ಕೆ.ಎಲ್‌ ರಾಹುಲ್‌ ಬದಲು ಸಂಜು ಸ್ಯಾಮ್ಸನ್‌ನ ಆಯ್ಕೆ ಮಾಡಬೇಕಿತ್ತು ಎಂದ ದಾನಿಶ್ ಕನೇರಿಯಾ!

26-08-22 02:44 pm       Source: Vijayakarnataka   ಕ್ರೀಡೆ

ಬಹುನಿರೀಕ್ಷಿತ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಗೆ ಟೀಮ್ ಇಂಡಿಯಾ ತನ್ನ ಆಟಗಾರರ ಆಯ್ಕೆ ಮಾಡುವ ಸಂದರ್ಭದಲ್ಲಿ ಗಾಯದಿಂದ...

ಬೆಂಗಳೂರು: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಆತಿಥ್ಯದಲ್ಲಿ 15ನೇ ಆವೃತ್ತಿಯ ಏಷ್ಯಾ ಕಪ್‌ ಟೂರ್ನಿ ಆಗಸ್ಟ್ 27ರಿಂದ ಸೆಪ್ಟೆಂಬರ್‌ 11ರವರೆಗೆ ನಡೆಯಲಿದೆ. ಏಳು ಬಾರಿ ಚಾಂಪಿಯನ್ಸ್‌ ಟೀಮ್ ಇಂಡಿಯಾ, ಈ ಬಾರಿಯೂ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫಘಾನಿಸ್ತಾನ, ಬಾಂಗ್ಲಾದೇಶ ಮತ್ತು ಹಾಂಕಾಂಗ್‌ ತಂಡಗಳು ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ಲೀಗ್‌ ಹಂತದಲ್ಲಿ 6 ತಂಡಗಳನ್ನು ಎರಡು ಗುಂಪನ್ನಾಗಿಸಲಾಗಿದೆ. 'ಎ;' ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಹಾಂಕಾಂಗ್‌ ತಂಡಗಳು ಪೈಪೋಟಿ ನಡೆಸಲಿವೆ. 'ಬಿ' ಗುಂಪಿನಲ್ಲಿ ಅಫಘಾನಿಸ್ತಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿವೆ. ಅಗ್ರ ಎರಡು ತಂಡಗಳು ಸೂಪರ್‌ 4 ಹಂತಕ್ಕೆ ತೇರ್ಗಡೆಯಾಗಲಿವೆ.

ಟೂರ್ನಿ ಆಗಸ್ಟ್‌ 27ರಂದು ಶ್ರೀಲಂಕಾ ಮತ್ತು ಅಫಘಾನಿಸ್ತಾನ ನಡುವಣ ಉದ್ಘಾಟನಾ ಪಂದ್ಯದೊಂದಿಗೆ ಶುರುವಾಗಲಿದೆ. ಆದರೂ, ಇಡೀ ಕ್ರಿಕೆಟ್‌ ಜಗತ್ತಿನ ಕಣ್ಣು ಆಗಸ್ಟ್‌ 28ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಕಾದಾಟದ ಮೇಲೆ ನೆಲೆಸಿದೆ.

Danish Kaneria Breaks His Silence, Reveals Name Of Former Pakistan Captain  Who Ruined His ODI Career

ಈ ಹೈ-ವೋಲ್ಟೇಜ್‌ ಪಂದ್ಯದ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ಲೆಗ್‌ ಸ್ಪಿನ್ನರ್‌ ದಾನಿಶ್‌ ಕನೇರಿಯಾ, ಟೀಮ್ ಇಂಡಿಯಾ ತನ್ನ ತಂಡ ಆಯ್ಕೆ ಸಂದರ್ಭದಲ್ಲಿ ಗಾಯದ ಸಮಸ್ಯೆಯಿಂದ ಈಗಷ್ಟೇ ಚೇತರಿಸಿರುವ ಕೆ.ಎಲ್‌ ರಾಹುಲ್‌ ಅವರ ಬದಲು ಇನ್‌ಫಾರ್ಮ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದಿದ್ದಾರೆ.

It was tough watching your friends play...': Samson's hard-hitting  revelation | Cricket - Hindustan Times

"ಏಷ್ಯಾ ಕಪ್‌ ಟೂರ್ನಿಗೆ ಖಂಡಿತಾ ಸಂಜು ಸ್ಯಾಮ್ಸನ್‌ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಗಾಯದಿಂದ ಚೇತರಿಸಿರುವ ಕೆ.ಎಲ್‌ ರಾಹುಲ್‌ ಅವರಿಗೆ ಆಸ್ಟ್ರೇಲಿಯಾದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಕಡೆಗೆ ಗಮನ ನೀಡಲು ಸಮಯಾವಕಾಶ ಕೊಡಬೇಕಿತ್ತು," ಎಂದು ಕ್ರಿಕೆಟ್‌ ನೆಕ್ಸ್ಟ್‌ ಕಾರ್ಯಕ್ರಮದಲ್ಲಿ ಕನೇರಿಯಾ ಹೇಳಿದ್ದಾರೆ.

I was out for 2 months but team hasn't forgotten what I have done for 2  years: KL Rahul | Sports News,The Indian Express

"ಕೆ.ಎಲ್‌ ರಾಹುಲ್‌ ಈಗಷ್ಟೇ ಗಾಯದ ಸಮಸ್ಯೆಯಿಂದ ಚೇತರಿಸಿದ್ದಾರೆ. ಜಿಂಬಾಭ್ವೆ ಪ್ರವಾಸ ಮುಗಿಸಿ ಬಂದಿದ್ದಾರೆ. ಈಗ ಏಷ್ಯಾ ಕಪ್‌ ಆಡಲು ಮುಂದಾಗುತ್ತಿದ್ದಾರೆ. ಅವರ ಬದಲು ಉತ್ತಮ ಲಯದಲ್ಲಿರುವ ಸಂಜು ಸ್ಯಾಮ್ಸನ್‌ ಅವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆತ ಅದ್ಭುತ ಆಟವಾಡುತ್ತಿದ್ದಾನೆ. ಸಂಜುಗೆ ಭಾರತ ತಂಡದಲ್ಲಿ ಸತತ ಅವಕಾಶಗಳನ್ನು ಕೊಡಬೇಕಿದೆ. ಆತನಿಗೆ ಸ್ಥಿರ ಅವಕಾಶಗಳು ಸಿಗುತ್ತಿಲ್ಲ. ರಾಹುಲ್‌ ದ್ರಾವಿಡ್‌ ಅವರಿಗೆ ಸಂಜು ಬಗ್ಗೆ ಚೆನ್ನಾಗಿ ತಿಳಿದಿದೆ. ಅವರ ಪ್ರತಿಭೆ ಏನೆಂಬ ಅರಿವಿದೆ. ಹೀಗಾಗಿ ಸಂಜುಗೆ ಏಷ್ಯಾ ಕಪ್‌ ಆಡುವ ಅವಕಾಶ ಕೊಡಬೇಕಿತ್ತು," ಎಂದಿದ್ದಾರೆ.

ಏಷ್ಯಾ ಕಪ್‌ 2022 ಟೂರ್ನಿಯ ವೇಳಾಪಟ್ಟಿ ಹೀಗಿದೆ

  • ಆಗಸ್ಟ್‌ 27 (ಶನಿವಾರ): ಶ್ರೀಲಂಕಾ vs ಅಫಘಾನಿಸ್ತಾನ (ದುಬೈ)
  • ಆಗಸ್ಟ್‌ 28 (ಭಾನುವಾರ): ಭಾರತ vs ಪಾಕಿಸ್ತಾನ (ದುಬೈ)
  • ಆಗಸ್ಟ್‌ 30 (ಮಂಗಳವಾರ): ಬಾಂಗ್ಲಾದೇಶ vs ಅಫಘಾನಿಸ್ತಾನ (ಶಾರ್ಜಾ)
  • ಆಗಸ್ಟ್ 31 (ಬುಧವಾರ): ಭಾರತ vs ಹಾಂಕಾಂಗ್ (ದುಬೈ)
  • ಸೆಪ್ಟೆಂಬರ್‌ 01 (ಗುರುವಾರ): ಶ್ರೀಲಂಕಾ vs ಬಾಂಗ್ಲಾದೇಶ (ದುಬೈ)
  • ಸೆಪ್ಟೆಂಬರ್‌ 02 (ಶುಕ್ರವಾರ): ಪಾಕಿಸ್ತಾನ vs ಹಾಂಕಾಂಗ್‌ (ಶಾರ್ಜಾ)
  • ಸೆಪ್ಟೆಂಬರ್‌ 03 (ಶನಿವಾರ): ಸೂಪರ್‌ 4 ಹಂತದ ಪಂದ್ಯ ಬಿ1 vs ಬಿ2 (ಶಾರ್ಜಾ)
  • ಸೆಪ್ಟೆಂಬರ್‌ 04 (ಭಾನುವಾರ): ಸೂಪರ್‌ 4 ಹಂತದ ಪಂದ್ಯ ಎ1 vs ಎ2 (ದುಬೈ)
  • ಸೆಪ್ಟೆಂಬರ್‌ 06 (ಮಂಗಳವಾರ): ಸೂಪರ್‌ 4 ಹಂತದ ಪಂದ್ಯ ಎ1 vs ಬಿ1 (ದುಬೈ)
  • ಸೆಪ್ಟೆಂಬರ್‌ 07 (ಬುಧವಾರ): ಸೂಪರ್‌ 4 ಹಂತದ ಪಂದ್ಯ ಎ2 vs ಬಿ2 (ದುಬೈ)
  • ಸೆಪ್ಟೆಂಬರ್‌ 08 (ಗುರುವಾರ): ಸೂಪರ್‌ 4 ಹಂತದ ಪಂದ್ಯ ಎ1 vs ಬಿ2 (ದುಬೈ)
  • ಸೆಪ್ಟೆಂಬರ್‌ 09 (ಶುಕ್ರವಾರ): ಸೂಪರ್‌ 4 ಹಂತದ ಪಂದ್ಯ ಬಿ1 vs ಎ2 (ದುಬೈ)
  • ಸೆಪ್ಟೆಂಬರ್‌ 11 (ಭಾನುವಾರ): ಫೈನಲ್‌ ಪಂದ್ಯ

Asia Cup 2022 Team India Should Have Selected Sanju Samson In Place Of Kl Rahul Says Danish Kaneria.