Asia Cup 2022 India Vs Hong Kong Group A Match Preview, Playing Xi And Head To Head Records.

">

ಪಿಚ್‌ ವರದಿ ಮತ್ತು ಪ್ಲೇಯಿಂಗ್‌ XI ವಿವರ ಇಲ್ಲಿದೆ!

30-08-22 06:18 pm       Source: Vijayakarnataka   ಕ್ರೀಡೆ

ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಗ್ರೂ 'ಎ' ಪಂದ್ಯದಲ್ಲಿ ಸೋಲಿನ ದವಡೆಗೆ ಸಿಲುಕಿದರೂ ಕೂಡ 5 ವಿಕೆಟ್‌ಗಳ ಜಯ ದಾಖಲಿಸಿದ ಭಾರತ ತಂಡ, ಈಗ ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಖಾತ್ರಿ ಪಡಿಸಿಕೊಳ್ಳಲು ಕ್ರಿಕೆಟ್‌ ಕೂಸು ಹಾಂಕಾಂಗ್‌ ಎದುರು ಪೈಪೋಟಿ ನಡೆಸಲಿದೆ.

ದುಬೈ: ಏಷ್ಯಾ ಕಪ್‌ 2022 ಟೂರ್ನಿಯ 4ನೇ ಲೀಗ್‌ ಪಂದ್ಯದಲ್ಲಿ 7 ಬಾರಿ ಚಾಂಪಿಯನ್ಸ್‌ ಟೀಮ್ ಇಂಡಿಯಾ ಮತ್ತು ಕ್ರಿಕೆಟ್‌ ಕೂಸು ಹಾಂಕಾಂಗ್‌ ತಂಡಗಳು ಪೈಪೋಟಿ ನಡೆಸಲಿವೆ. ಇದೀಗ 'ಎ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಕಡೆಗೆ ಕಣ್ಣಿಟ್ಟಿರುವ ಭಾರತ ತಂಡ ಕ್ರಿಕೆಟ್‌ ಕೂಸು ಹಾಂಕಾಂಗ್‌ ಎದುರು ಕಾದಾಡಲಿದೆ.

ಹಾರ್ದಿಕ್‌ ಪಾಂಡ್ಯ ಅವರ ಆಲ್‌ರೌಂಡ್‌ ಆಟ, ಭುವನೇಶ್ವರ್‌ ಕುಮಾರ್‌ ಅವರ ಭರ್ಜರಿ ಬೌಲಿಂಗ್‌ ಮತ್ತು ರವೀಂದ್ರ ಜಡೇಜಾ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಮಿಂಚಿದ ಟೀಮ್ ಇಂಡಿಯಾ, ಸೋಲಿನ ದವಡೆಯಿಂದ ಪಾರಾಗಿ 5 ವಿಕೆಟ್‌ಗಳ ಜಯ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಅಜೇಯ 33 ರನ್‌ಗಳಿಸಿದರೆ, ಬೌಲಿಂಗ್‌ನಲ್ಲೂ ಪ್ರಮುಖ 3 ವಿಕೆಟ್‌ ಕಿತ್ತರು. ಭುವನೇಶ್ವರ್‌ ಕುಮಾರ್‌ ಅನುಭವದ ದಾಳಿ ಸಂಘಟಿಸಿ ಒಟ್ಟು 4 ವಿಕೆಟ್‌ ಪಡೆದರೆ, ರವೀಂದ್ರ ಜಡೇಜಾ 29 ಎಸೆತಗಳಲ್ಲಿ 35 ರನ್‌ಗಳ ಅಮೂಲ್ಯ ಕೊಡುಗೆ ಕೊಟ್ಟರು.

Rohit Sharma: I would never say ODI or any format is getting finished

ಪ್ರಮುಖ ಪಂದ್ಯ ಗೆದ್ದಿರುವ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡದ ಆತ್ಮವಿಶ್ವಾಸ ಈಗ ಮುಗಿಲು ಮುಟ್ಟಿದೆ. ಹೀಗಾಗಿ ನಿಝಾಕತ್‌ ಖಾನ್‌ ಸಾರಥ್ಯದ ಹಾಂಕಾಂಗ್‌ ಎದುರು ಕೂಡ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕಿಳಿಯಲಿದೆ.

Hong Kong captain Nizakat Khan is a Jabra fan of King Kohli - Focus News

ದುಬೈ ಪಿಚ್‌ ವರದಿ
ಈ ಬಾರಿಯ ಏಷ್ಯಾ ಕಪ್‌ನಲ್ಲಿ ದುಬೈ ಕ್ರೀಡಾಂಗಣದಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಬೇರೆ ಬೇರೆ ಪಿಚ್‌ಗಳ ಬಳಕೆಯಾಗಿದೆ. ಮೊದಲಿಗೆ ಅಫಘಾನಿಸ್ತಾನ ಮತ್ತು ಶ್ರೀಲಂಕಾ ನಡುವಣ ಪಂದ್ಯದಲ್ಲಿ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಸಿಕ್ಕರೆ, ನಂತರ ಪಾಕ್‌-ಭಾರತ ನಡುವಣ ಪಂದ್ಯಕ್ಕೆ ಬಳಕೆ ಮಾಡಲಾಗಿದ್ದ ಪಿಚ್‌ ವೇಗಿಗಳಿಗೆ ನೆರವಾಗುತ್ತಿತ್ತು. ಆದರೂ, ಈ ಪಿಚ್‌ನಲ್ಲಿ 160 ರನ್‌ ಸ್ಕೋರ್‌ ಮಾಡಿದರೆ ರನ್‌ ಚೇಸ್‌ ತಂಡ ಜಯ ದಕ್ಕಿಸಿಕೊಳ್ಳಲು ಬಹಳಾ ಕಷ್ಟ ಪಡಬೇಕಾಗುತ್ತದೆ. ಟಾಸ್‌ ಗೆದ್ದ ತಂಡ ಬೌಲಿಂಗ್‌ ಆಯ್ಕೆ ಮಾಡುವುದು ನಿಶ್ಚಿತ.

ಭಾರತ ತಂಡದಲ್ಲಿ ಬದಲಾವಣೆ ಅನುಮಾನ

Great for India': Scott Styris on KL Rahul's Comeback to the Indian Team

ಟೀಮ್ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರುವುದು ಅನುಮಾನವಾಗಿದೆ. ಇನ್ನು ಹಾಂಕಾಂಗ್‌ ವಿರುದ್ಧದ ಪಂದ್ಯ ಔಟ್‌ ಆಫ್‌ ಫಾರ್ಮ್‌ ಬ್ಯಾಟರ್‌ಗಳಿಗೆ ಉತ್ತಮ ಅಭ್ಯಾಸ ತಂದುಕೊಡಲಿದೆ. ಹೀಗಾಗಿ ಈ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಲಯ ಕಂಡುಕೊಳ್ಳಲಿದ್ದಾರೆಂಬ ವಿಶ್ವಾಸವಿದೆ. ಭಾರತೀಯ ಬ್ಯಾಟರ್‌ಗಳಿಗೆ ಅಬ್ಬರಿಸಲು ಉತ್ತಮ ವೇದಿಕೆ ಸಿಕ್ಕಂತ್ತಾಗಿದೆ.

ಭಾರತ ತಂಡದ ಸಂಭಾವ್ಯ ಇಲೆವೆನ್
1. ರೋಹಿತ್‌ ಶರ್ಮಾ (ನಾಯಕ/ ಓಪನರ್‌)
2. ಕೆ.ಎಲ್‌ ರಾಹುಲ್‌ (ಓಪನರ್‌)
3. ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್‌)
4. ಸೂರ್ಯಕುಮಾರ್‌ ಯಾದವ್‌ (ಬ್ಯಾಟ್ಸ್‌ಮನ್‌)

5. ರವೀಂದ್ರ ಜಡೇಜಾ (ಆಲ್‌ರೌಂಡರ್‌)
6. ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌)
7. ದಿನೇಶ್‌ ಕಾರ್ತಿಕ್‌ (ವಿಕೆಟ್‌ಕೀಪರ್‌/ ಬ್ಯಾಟ್ಸ್‌ಮನ್‌)
8. ಭುವನೇಶ್ವರ್‌ ಕುಮಾರ್‌ (ಬಲಗೈ ವೇಗಿ)
9. ಅವೇಶ್‌ ಖಾನ್‌ (ಬಲಗೈ ವೇಗಿ)
10. ಯುಜ್ವೇಂದ್ರ ಚಹಲ್‌ (ಲೆಗ್‌ ಸ್ಪಿನ್ನರ್‌)
11. ಅರ್ಷದೀಪ್‌ ಸಿಂಗ್‌ (ಎಡಗೈ ವೇಗಿ)

ಕ್ವಾಲಿಫೈಯರ್‌ ತಂಡ ಹಾಂಕಾಂಗ್
ಏಷ್ಯಾ ಕಪ್‌ ಟೂರ್ನಿಯ ಕ್ವಾಲಿಫೈಯರ್‌ ಹಂತದಲ್ಲಿ ಮಿಂಚಿದ ಹಾಂಕಾಂಗ್‌ ತಂಡ ಆತಿಥೇಯ ಯುಎಇ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಪ್ರಧಾನ ಘಟ್ಟಕ್ಕೆ ಕಾಲಿಟ್ಟಿದೆ. ಇದೀಗ ಮೊದಲ ಹಣಾಹಣಿಯಲ್ಲೇ ಬಲಿಷ್ಠ ಭಾರತ ತಂಡದ ಸವಾಲು ಎದುರಿಸಲಿದೆ. ಯಾಸಿಮ್‌ ಮುರ್ತಾಝ, ನಿಝಾಕಲತ್‌ ಖಾನ್‌, ಬಾಬರ್‌ ಹಯಾತ್‌, ಕಿಂಚಿತ್‌ ಶಾ, ಏಜಾಝ್‌ ಖಾನ್‌ ಹಾಗೂ ಎಹ್ಸಾನ್‌ ಖಾನ್‌ ಅವರಂತಹ ಹಲವು ಸ್ಟಾರ್‌ ಆಟಗಾರರು ತಂಡದಲ್ಲಿದ್ದಾರೆ.

ಹಾಂಕಾಂಗ್‌ ಸಂಭಾವ್ಯ ಇಲೆವೆನ್
ಯಾಸಿಮ್‌ ಮುರ್ತಾಝ, ನಿಝಾಕತ್‌ ಖಾನ್‌ (ನಾಯಕ), ಬಾಬರ್‌ ಹಯಾತ್‌, ಕಿಂಚಿತ್‌ ಶಾ, ಏಜಾಝ್‌ ಖಾನ್‌, ಸ್ಕಾಟ್‌ ಮೆಕೇಶಿ, ಝೀಶಾನ್ ಅಲಿ, ಹರೂನ್‌ ಅರ್ಷದ್‌, ಎಹ್ಸಾನ್‌ ಖಾನ್‌, ಮೊಹಮ್ಮದ್‌ ಗಹ್ಜಾನ್ಫರ್‌, ಆಯುಶ್‌ ಶುಕ್ಲಾ.

ಭಾರತ-ಹಾಂಕಾಂಗ್‌ ಮುಖಾಮುಖಿ
ಟಿ20 ಕ್ರಿಕೆಟ್‌ನಲ್ಲಿ ಭಾರತ ಮತ್ತು ಹಾಂಕಾಂಗ್‌ ತಂಡಗಳು ಮುಖಾಮುಖಿ ಆಗುತ್ತಿರುವುದು ಇದೇ ಮೊದಲು. 2018ರಲ್ಲಿ ನಡೆದ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ಭಾರತ ತಂಡ ಸಹಜವಾಗಿಯೇ ಸುಲಭ ಜಯ ತನ್ನದಾಗಿಸಿಕೊಂಡಿತ್ತು

 

Asia Cup 2022 India Vs Hong Kong Group A Match Preview, Playing Xi And Head To Head Records.