ಬ್ರೇಕಿಂಗ್ ನ್ಯೂಸ್
21-04-22 08:27 pm Mangalore Correspondent ಕರಾವಳಿ
ಮಂಗಳೂರು, ಎ.21 : ಗುರುಪುರ ಹೋಬಳಿಯ ಉಳಿಪಾಡಿ ಗ್ರಾಮದ ಮಣೇಲ್ ಎಂಬಲ್ಲಿ ದರ್ಗಾ ಮಸೀದಿಯ ನವೀಕರಣಕ್ಕಾಗಿ ಕಟ್ಟಡವನ್ನು ಒಡೆದ ಸಂದರ್ಭದಲ್ಲಿ ಒಳಭಾಗದಲ್ಲಿ ದೇವಸ್ಥಾನದ ರೀತಿಯ ಸಂರಚನೆ ಇರುವುದು ಕಂಡುಬಂದಿದೆ. ಹೀಗಾಗಿ ಸ್ಥಳೀಯರಿಗೆ ಭಾರೀ ಕುತೂಹಲ ಉಂಟಾಗಿದ್ದು, ಮಂಗಳೂರು ತಹಸೀಲ್ದಾರ್ ಸೇರಿದಂತೆ ಹಿಂದು ಸಂಘಟನೆ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹಿಂದಿನಿಂದಲೂ ಮಣೇಲ್ ನಲ್ಲಿ ಜಮೀಯ್ಯತುಲ್ ದರ್ಗಾ ಮಸೀದಿ ಇತ್ತೆಂದು ಸ್ಥಳೀಯರು ಹೇಳುತ್ತಾರೆ. ಆದರೆ, ಈಗ ದರ್ಗಾ ಮಸೀದಿ ಕಟ್ಟಡವನ್ನು ನವೀಕರಣ ಮಾಡುವುದಕ್ಕಾಗಿ ಕಮಿಟಿಯವರು ಹಳೆ ಕಟ್ಟಡವನ್ನು ಒಡೆದು ಹಾಕಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಒಳಭಾಗದಲ್ಲಿ ದೇವಸ್ಥಾನದ ರೀತಿಯ ಕಟ್ಟಡ ಪತ್ತೆಯಾಗಿದೆ. ಮೇಲ್ನೋಟಕ್ಕೆ ಜೈನ ಬಸದಿಯ ರೀತಿ ಕಂಡುಬರುತ್ತದೆ. ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮತ್ತಿತರ ಹಿಂದು ಸಂಘಟನೆ ಮುಖಂಡರು ಸ್ಥಳಕ್ಕೆ ತೆರಳಿ, ದೇವಸ್ಥಾನದ ರೀತಿ ಕಂಡುಬಂದಿರುವುದರಿಂದ ಉತ್ಖನನ ನಡೆಸಬೇಕು. ಚಾರಿತ್ರಿಕ ಹಿನ್ನೆಲೆ ಇರುವ ಸಾಧ್ಯತೆ ಇರುವುದರಿಂದ ಯಥಾಸ್ಥಿತಿ ಉಳಿಸಿಕೊಂಡು ಇಲ್ಲಿ ಹಿಂದೆ ದೇವಸ್ಥಾನ ಇತ್ತೇ ಎಂಬ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ಆಗ್ರಹ ಮಾಡಿದ್ದಾರೆ.
ಅದರಂತೆ, ತಹಸೀಲ್ದಾರ್ ಪುರಂದರ ಅವರು ದರ್ಗಾ ನವೀಕರಣ ನಡೆಸದಂತೆ ತಡೆ ಹೇರಿದ್ದಾರೆ. ಅಲ್ಲದೆ, ಕಟ್ಟಡ ಯಥಾಸ್ಥಿತಿ ಉಳಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ದರ್ಗಾ ಇದ್ದ ಜಾಗದಲ್ಲಿ ಹಿಂದೆ ದೇವಸ್ಥಾನ ಇತ್ತೇ ಎನ್ನುವ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಪೊಳಲಿ ಶೀನಪ್ಪ ಹೆಗ್ಗಡೆ ಬರೆದಿರುವ ಪುಳಿನಾಪುರ ಮಹಾತ್ಮೆ ಪುಸ್ತಕದಲ್ಲಿ ಮಣೇಲಿನ ಇತಿಹಾಸದ ಉಲ್ಲೇಖ ಇದ್ದು, ಅಲ್ಲಿ ಶಿವನ ಆಲಯವಿತ್ತು ಎನ್ನುವ ಮಾಹಿತಿಗಳಿವೆ. ಆದರೆ ಆ ಭಾಗದಲ್ಲಿ ಯಾವುದೇ ಶಿವನ ಆಲಯವಿಲ್ಲ ಎನ್ನುವ ಮಾಹಿತಿಯನ್ನು ಸ್ಥಳೀಯರು ಹೇಳುತ್ತಾರೆ. ಆದರೆ ಮಸೀದಿ ಒಳಭಾಗದಲ್ಲಿ ದೇವಸ್ಥಾನದ ರೀತಿ ಬೋದಿಗೆ ಕಂಬಗಳು, ಆಕೃತಿಗಳು ಮಾತ್ರ ಇವೆ. ಯಾವುದೇ ದೇವರ ಕುರುಹುಗಳು ಕಂಡುಬಂದಿಲ್ಲ.
ಮಣೇಲ್ ಬಸದಿ ಎನ್ನುವುದು ಪ್ರತ್ಯೇಕ ಸ್ಥಳದಲ್ಲಿ ಇದೆ. ಇದೇ ಬಸದಿಗೆ ಸಂಬಂಧಪಟ್ಟ ಜೈನರ ಮನೆತನವೂ ಪಕ್ಕದಲ್ಲಿ ಇದೆ. ಮಣೇಲ್ ಜೈನರ ಮನೆತನ ಅಂದರೆ, ಅಬ್ಬಕ್ಕನ ತವರು ಮನೆ ಆಗಿತ್ತು ಅನ್ನುವ ಉಲ್ಲೇಖವೂ ಇತಿಹಾಸದಲ್ಲಿದೆ. ಉಳ್ಳಾಲವನ್ನು ಆಳಿದ್ದವರಲ್ಲಿ ಮೂವರು ಅಬ್ಬಕ್ಕ ಇದ್ದರು. ಒಬ್ಬಳು ಪುತ್ತಿಗೆಯ ಚೌಟರ ಅರಮನೆಯವಳು. ಆ ಪೈಕಿ ಒಬ್ಬಾಕೆ ಮಣೇಲ್ ವಂಶಸ್ಥೆ ಅನ್ನುವ ಮಾಹಿತಿಗಳಿವೆ. 16ನೇ ಶತಮಾನದಲ್ಲಿ ಇಟಲಿ ಪ್ರವಾಸಿಗ ಪಿತ್ರೋ ಎನ್ನುವಾತ ಭಾರತದ ಕರಾವಳಿಗೆ ಬಂದಿದ್ದು, ಮಣೇಲಿನಲ್ಲಿ ಬೇಸಗೆ ಕಳೆಯುತ್ತಿದ್ದ ಅಬ್ಬಕ್ಕ ರಾಣಿಯ ಬಗ್ಗೆ ವರ್ಣಿಸಿ ಬರೆದಿದ್ದಾನೆ. ಮಣೇಲಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟ ಕಟ್ಟಿ ಕೃಷಿಕರಿಗೆ ನೆರವಾಗುತ್ತಿದ್ದಳು ಅನ್ನುವುದನ್ನೂ ಉಲ್ಲೇಖಿಸಿದ್ದ. ಆ ಪುಸ್ತಕದಲ್ಲಿ ಮಣೇಲ್ ಬಸದಿ, ಮಣೇಲಿನ ಜೈನರು, ಅಬ್ಬಕ್ಕ, ಅಲ್ಲೊಂದು ಮಸೀದಿ ಇರುವ ಬಗ್ಗೆಯೂ ಉಲ್ಲೇಖಿಸಿದ್ದ ಎಂದು ಈಗ ಮಣೇಲ್ ಜೈನ ಮನೆತನದಲ್ಲಿರುವ ನಿವೃತ್ತ ಪ್ರಾಂಶುಪಾಲ ಅಕ್ಷಯ್ ಕುಮಾರ್ ಹೇಳುತ್ತಾರೆ.
ಅದಕ್ಕೂ ಹಿಂದೆ, ತುಳುನಾಡನ್ನು ಅಳುಪರು ಆಳುತ್ತಿದ್ದರು. ಅಳುಪರ ಕಾಲದಲ್ಲಿ ಸೂರ್ಯ ನಾರಾಯಣ ದೇವಸ್ಥಾನಗಳನ್ನು ಕಟ್ಟಿದ್ದ. ಮರೋಳಿ ಮತ್ತು ಮಣೇಲಿನಲ್ಲಿ ಸೂರ್ಯ ನಾರಾಯಣ ದೇವಸ್ಥಾನವನ್ನು ಅಳುಪ ರಾಜ ಕುಲಶೇಖರ ಕಟ್ಟಿದ್ದ. ಇತ್ತೀಚೆಗೆ ಮಣೇಲಿನ ಸೂರ್ಯ ನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಆಗಿತ್ತು. ಈಗ ಪತ್ತೆಯಾಗಿರುವ ಮಸೀದಿ ಜಾಗದಲ್ಲಿ ದೇವಸ್ಥಾನ ಇತ್ತೇ ಎನ್ನುವ ಬಗ್ಗೆ ಸಂಶೋಧನೆ ನಡೆಯಬೇಕು.
ಹಿಂದೆ ದೇವಸ್ಥಾನದ ರೂಪದಲ್ಲೇ ಇತ್ತು !
ನಾವು ಸಣ್ಣದಿರುವಾಗ ಅಲ್ಲಿ ದೇವಸ್ಥಾನದ ರೀತಿಯಲ್ಲೇ ಮಸೀದಿ ಇತ್ತು. ಆನಂತರ, ದೇವಸ್ಥಾನದ ರೀತಿ ಹೊರಗೆ ಕಾಣಿಸದಂತೆ ಆವರಣದಲ್ಲಿ ಕಟ್ಟಡವನ್ನು ಕಟ್ಟಿದ್ದರು. ಆದರೆ ಒಳಗಿನ ರಚನೆಯನ್ನು ಹಾಗೇ ಉಳಿಸಿಕೊಂಡಿದ್ದರು. ಹಿಂದೆ ಅಳುಪರ ಕಾಲದಲ್ಲಿ ಹೆಚ್ಚಾಗಿ ಶಾಸನಗಳನ್ನು ಬರೆಯುತ್ತಿದ್ದರು. ಕರಾವಳಿಯಲ್ಲಿ ಶಾಸನಗಳು ಪತ್ತೆಯಾದರೆ ಅಳುಪರ ಕಾಲದವೇ ಆಗಿರುತ್ತಿದ್ದವು. ಅಳುಪರು ಸಾಧಾರಣ 4ನೇ ಶತಮಾನದಿಂದ 14ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದ್ದರು. ಅಳುಪರ ಕಾಲದಲ್ಲಿ ಈ ದೇವಸ್ಥಾನ ಇದ್ದಿರಬಹುದೇ ಎನ್ನುವ ಬಗ್ಗೆ ತಿಳಿದಿಲ್ಲ ಎಂದು ಅಕ್ಷಯ್ ಕುಮಾರ್ ತಮ್ಮ ಇತಿಹಾಸದ ಜ್ಞಾನವನ್ನು ತಿಳಿಸಿದ್ದಾರೆ.
ಸಾಮಾನ್ಯವಾಗಿ ಮಸೀದಿ ಕಟ್ಟಡಗಳಲ್ಲಿ ಬೋದಿಗೆ ಕಂಬಗಳು, ಹಿಂದು ವಾಸ್ತುಶೈಲಿಯ ಸ್ವರೂಪ ಇರುವುದಿಲ್ಲ. ಹಳೆಯ ಕೆಲವೊಂದು ಮಸೀದಿಗಳಲ್ಲಿ ಮಾತ್ರ ಅಂಥ ಕುರುಹುಗಳು ಕರಾವಳಿಯಲ್ಲಿ ಕೆಲವು ಕಡೆ ಇದೆ. ಅವು ಹಿಂದೆ ದೇವಸ್ಥಾನ ಆಗಿರುವ ಸಾಧ್ಯತೆ ಬಗ್ಗೆಯೂ ಶಂಕೆಗಳಿವೆ.
When the building for the renovation of the Dargah Mosque was found in Manel, a village in the village of Hoopali, Gurupur, there was a temple-like structure. This has caused a lot of curiosity for the locals and the Hindu organization leaders including Mangalore Tehsildar have visited the place.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm