal toll tender has been lent to Gujarat company even after Minister Nitin Gadkari passed the an order that the toll must been shifted to NPMT port gate. The toll gate of the National Highways Authority of India (NHAI) at Surathkal on the National Highway 66 will be shifted to the premises of the New Mangalore Port Authority (NMPA).
Toll from only such vehicles which enter and exit from the port will be collected later, according to Nalin Kumar Kateel, Member of Parliament, Dakshina Kannada.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 01:51 pm
Mangalore Correspondent
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
Mangalore Rain, School College Holiday: ಕರಾವಳ...
16-07-25 10:52 pm
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am