ದ.ಕ ಜಿಲ್ಲೆಯಲ್ಲಿ ಇಂದು 211 ಕೊರೊನಾ ಪಾಸಿಟಿವ್ ; ಇಲ್ಲಿಯವರೆಗೆ 15,714 ಮಂದಿ ಗುಣಮುಖ.

22-09-20 08:47 pm       Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 211 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20,578ಕ್ಕೆ ಏರಿಕೆಯಾಗಿದೆ.

ಮಂಗಳೂರು, ಸೆಪ್ಟಂಬರ್ 22: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದಾಗಿ ನಾಲ್ವರು ಮೃತಪಟ್ಟು, 211 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಂಗಳೂರಿನ 111, ಬಂಟ್ವಾಳದ 43, ಬೆಳ್ತಂಗಡಿಯ 19, ಪುತ್ತೂರಿನ 17, ಸುಳ್ಯದ 1 ಹಾಗೂ ಹೊರ ಜಿಲ್ಲೆಯ 20 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಮಂಗಳೂರು ತಾಲೂಕಿನಲ್ಲಿ ಇಬ್ಬರು, ಬಂಟ್ವಾಳ ಹಾಗೂ ಹೊರಜಿಲ್ಲೆಯ ತಲಾ ಓರ್ವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತರ ಸಂಖ್ಯೆ 494ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕೊರೋನದಿಂದ ಗುಣಮುಖರಾದವರ ಸಂಖ್ಯೆ 15,714ಕ್ಕೆ ಹೆಚ್ಚಿದೆ. ಜಿಲ್ಲೆಯಲ್ಲಿ 4,369 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Join our WhatsApp group for latest news updates (2)