ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲಿ ಹೂತುಹೋದ ಸೇನಾ ಕಾಪ್ಟರ್, ಭದ್ರತಾ ಲೋಪದ ಆರೋಪ, ಹೆಲಿಕಾಪ್ಟರನ್ನು ಪೊಲೀಸರು ದೂಡುತ್ತಿರುವ ದೃಶ್ಯ ವೈರಲ್ !   

22-10-25 10:23 pm       HK News Desk   ದೇಶ - ವಿದೇಶ

ಶಬರಿಮಲೆ ಸನ್ನಿಧಾನ ವೀಕ್ಷಣೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆತಂದಿದ್ದ ಹೆಲಿಕಾಪ್ಟರ್ ಪತ್ತನಂತಿಟ್ಟ ಜಿಲ್ಲೆಯ ಪ್ರಮಾಡಂ ಎಂಬಲ್ಲಿನ ರಾಜೀವಗಾಂಧಿ ಇಂಡೋರ್ ಸ್ಟೇಡಿಯಂನ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಚಕ್ರ ನೆಲದಲ್ಲಿ ಹೂತು ಹೋದ ಘಟನೆ ನಡೆದಿದೆ. ಆಮೂಲಕ ರಾಷ್ಟ್ರಪತಿ ಭೇಟಿಯಲ್ಲಿ ಭಾರೀ ಭದ್ರತಾ ಲೋಪ ಆಗಿರುವ ಆರೋಪ ಕೇಳಿಬಂದಿದೆ.

ತಿರುವನಂತಪುರಂ, ಅ.22 : ಶಬರಿಮಲೆ ಸನ್ನಿಧಾನ ವೀಕ್ಷಣೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆತಂದಿದ್ದ ಹೆಲಿಕಾಪ್ಟರ್ ಪತ್ತನಂತಿಟ್ಟ ಜಿಲ್ಲೆಯ ಪ್ರಮಾಡಂ ಎಂಬಲ್ಲಿನ ರಾಜೀವಗಾಂಧಿ ಇಂಡೋರ್ ಸ್ಟೇಡಿಯಂನ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಚಕ್ರ ನೆಲದಲ್ಲಿ ಹೂತು ಹೋದ ಘಟನೆ ನಡೆದಿದೆ. ಆಮೂಲಕ ರಾಷ್ಟ್ರಪತಿ ಭೇಟಿಯಲ್ಲಿ ಭಾರೀ ಭದ್ರತಾ ಲೋಪ ಆಗಿರುವ ಆರೋಪ ಕೇಳಿಬಂದಿದೆ.

ದ್ರೌಪದಿ ಮುರ್ಮು ಅವರು ಹೆಲಿಕಾಪ್ಟರ್ ನಿಂದ ಇಳಿದು ಪಂಬೆಗೆ ರಸ್ತೆಯಲ್ಲಿ ತೆರಳಿದ ಬೆನ್ನಲ್ಲೇ ಮಲಯಾಳಂ ಟಿವಿ ಚಾನೆಲ್ಗಗಳಲ್ಲಿ ಹೆಲಿಕಾಪ್ಟರನ್ನು ಪೊಲೀಸರು ದೂಡುತ್ತಿರುವ ದೃಶ್ಯ ಪ್ರಸಾರವಾಗಿದೆ. ಪೊಲೀಸರ ಪ್ರಕಾರ, ಹೆಲಿಪ್ಯಾಡನ್ನು ತುರ್ತಾಗಿ ಮಾಡಿದ್ದರಿಂದ ಕಾಂಕ್ರೀಟ್ ಒಣಗಿರಲಿಲ್ಲ. ಸೇನಾ ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಅದರ ಒತ್ತಡಕ್ಕೆ ಟೈರ್ ಹೂತು ಹೋಗಿದೆ. ಇದರಿಂದ ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಹೆಲಿಕಾಪ್ಟರನ್ನು ದೂಡಿ ಹೂತು ಹೋಗಿದ್ದ ಟೈರನ್ನು ಮುಂದಕ್ಕೆ ಹೋಗುವಂತೆ ಮಾಡಿದರು.

ಪಂಬಾ ಹತ್ತಿರದ ನಿಲಕ್ಕಲ್ ನಲ್ಲಿ ರಾಷ್ಟ್ರಪತಿ ಹೆಲಿಕಾಪ್ಟರ್ ಇಳಿಯಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಳೆಯಿಂದಾಗಿ ಘಟ್ಟದ ಬಳಿಯ ಈ ಜಾಗದಲ್ಲಿ ಕಾಪ್ಟರ್ ಇಳಿಯಲು ಗ್ರೀನ್ ಸಿಗ್ನಲ್ ಸಿಗದ ಕಾರಣ ಕೊನೆಕ್ಷಣದಲ್ಲಿ ಪ್ರಮಾಡಂ ಸ್ಟೇಡಿಯಂ ಒಳಭಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದಕ್ಕಾಗಿ ಒಂದು ದಿನ ಇರುವಾಗ ಕಾಂಕ್ರೀಟ್ ಹೆಲಿಪ್ಯಾಡ್ ಮಾಡಲಾಗಿತ್ತು. ಕಾಂಕ್ರೀಟ್ ಸರಿಯಾಗಿ ಗಟ್ಟಿಯಾಗಿರದ ಕಾರಣ ಕಾಪ್ಟರ್ ನಿಲ್ಲುತ್ತಿದ್ದಂತೆ ಅದರ ಒತ್ತಡಕ್ಕೆ ಚಕ್ರ ಹೂತು ಹೋಗಿದೆ.

ನಾಲ್ಕು ದಿನಗಳ ಕೇರಳ ಭೇಟಿಗಾಗಿ ರಾಷ್ಟ್ರಪತಿ ಮುರ್ಮು ಅವರು ಮಂಗಳವಾರ ಸಂಜೆ ತಿರುವನಂತಪುರಕ್ಕೆ ಆಗಮಿಸಿದ್ದರು. ಅಲ್ಲಿಂದ ಪತ್ತನಂತಿಟ್ಟ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಉಳಿದುಕೊಂಡಿದ್ದರು. ಬುಧವಾರ ಬೆಳಗ್ಗೆ ಪ್ರಮಾಡಂ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದು ಅಲ್ಲಿಂದ ರಸ್ತೆ ಮೂಲಕ ಸನ್ನಿಧಾನಕ್ಕೆ ತೆರಳಿದ್ದರು.

A major security lapse was reported during President Droupadi Murmu’s visit to Shabarimala after the Army helicopter carrying her got stuck at the helipad in Pramadam, Pathanamthitta district.