ಟ್ರಂಪ್ ರೋಲ್ಸ್‌ರಾಯ್ಸ್ ಕಾರು ಕೊಳ್ಳಲು ಮುಂದಾದ ಕೇರಳದ ಚೆಮ್ಮನೂರ್ ಮಾಲಕ

13-01-21 10:28 am       Headline Karnataka News Network   ಸ್ಪೆಷಲ್ ಕೆಫೆ

ಟ್ರಂಪ್ ರೋಲ್ಸ್‌ರಾಯ್ಸ್ ಕಾರು ಹರಾಜಿಗೆ ಮುಂದಾಗಿದ್ದು, ಅದನ್ನು ಕೊಳ್ಳಲು ಕೇರಳದ ಆಭರಣ ಉದ್ಯಮಿ ಬಾಬಿ ಚೆಮ್ಮನೂರ್ ಮುಂದಾಗಿದ್ದಾರೆ.

ವಾಷಿಂಗ್ಟನ್, ಜನವರಿ 12: ಚುನಾವಣೆಯಲ್ಲಿ ಸೋತ ಬಳಿಕ ಪಟ್ಟು ಹಿಡಿದ ಡೊನಾಲ್ಡ್ ಟ್ರಂಪ್ ಹಿಂಸಾಚಾರ ಸೇರಿದಂತೆ ಹಲವು ಘಟನೆಗಳಿಗೆ ಕಾರಣವಾಗಿದ್ದಂತೂ ಹೌದು. ಇದೀಗ ಅವರ ಬಳಿಕ ಅವರ ರೋಲ್ಸ್‌ರಾಯ್ಸ್ ಕಾರು ಸುದ್ದಿ ಮಾಡುತ್ತಿದೆ. ಇದೀಗ ಟ್ರಂಪ್ ರೋಲ್ಸ್‌ರಾಯ್ಸ್ ಕಾರು ಹರಾಜಿಗೆ ಮುಂದಾಗಿದ್ದು, ಅದನ್ನು ಕೊಳ್ಳಲು ಕೇರಳದ ಆಭರಣ ಉದ್ಯಮಿ ಬಾಬಿ ಚೆಮ್ಮನೂರ್ ಮುಂದಾಗಿದ್ದಾರೆ.

ಭಾರತದಲ್ಲಿ ಶ್ರೀಮಂತರು, ಉದ್ಯಮಿಗಳ ಕಾರು ಕ್ರೇಜ್ ಊಹೆಗೂ ನಿಲುಕದ್ದು, ವಿಂಟೇಜ್‌ ಕಾರನ್ನು ಹರಾಜಿನಲ್ಲಿ ಕೋಟಿ ಕೋಟಿಗೆ ಬೆಲೆಗೆ ಖರೀದಿಸುವ ಕಾರು ಪ್ರಿಯರಿದ್ದಾರೆ.

ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರನ್ನು ಖರೀದಿಸಲು ಭಾರತೀಯರೊಬ್ಬರು ಮುಂದಾಗಿದ್ದಾರೆ. ಟ್ರಂಪ್‌ ಈ ಕಾರು 91,249 ಕಿ.ಮೀ ಓಡಿದೆ. ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗಿನಿಂದ ಈ ಕಾರು ಓಡಿಸಿದ್ದಾರೆ.

ಈ ಮೊದಲು 2017ರಲ್ಲಿ ಡೊನಾಲ್ಡ್ ಟ್ರಂಪ್ ಬಳಸಿದ್ದ ಫೆರಾರಿ ಕಾರನ್ನು ಹರಾಜು ಹಾಕಲಾಗಿತ್ತು,270,000 ಡಾಲರ್‌ಗೆ ಈ ಕಾರು ಹರಾಜಾಗಿತ್ತು. 2007 ರಲ್ಲಿ ಟ್ರಂಪ್ ಫೆರಾರಿ ಕಾರನ್ನು ಕೊಂಡುಕೊಂಡಿದ್ದರು. ಆದರೆ ಕಾರನ್ನು ಹೆಚ್ಚು ಬಳಸಿರಲಿಲ್ಲ. ಕೇವಲ 2400 ಮೈಲುಗಳಷ್ಟು ಓಡಿಸಿದ್ದರು. 2011 ರಲ್ಲಿ ಟ್ರಂಪ್ ಕಾರೊಂದನ್ನು ಮಾರಾಟ ಮಾಡಿದ್ದರು. 1.72 ಕೋಟಿಗೆ ವ್ಯಕ್ತಿಯೊಬ್ಬ ಆ ಕಾರನ್ನು ಕೊಂಡುಕೊಂಡಿದ್ದ. ಅದು 6 ಸಾವಿರ ಮೈಲುಗಳಷ್ಟು ಓಡಿತ್ತು.

Kerala-based jeweller Boby Chemmanur, who had brought football legend late Diego Maradona to Kerala for inaugurating his jewellery showroom, is again in the news for participating in a bid to buy a Rolls-Royce Phantom car used by outgoing US President Donald Trump.