Ind Vs Pak Salman Butt Slams Pakistan Batters For Inability To Face Bouncers.

">

ಪಾಕ್‌ ಬ್ಯಾಟರ್‌ಗಳ ವೈಫಲ್ಯವನ್ನು ಬಲವಾಗಿ ಖಂಡಿಸಿದ ಸಲ್ಮಾನ್‌ ಬಟ್‌!

29-08-22 02:54 pm       Source: Vijayakarnataka   ಕ್ರೀಡೆ

ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು 'ಎ' ಗುಂಪಿನ...

 

ದುಬೈ:ಟೀಮ್ ಇಂಡಿಯಾ ವಿರುದ್ಧದ ಏಷ್ಯಾ ಕಪ್‌ 2022 ಟೂರ್ನಿಯ 'ಎ' ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ 5 ವಿಕೆಟ್‌ಗಳ ಸೋಲುಂಡ ಬೆನ್ನಲ್ಲೇ ಪಾಕ್‌ ತಂಡದ ಮಾಜಿ ನಾಯಕ ಸಲ್ಮಾನ್‌ ಬಟ್‌ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ. ದುಬೈ ಕ್ರೀಡಾಂಗಣದ ಪಿಚ್‌ನಲ್ಲಿ ಲಭ್ಯವಿದ್ದ ಹೆಚ್ಚುವರಿ ಬೌನ್ಸ್‌ನ ಲಾಭ ತೆಗೆದುಕೊಂಡ ಟೀಮ್ ಇಂಡಿಯಾ ವೇಗಿಗಳು ಶಾರ್ಟ್‌ ಪಿಚ್‌ ಎಸೆತಗಳನ್ನು ಅದ್ಭುತವಾಗಿ ಬಳಕೆ ಮಾಡಿ ಪಾಕ್‌ ಬ್ಯಾಟರ್‌ಗಳ ಅಬ್ಬರಕ್ಕೆ ಬ್ರೇಕ್‌ ಹಾಕಿದರು. ಹೀಗಾಗಿ ಭಾರತೀಯ ಬೌಲರ್‌ಗಳ ಬೌನ್ಸರ್‌ಗಳ ಎದುರು ಬ್ಯಾಟ್‌ ಬೀಸಲು ವಿಫಲರಾದ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಸಲ್ಮಾನ್‌ ಬಟ್‌ ಹರಿಹಾಯ್ದಿದ್ದಾರೆ.

ಪಾಕ್ ತಂಡದ ಬ್ಯಾಟಿಂಗ್‌ ಬೆನ್ನೆಲುಬಾದ ಬಾಬರ್‌ ಆಝಮ್ ಮತ್ತು ಮೊಹಮ್ಮದ್‌ ರಿಝ್ವಾನ್‌ ಇಬ್ಬರೂ ಕೂಡ ಬೌನ್ಸರ್‌ಗಳ ಎದುರು ವಿಕೆಟ್‌ ಕೈಚೆಲ್ಲಿದರು. ಪವರ್‌-ಪ್ಲೇ ಓವರ್‌ಗಳಲ್ಲಿ 10 ರನ್‌ ಗಳಿಸಿದ್ದ ಪಾಕ್‌ ನಾಯಕ ಬಾಬರ್‌ ಆಝಮ್‌, ಭಾರತ ತಂಡದ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಎಸೆದ ಬೌನ್ಸರ್‌ನಲ್ಲಿ ಪುಲ್‌ಶಾಟ್ ಹೊಡೆಯುವ ಪ್ರಯತ್ನ ಮಾಡಿ ಶಾರ್ಟ್ ಫೈನ್‌ಲೆಗ್‌ ಫೀಲ್ಡರ್‌ಗೆ ಕ್ಯಾಚಿತ್ತರು. ಇನ್ನು 42 ಎಸೆತಗಳಲ್ಲಿ 43 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ರಿಝ್ವಾನ್‌, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಎಸೆದ ಶಾರ್ಟ್‌ ಪಿಚ್‌ ಎಸೆತವನ್ನು ಥರ್ಡ್‌ಮ್ಯಾನ್‌ ವಿಭಾಗದಲ್ಲಿ ಬೌಂಡರಿ ಗೆರೆ ದಾಟಿಸುವ ಪ್ರಯತ್ನ ಮಾಡಿ ಡೀಪ್‌ ಫೀಲ್ಡರ್‌ಗೆ ಕ್ಯಾಚ್‌ ಒಪ್ಪಿಸಿದರು.

India vs Pakistan Highlights: All-Round Hardik Pandya Helps India Beat  Pakistan In Asia Cup Nail-Biter | Cricket News

ಈ ಬಗ್ಗೆ ಮಾತನಾಡಿರುವ ಸಲ್ಮಾನ್‌ ಬಟ್‌, ಪಾಕಿಸ್ತಾನ ತಂಡದ ಬ್ಯಾಟರ್‌ಗಳು ಈ ಮೊದಲು ಮಿಕಿ ಆರ್ಥರ್‌ ತಂಡದ ಮುಖ್ಯ ಕೋಚ್‌ ಆಗಿದ್ದ ದಿನದಿಂದಲೂ ಶಾರ್ಟ್‌ ಪಿಚ್‌ ಎಸೆತಗಳನ್ನು ನಿಭಾಯಿಸಲು ವಿಫಲರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

Khushdil Shah profile and biography, stats, records, averages, photos and  videos

"ಕೊಂಚ ಬೌಲಿಂಗ್‌ ಮಾಡುವ ಸಾಮರ್ಥ್ಯವನ್ನೂ ಹೊಂದಿರುವ ಖುಷ್ದಿಲ್‌ ಶಾ ಅವರನ್ನು ಪಾಕ್‌ ತನ್ನ ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡಿತ್ತು. ಆದರೆ, ಈ ಪಿಚ್‌ಗೆ ಅವರು ಸೂಕ್ತವಾದ ಆಟಗಾರ ಆಗಿರಲಿಲ್ಲ. ಇನ್ನು ಪಂದ್ಯದಲ್ಲಿ ಪಾಕ್‌ ತಂಡದ 5 ಬ್ಯಾಟರ್‌ಗಳು ಶಾರ್ಟ್‌ ಪಿಚ್‌ ಎಸೆತಗಳ ಎದುರು ವಿಕೆಟ್‌ ಕೈಚೆಲ್ಲಿದರು. 2019ರ ನ್ಯೂಜಿಲೆಂಡ್‌ ಪ್ರವಾಸದಲ್ಲೂ ಪಾಕಿಸ್ತಾನ ತಂಡ ಇದೇ ಸಮಸ್ಯೆ ಎದುರಿಸಿತ್ತು. ಬಳಿಕ ಆಸ್ಟ್ರೇಲಿಯಾದಲ್ಲೂ ಇದೇ ತೊಂದರೆ ಎದುರಿಸಿತ್ತು," ಎಂದು ಬಟ್‌ ಸ್ಮರಿಸಿದ್ದಾರೆ.

"2019ಎ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲೂ ವೆಸ್ಟ್‌ ಇಂಡೀಸ್‌ ತಂಡದ ಬೌಲರ್‌ಗಳು ಬೌನ್ಸರ್‌ಗಳ ಸುರಿಮಳೆಗೈದು ಪಾಕ್‌ ತಂಡದ ಎದುರು ಯಶಸ್ಸು ಕಂಡರು. ಮಿಕಿ ಆರ್ಥರ್‌ ತಂಡ ಕೋಚ್‌ ಆದ ದಿನದಿಂದಲೂ ಈ ಸಮಸ್ಯೆ ಕಾಡುತ್ತಾಬಂದಿದೆ. ಇದಕ್ಕೆ ಈವರೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ," ಎಂದಿದ್ದಾರೆ.

Mohammad Rizwan's T20I Records Might Never Be Broken

"ಭಾರತ ತಂಡ ತನ್ನ ರಣತಂತ್ರವನ್ನು ಅತ್ಯುತ್ತಮವಾಗಿ ರಚಿಸಿತ್ತು. ರಿಝ್ವಾನ್‌ ವಿಕೆಟ್‌ ಸಲುವಾಗಿ ಥರ್ಡ್‌ ಮ್ಯಾನ್‌ ಫೀಲ್ಡರ್‌ನ ಕೊಂಚ ವಿಕೆಟ್‌ ನೇರವಾಗಿ ನಿಲ್ಲಿಸಲಾಗಿತ್ತು. ಹೀಗಾಗಿ ಕ್ಯಾಚ್‌ ಸಲುವಾಗಿ ಕಷ್ಟ ಪಡುವಂತೆ ಆಗಲೇ ಇಲ್ಲ. ಫೀಲ್ಡರ್‌ ಇದ್ದ ಜಾಗಕ್ಕೇ ಚೆಂಡು ಗಾಳಿಯಲ್ಲಿ ಹಾರಿತ್ತು. ಭಾರತ ತಂಡದ ರಣತಂತ್ರದಿಂದಾಗಿ ಪಾಕ್‌ ಬ್ಯಾಟರ್‌ಗಳು ವಿಚಲಿತರಾದರು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು," ಎಂದು ವಿವರಿಸಿದ್ದಾರೆ.

ಇದೇ ವರ್ಷ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಖಂಡಿತಾ ಉತ್ತಮ ಪ್ರದರ್ಶನ ನೀಡಲಿದೆ ಎಂದು ಬಟ್‌ ಅಭಿಪ್ರಾಯ ಪಟ್ಟಿದ್ದಾರೆ.

"ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ಕ್ರಿಕೆಟ್‌ ವಿಶ್ವಕಪ್‌ ನಡೆಯಲಿದ್ದು, ಅಲ್ಲಿನ ಫಾಸ್ಟ್‌ ಬೌಲಿಂಗ್‌ ಸ್ನೇಹಿ ಪಿಚ್‌ಗಳು ಮತ್ತು ಬೃಹತ್‌ ಮೈದಾನಗಳಲ್ಲಿ ಪಾಕಿಸ್ತಾನ ತಂಡ ಖಂಡಿತಾ ಯಶಸ್ಸು ಕಾಣಬಲ್ಲದು. ಈ ಸಲುವಾಗಿ ಅಗತ್ಯದ ತಯಾರಿ ನಡೆಸುವ ಅಗತ್ಯವಿದೆ ಅಷ್ಟೇ," ಎಂದು ಬಟ್‌ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗ 'ಎ' ಗುಂಪಿನಲ್ಲಿ ಹಾಂಕಾಂಗ್‌ ಎದುರು ಪೈಪೋಟಿ ನಡೆಸುವುದು ಬಾಕಿ ಇದೆ. ಈ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೂಪರ್‌ 4 ಹಂತಕ್ಕೆ ತೇರ್ಗಡೆಯಾಗಲಿವೆ. ಭಾರತ ಮತ್ತು ಹಾಂಕಾಂಗ್‌ ನಡುವಣ ಪಂದ್ಯ ಆಗಸ್ಟ್‌ 31ರಂದು (ಬುಧವಾರ) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ನಡೆಯಲಿದೆ.

Ind Vs Pak Salman Butt Slams Pakistan Batters For Inability To Face Bouncers.