ಬ್ರೇಕಿಂಗ್ ನ್ಯೂಸ್
24-10-25 05:43 pm HK News Desk ದೇಶ - ವಿದೇಶ
ಕರ್ನೂಲ್, ಅ 24 : ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಉಪನಗರ ಚಿನ್ನಟೇಕೂರು ಸಮೀಪದಲ್ಲಿ ಶುಕ್ರವಾರ ಬೆಳಿಗ್ಗಿನ ಜಾವ 3:30 ರ ಸುಮಾರಿಗೆ ಭಯಂಕರ ಬಸ್ ಅಪಘಾತ ಸಂಭವಿಸಿದೆ. ಪ್ರಯಾಣಿಕರು ನಿದ್ದೆಯಲ್ಲಿದ್ದಾಗಲೇ ಬಸ್ ಅಪಘಾತ ಸಂಭವಿಸಿ ಕ್ಷಣಮಾತ್ರದಲ್ಲೇ ಹೊತ್ತಿ ಉರಿದಿದೆ. ಇದರಿಂದ ಸುಮಾರು 20 ಮಂದಿ ಸಜೀವ ದಹನವಾಗಿದ್ದಾರೆ, ಮಕ್ಕಳು ವಯಸ್ಕರರು ವೃದ್ಧರು ಸೇರಿ ಸುಮಾರು 41 ಮಂದಿ ಬಸ್ನಲ್ಲಿದ್ದರು. ಇದರಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಕೂಡ ಬಲಿಯಾಗಿದ್ದಾರೆ.
ನೆಲ್ಲೂರು ಜಿಲ್ಲೆಯ ಗೊಲ್ಲವರಿಪಳ್ಳಿಗೆ ಸೇರಿದ ಒಂದೇ ಕುಟುಂಬದ ನಾಲ್ವರು ಈ ಬಸ್ ದುರಂತದಲ್ಲಿ ಸಾವನಪ್ಪಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಮೆಮುರಿ ಕಾವೇರಿ ಟ್ರಾವೆಲ್ಸ್‌ನ ಎಸಿ ಸ್ಲೀಪರ್ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.














ಪ್ರಯಾಣಿಕರು ನಿದ್ದೆಯಲ್ಲಿದ್ದಾಗಲೇ ಹೊತ್ತಿ ಉರಿದ ಬಸ್!
ಹೈದರಾಬಾದ್‌ನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರಿಂದ ಹಲವರು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಈ ದುರಂತದಿಂದ ರಾಜ್ಯಾದ್ಯಂತ ಜನರು ಬೆಚ್ಚಿಬಿದ್ದಿದ್ದಾರೆ.
ಬಸ್ ಗುರುವಾರ ರಾತ್ರಿ 10:30ರ ಸುಮಾರಿಗೆ ಹೈದರಾಬಾದ್‌ನಿಂದ ಹೊರಟಿತ್ತು. ಬಸ್ನಲ್ಲಿ ಸುಮಾರು 41 ಮಂದಿ ಪ್ರಯಾಣಿಕರಿದ್ದರು ಅವರಲ್ಲಿ 39 ಮಂದಿ ವಯಸ್ಕರು ಮತ್ತು 2 ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ. ಬಹುತೇಕರು ಹೈದರಾಬಾದ್ ನಗರದ ನಿವಾಸಿಗಳಾಗಿದ್ದಾರೆ. ಕರ್ನೂಲು ಕಲ್ಲೂರು ಮಂಡಲದ ಚಿನ್ನಟೇಕೂರು ಬಳಿ ಬೈಕ್‌ನೊಂದಿಗೆ ಡಿಕ್ಕಿ ಹೊಡೆದ ನಂತರ ಬಸ್ ಸುಮಾರು 300 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಈ ಸಮಯದಲ್ಲಿ ಬೈಕ್ ಬಸ್ ಅಡಿಯಲ್ಲಿ ಸಿಲುಕಿ, ಇಂಧನ ಟ್ಯಾಂಕ್‌ಗೆ ಬೆಂಕಿ ತಗುಲಿತು. ಕ್ಷಣದಲ್ಲಿ ಸಂಪೂರ್ಣ ಬಸ್ ಬೆಂಕಿಯಲ್ಲಿ ಹೊತ್ತಿ ಉರಿದಿದೆ.
ಇನ್ನೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕರ್ನೂಲು ಮಂಡಲದ ಪ್ರಜಾನಗರದ ನಿವಾಸಿ ಶಂಕರ್ ಎಂದು ಗುರುತಿಸಲಾಗಿದೆ.
ಸುಮಾರು 19 ಮಂದಿ ಸುರಕ್ಷಿತ !
ಬೆಂಕಿ ತಗುಲಿದಾಗ ಪ್ರಯಾಣಿಕರು ನಿದ್ರೆಯಲ್ಲಿದ್ದರಿಂದ ಹಾನಿ ಹೆಚ್ಚಾಗಿದೆ. ಕೆಲವರು ತುರ್ತು ಬಾಗಿಲನ್ನು ಮುರಿದು ಹೊರಬಂದರು, ಇನ್ನೂ ಕೆಲವರನ್ನು ರಕ್ಷಣೆ ಮಾಡಲಾಯ್ತು. ಸುಮಾರು 19 ಮಂದಿ ಸುರಕ್ಷಿತವಾಗಿದ್ದಾರೆ, ಅವರಲ್ಲಿ ಹಲವರು ಕರ್ನೂಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ 20ಕ್ಕೂ ಹೆಚ್ಚು ಮಂದಿ ಬೆಂಕಿಯಲ್ಲಿ ಸಿಲುಕಿ ಮೃತಪಪಟ್ಟಿದ್ದಾರೆ. 11 ಶವಗಳನ್ನು ಈಗಾಗಲೇ ಪತ್ತೆ ಮಾಡಲಾಗಿದ್ದು, ಗುರುತು ಸ್ಥಾಪನೆಯ ಕಾರ್ಯ ನಡೆಯುತ್ತಿದೆ. ಚಾಲಕ ಶಿವನಾರಾಯಣ ಮತ್ತು ಲಕ್ಷ್ಮಯ್ಯ ಎಂದು ತಿಳಿದುಬಂದಿದೆ.
"ನಾನು ನಿದ್ರೆಯಲ್ಲಿದ್ದೆ. ಗದ್ದಲ ಕೇಳಿ ಎಚ್ಚರಗೊಂಡಾಗ, ಬಸ್ ಸಂಪೂರ್ಣವಾಗಿ ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು" ಎಂದು ಹಾರಿಕಾ ವಿವರಿಸಿದ್ದಾರೆ. ಅವರ ಅದೃಷ್ಟಕ್ಕೆ, ಬಸ್‌ನ ಹಿಂಭಾಗದ ತುರ್ತು ನಿರ್ಗಮನ ಬಾಗಿಲು ಮುರಿದಿತ್ತು. "ಹಿಂಬದಿಯ ಬಾಗಿಲು ಮುರಿದ ಕಾರಣ ನಾನು ಅದರ ಮೂಲಕ ಹೊರಕ್ಕೆ ಜಿಗಿದೆ. ಜಿಗಿಯುವಾಗ ನನಗೆ ಗಾಯವಾಯಿತು" ಎಂದು ಹಾರಿಕಾ ಅವರು ಈ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.
ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಆಕಾಶ್ ಎಂಬ ಪ್ರಯಾಣಿಕರು ಕೂದಲೆಳೆಯ ಅಂತರದಿಂದ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಪೇಂಟ್ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾನು ದೀಪಾವಳಿ ಆಚರಣೆಗಾಗಿ ಊರಿಗೆ ಆಗಮಿಸಿದ್ದು, ಮರಳುವಾಗ ಈ ಭೀಕರ ಘಟನೆ ನಡೆದಿದೆ ಎಂದು ಘಟನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಬಸ್ನಲ್ಲಿ ದೊಡ್ಡ ಶಬ್ಧವಾಯಿತು. ತಕ್ಷಣಕ್ಕೆ ನಾನು ಎದ್ದು ನೋಡಿದಾಗ ದೊಡ್ಡದಾಗಿ ಬೆಂಕಿ ಹೊತ್ತಿಕೊಂಡಿತ್ತು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಬೆಂಕಿ ಕಾವು ಇದ್ದಕ್ಕಿದ್ದಂತೆ ಬಸ್ ತುಂಬೆಲ್ಲ ಆವರಿಸಿಕೊಂಡಿತು. ಎಲ್ಲರೂ ಜೋರಾಗಿ ಕಿರುಚುವ ಆರ್ತನಾದ ಕೇಳುತ್ತಿತ್ತು. ದಿಕ್ಕು ತೋಚದೇ ನಾನು ತಕ್ಷಣಕ್ಕೆ ಬಸ್‌ನ ಗಾಜನ್ನು ಒಡೆದು ಹೊರಗೆ ಹಾರಿದೆ. ನನ್ನ ಜೊತೆ ಮತ್ತಿಬ್ಬರು ಕೂಡ ಹಾರಿದರು" ಎಂದು ಭಯಾನಕ ಅನುಭವದ ಕುರಿತು ತಿಳಿಸಿದರು
22 ತಿಂಗಳಲ್ಲಿ 16 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್:
ಬಸ್ 2024ರ ಜನವರಿ 27 ರಿಂದ 2025ರ ಅಕ್ಟೋಬರ್ 9ರವರೆಗೆ 16 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದು, ಸಾವಿರಾರು ದಂಡದ ಮೊತ್ತವನ್ನು ಉಳಿಸಿಕೊಂಡಿದೆ. 9 ಬಾರಿ ನೋ ಎಂಟ್ರಿ ವಲಯದಲ್ಲಿ ಪ್ರವೇಶ ಮಾಡಿದ್ದಕ್ಕೆ ದಂಡ ವಿಧಿಸಲಾಗಿದ್ದು, ವೇಗದ ಚಾಲನೆ ಮತ್ತು ಅಪಾಯಕಾರಿ ಚಾಲನೆ ಉಲ್ಲಂಘನೆಯನ್ನು ಈ ಬಸ್ ಹೊಂದಿರುವುದು ತಿಳಿದು ಬಂದಿದೆ.
ಬಸ್ ಸುಸ್ಥಿತಿಯಲ್ಲಿದೆ ಎಂದ ಸಾರಿಗೆ ಇಲಾಖೆ:
ಅಗ್ನಿ ಅವಘಡಕ್ಕೆ ಒಳಗಾಗಿರುವ ಒಳಗೊಂಡಿರುವ ಬಸ್ DD01 N9490 ನೋಂದಣಿ ಹೊಂದಿದೆ ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆ ತಿಳಿಸಿದೆ. ಬಸ್ ಸುಸ್ಥಿತಿಯಲ್ಲಿತ್ತು. ಬೈಕಿಗೆ ಬಲವಾದ ಡಿಕ್ಕಿ ಹೊಡೆದ ಕಾರಣ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಕಾವೇರಿ ಟ್ರಾವೆಲ್ಸ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಬಸ್ ದಿಯು ಅಂಡ್ ದಮನ್ ನಲ್ಲಿ 2018ರ ಮೇ 2ರಂದು ನೋಂದಣಿಯಾಗಿದೆ. 2030ರ ಏಪ್ರಿಲ್ 30ರವರೆಗೆ ಪ್ರವಾಸಿ ಪರ್ಮಿಟ್ ಕೂಡ ಹೊಂದಿದೆ. ಬೆಂಕಿಗಾಹುತಿಯಾಗಿರುವ ಬಸ್‌ನ ಫಿಟ್ನೆಸ್ ಸರ್ಟಿಫಿಕೇಟ್ 2027ರ ಮಾರ್ಚ್ 31ರವರೆಗೆ ಇದೆ. 2026ರ ಏಪ್ರಿಲ್ 20ರವರೆಗೆ ಬಸ್ ಇನ್ಸುರೆನ್ಸ್ ಇದೆ. ಬಸ್ಗೆ ಬೆಂಕಿ ಹೊತ್ತಿರುವ ಕುರಿತು ಎಲ್ಲಾ ಆಯಾಮದಲ್ಲಿ ತನಿಖೆ ಸಾಗಿದೆ. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ನಾವು ಕ್ರಮಗಳನ್ನು ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
In a horrific accident near Chinna Tekuru on the outskirts of Kurnool, Andhra Pradesh, at around 3:30 AM on Friday, a private sleeper bus traveling from Hyderabad to Bengaluru caught fire after colliding with a motorcycle.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am