ಬ್ರೇಕಿಂಗ್ ನ್ಯೂಸ್
17-05-22 07:03 pm Mangalore Correspondent ಕರಾವಳಿ
ಮಂಗಳೂರು, ಮೇ 17: ಇಲ್ಲಿನ ಗಂಜಿಮಠದ ಮಳಲಿ ಎಂಬಲ್ಲಿ ಇತ್ತೀಚೆಗೆ ಮಸೀದಿಯೊಳಗೆ ದೇವಸ್ಥಾನ ಮಾದರಿ ಪತ್ತೆಯಾದ ಜಾಗದ ವಿಚಾರದಲ್ಲಿ ಹಿಂದು ಸಂಘಟನೆಗಳು ಇತಿಹಾಸದ ಸತ್ಯಾಸತ್ಯತೆ ತಿಳಿಯುವುದಕ್ಕಾಗಿ ಅಷ್ಟಮಂಗಲ ಪ್ರಶ್ನಾಚಿಂತನೆ ಇಡಲು ಮುಂದಾಗಿವೆ. ಇದಕ್ಕಾಗಿ ಕೇರಳದ ನುರಿತ ಜ್ಯೋತಿಷ್ಯ ಶಾಸ್ತ್ರಜ್ಞರನ್ನು ಕರೆಸಲು ಸಿದ್ಧತೆ ನಡೆದಿದೆ ಎನ್ನುವ ಮಾಹಿತಿಗಳಿವೆ.
ಇತ್ತೀಚೆಗೆ ಮಳಲಿಯ ಮಸೀದಿಯನ್ನು ನವೀಕರಣ ಮಾಡುವುದಕ್ಕಾಗಿ ಹೊರಾವರಣವನ್ನು ಕೆಡವಿದ್ದಾಗ ಒಳಭಾಗದಲ್ಲಿ ದೇವಸ್ಥಾನ ಮಾದರಿಯ ಚಿತ್ರಣ ಕಂಡುಬಂದಿತ್ತು. ಅದನ್ನು ನೋಡಿದ್ದ ಕೆಲವು ಜನರು ಕುತೂಹಲದಿಂದ ಅದನ್ನು ದೇವಸ್ಥಾನವೆಂದು ಭಾವಿಸಿ ಫೋಟೋ ತೆಗೆದು ಜಾಲತಾಣದಲ್ಲಿ ಹಂಚಿದ್ದರು. ಆನಂತರ ಹಿಂದು ಸಂಘಟನೆಗಳ ನಾಯಕರು ಮಸೀದಿ ಇರುವಲ್ಲಿಗೆ ತೆರಳಿದ್ದಲ್ಲದೆ, ಈ ಬಗ್ಗೆ ತಹಸೀಲ್ದಾರಿಗೆ ದೂರಿತ್ತು ಕಟ್ಟಡ ನವೀಕರಣಕ್ಕೆ ತಡೆ ನೀಡಿದ್ದರು. ಈ ವಿಚಾರ ಕರಾವಳಿಯಲ್ಲಿ ಸಹಜವಾಗಿಯೇ ಭಾರೀ ಕುತೂಹಲಕ್ಕೂ ಕಾರಣವಾಗಿತ್ತು.
ಇದೀಗ ವಿಶ್ವ ಹಿಂದು ಪರಿಷತ್ ನಾಯಕರು ಸ್ಥಳದ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಅಷ್ಟಮಂಗಲ ಪ್ರಶ್ನೆ ಇಡಲು ಮುಂದಾಗಿದ್ದಾರೆ. ಹಿಂದು ಜ್ಯೋತಿಷ ಶಾಸ್ತ್ರದಲ್ಲಿ ಅಷ್ಟಮಂಗಲಕ್ಕೆ ವಿಶೇಷ ಮಾನ್ಯತೆಯಿದ್ದು, ಯಾವುದೇ ಆಧಾರಗಳಿಲ್ಲದೇ ಇದ್ದರೂ ಕವಡೆಕಾಯಿಗಳ ಗಣಿತ ಹಾಕುವ ಮೂಲಕ ಜೋಯಿಸರು ಇತಿಹಾಸ ಸಾನ್ನಿಧ್ಯದ ಬಗ್ಗೆ ಬೆಳಕು ಚೆಲ್ಲುತ್ತಾರೆ. ಇದನ್ನು ಹಿಂದುಗಳು ಪವಿತ್ರ ಎಂದೇ ನಂಬುತ್ತಾರೆ. ಬ್ರಾಹ್ಮಣ ತಂತ್ರಿಗಳು, ಬಲ್ಯಾಯರು, ಕೇರಳದಲ್ಲಿ ಪೊದುವಾಳರು ಈ ರೀತಿಯ ಅಷ್ಟಮಂಗಲ ಚಿಂತನೆ ಮಾಡುತ್ತಾರೆ. ನಿಜಕ್ಕಾದರೆ, ಅದೇ ಸ್ಥಳದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಬೇಕು. ಆದರೆ, ಅದೇ ಜಾಗದಲ್ಲಿ ಜ್ಯೋತಿಷ್ಯ ಲೆಕ್ಕ ಹಾಕುವುದಕ್ಕೆ ಅಲ್ಲಿನ ಮಸೀದಿ ಕಮಿಟಿಯವರು ಅವಕಾಶ ನೀಡುವುದು ಕಡಿಮೆ.
ಹೀಗಾಗಿ ಅದೇ ಪರಿಸರದ ಹಿಂದು ಮನೆಗಳ ವಠಾರದಲ್ಲಿ ಪ್ರಶ್ನಾಚಿಂತನೆ ಕೈಗೊಳ್ಳಲು ಸಂಘಟನೆಗಳ ನಾಯಕರು ನಿರ್ಧರಿಸಿದ್ದಾರೆ. ಕೆಲವು ಇತಿಹಾಸ ಪುಸ್ತಕಗಳಲ್ಲಿ ಆ ಭಾಗದಲ್ಲಿ ಹಿಂದೆ ದೇವಸ್ಥಾನ ಇದ್ದ ಬಗ್ಗೆ ಉಲ್ಲೇಖಗಳಿವೆ. ಈಗಿನ ಸನ್ನಿವೇಶದಲ್ಲಿ ಅಲ್ಲಿ ಯಾವುದೇ ದೇವಸ್ಥಾನ ಇರದೇ ಇದ್ದುದರಿಂದ ಅದೇ ಮಸೀದಿ ಹಳೆಯ ದೇವಸ್ಥಾನ ಆಗಿರಬೇಕೆಂದು ಹಿಂದು ಸಂಘಟನೆ ಮಂದಿ ವಾದಿಸುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ಕಾಲದಲ್ಲಿ ಏನೇನು ಇತ್ತೋ ಅದನ್ನು ಅದೇ ಸ್ಥಿತಿಯಲ್ಲಿ ಸಂರಕ್ಷಿಸಬೇಕು ಅನ್ನುವ ಸುಪ್ರೀಂ ಕೋರ್ಟ್ ತೀರ್ಪು ಇರುವುದರಿಂದ ಈ ಬಗ್ಗೆ ವಾದಗಳೇನಿದ್ದರೂ, ಮಸೀದಿಯನ್ನು ಮರಳಿ ಪಡೆಯುವುದು ಕಷ್ಟದ ಮಾತಾಗುತ್ತದೆ. ಆದರೆ ಹಿಂದು ಸಂಘಟನೆಗಳು ಮನಸ್ಸು ಮಾಡಿದರೆ, ಅದೇ ಪರಿಸರದಲ್ಲಿ ಹಿಂದೆ ಇದ್ದಿರುವ ದೇವಸ್ಥಾನವನ್ನು ಮತ್ತೆ ಕಟ್ಟಲು ಅವಕಾಶ ಇದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಯಾವ ರೀತಿಯ ತೀರ್ಪು ಬರುತ್ತೋ ಅದನ್ನು ಪಾಲಿಸುತ್ತೇವೆ ಎನ್ನುತ್ತಿದ್ದಾರೆ, ಹಿಂದು ಸಂಘಟನೆಗಳ ನಾಯಕರು.
ಇದರ ನಡುವೆ, ಜಿಲ್ಲಾಧಿಕಾರಿ ಅಂಗಳದಲ್ಲಿ ಮಸೀದಿ ನವೀಕರಣ ಕಾರ್ಯಕ್ಕೆ ತಡೆಯಾಜ್ಞೆ ಇದೆ. ಜಿಲ್ಲಾಧಿಕಾರಿಗಳು ವಿವಾದದ ಸ್ವರೂಪ ಅನುಸರಿಸಿ ತೀರ್ಪು ನೀಡುವ ಸಾಧ್ಯತೆಯಿದೆ. ಹಿಂದು ಸಂಘಟನೆಗಳು ಮಸೀದಿ ನವೀಕರಣ ಕಾರ್ಯಕ್ಕೆ ಒಪ್ಪಲ್ಲ ಎಂದು ತಗಾದೆ ಎತ್ತಿರುವುದರಿಂದ ವಿಷಯ ಗಂಭೀರ ಸ್ವರೂಪಕ್ಕೆ ತಿರುಗುವುದನ್ನು ತಡೆಯಲು ಜಿಲ್ಲಾಧಿಕಾರಿ ಕೆಲಕಾಲ ಯಥಾಸ್ಥಿತಿ ಕಾಯ್ದುಕೊಳ್ಳಲು ಮುಂದಾಗುವ ಸಾಧ್ಯತೆಯೇ ಹೆಚ್ಚು.
Vishwa Hindu Parishad (VHP) has decided to seek the services of Kerala astrologer to hold Ashtamangala Prasnam ritual in order to confirm whether any temple existed in place of Malai Darga on the outskirts of the city. The front portion of Asayyid Abdullahil Madani Dargah situated at Malali near Ganjimath on the outskirts of the city was demolished for renovation.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 07:19 pm
Mangalore Correspondent
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am