ಬ್ರೇಕಿಂಗ್ ನ್ಯೂಸ್
08-04-22 03:54 pm Mangalore Correspondent ಕರಾವಳಿ
ಮಂಗಳೂರು, ಎ.8 :ಖಾಸಗಿ ಸಿಟಿ ಬಸ್ಸೊಂದಕ್ಕೆ ಬೈಕ್ ಡಿಕ್ಕಿಯಾದ ರಭಸಕ್ಕೆ ನೋಡ ನೋಡುತ್ತಲೇ ಬೆಂಕಿ ಹತ್ತಿಕೊಂಡು ಧಗ ಧಗನೆ ಹೊತ್ತಿ ಉರಿದ ಘಟನೆ ನಗರದ ಹಂಪನಕಟ್ಟೆಯಲ್ಲಿ ನಡೆದಿದೆ.
ಸುರತ್ಕಲ್ ಜನತಾ ಕಾಲನಿಯಿಂದ ಬರುತ್ತಿದ್ದ ರೂಟ್ ನಂಬರ್ 45 ಜಿ ಸಂಖ್ಯೆಯ ಏಶೆಲ್ ಹೆಸರಿನ ಬಸ್ ಬೆಂಕಿಗಾಹುತಿಯಾಗಿದೆ. ಬಿಸಿಳ ಝಳದ ನಡುವೆ ಬಸ್ ಮಧ್ಯಾಹ್ನ ಸ್ಟೇಟ್ ಬ್ಯಾಂಕಿನತ್ತ ಬರುತ್ತಿದ್ದು ಹಂಪನಕಟ್ಟೆಯಲ್ಲಿ ಸಾಗುತ್ತಿದ್ದಾಗಲೇ ಗಣಪತಿ ಹೈಸ್ಕೂಲ್ ರಸ್ತೆಯ ಕಡೆಯಿಂದ ನುಗ್ಗಿ ಬಂದ್ ಬೈಕ್ ಸವಾರನ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿಯಾಗಿದೆ. ಈ ವೇಳೆ, ಬೈಕ್ ನೇರವಾಗಿ ಬಸ್ಸಿನಡಿಗೆ ಹೋಗಿದ್ದು ಸವಾರ ರಸ್ತೆಗೆ ಬಿದ್ದಿದ್ದ. ಸವಾರನನ್ನು ಕೂಡಲೇ ಎತ್ತಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಷ್ಟರಲ್ಲಿ ಬಸ್ಸಿನಡಿ ಇದ್ದ ಬೈಕಿನಲ್ಲಿ ಪೆಟ್ರೋಲ್ ಲೀಕ್ ಆಗಿ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ನಿಧಾನಕ್ಕೆ ಬಸ್ಸಿನ ಅಡಿಭಾಗದಿಂದ ಬೆಂಕಿ ಹೊತ್ತಿಕೊಂಡಿದ್ದು ನಂದಿಸಲು ಸಕಾಲದಲ್ಲಿ ನೀರು ಸಿಗಲಿಲ್ಲ. ಇದರಿಂದ ಬೆಂಕಿ ಪೂರ್ತಿ ಆವರಿಸಿಕೊಂಡು ಧಗಧಗನೆ ಹೊತ್ತಿ ಉರಿದಿದೆ. ಬೈಕ್ ಪೂರ್ತಿ ಸುಟ್ಟು ಹೋಗಿದ್ದು ಬಸ್ 75 ಶೇಕಡಾ ಉರಿದು ಹೋಗಿದೆ. ಅಷ್ಟರಲ್ಲಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ವೆನ್ಲಾಕ್ ಆಸ್ಪತ್ರೆಯ ಎದುರಲ್ಲೇ ರಸ್ತೆಯಲ್ಲಿ ಘಟನೆ ನಡೆದಿದ್ದು ಎಲ್ಲರೂ ನೋಡ ನೋಡುತ್ತಲೇ ಬಸ್ ಉರಿದು ಹೋಗಿದೆ.
ಬೈಕ್ ಸವಾರನ ಕಾಲಿಗೆ ತೀವ್ರ ಗಾಯ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ಸಿಗೆ ನಾಲ್ಕು ವರ್ಷ ಆಗಿದೆ ಎಂದು ಬಸ್ ಮ್ಯಾನೇಜರ್ ತಿಳಿಸಿದ್ದು ಅಪಘಾತದಿಂದ ಹೊಸ ಬಸ್ ಪೂರ್ತಿ ಗುಜರಿಗೆ ಹೋಗುವಂತಾಗಿದೆ. ಮಧ್ಯಾಹ್ನ ಆಗಿದ್ದರಿಂದ ಬಸ್ಸಿನಲ್ಲಿ ಹೆಚ್ಚು ಜನ ಇರಲಿಲ್ಲ. ಅಪಘಾತ ನಡೆದ ಕೂಡಲೇ ಒಳಗಿದ್ದ ಪ್ರಯಾಣಿಕರು ಹೊರಕ್ಕೆ ಇಳಿದಿದ್ದಾರೆ. ಬಿಸಿಲ ಝಳ ಮತ್ತು ಕಾಂಕ್ರೀಟ್ ರಸ್ತೆಯ ಬಿಸಿಯ ಕಾರಣ ಸುಲಭದಲ್ಲಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿತ್ತು.
A youth suffered injuries after his motorcycle fell under a private bus ashel travels near Wenlock hospital on Friday April 8. The motorcycle and the bus caught fire as the bus dragged the motorcycle for a few meteres before coming to halt. The injured rider has been identified as Dylon (26).The incident took place at around 2.45 pm.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm