ಬ್ರೇಕಿಂಗ್ ನ್ಯೂಸ್
09-09-22 03:51 pm Source: Vijayakarnataka ಕ್ರೀಡೆ
ದುಬೈ: ಇಂಗ್ಲೆಂಡ್ ಪ್ರವಾಸದ ಬಳಿಕ ಒಂದು ತಿಂಗಳ ವಿಶ್ರಾಂತಿ ತೆಗೆದುಕೊಂಡು ಏಷ್ಯಾ ಕಪ್ 2022 ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಶ್ರೇಷ್ಠ ಲಯಕ್ಕೆ ಮರಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಳಪೆ ಪ್ರದರ್ಶನದಿಂದ ಬಳಲಿದ್ದ ಟೀಮ್ ಇಂಡಿಯಾ ತಾರೆ ವಿರಾಟ್ ಕೊಹ್ಲಿ, ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು. ಅದರಲ್ಲೂ ದುಬೈ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ, ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಸಲುವಾಗಿ ನಡೆಸಿದ್ದ ಭಗೀರತ ಪ್ರಯತ್ನಕ್ಕೆ ಅಂತ್ಯ ಹಾಡಿದರು.
2022ರ ಸಾಲಿನ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ, ಆಡಿದ 5 ಇನಿಂಗ್ಸ್‌ಗಳಿಂದ ಒಟ್ಟಾರೆ 276 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಮತ್ತೊಂದು ಶತಕ ಸೇರಿದೆ. ಅಂದಹಾಗೆ ಶ್ರೀಲಂಕಾ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಕೊಹ್ಲಿ ಡಕ್‌ಔಟ್ ಆಗಿದ್ದರು. ಹೀಗಾಗಿ ಉಳಿದ 4 ಇನಿಂಗ್ಸ್‌ಗಳಲ್ಲಿ 276 ರನ್ ಸಿಡಿಸಿದ್ದಾರೆ.
ಅಫಘಾನಿಸ್ತಾನ ವಿರುದ್ಧದ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮಹತ್ವ ಪಡೆದಿದ್ದ ಕಾರಣ ಎಂದಿನ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ತೆಗೆದುಕೊಂಡರು. ಈ ಕಾರಣಕ್ಕೆ ರಾಹುಲ್ ತಂಡವನ್ನು ಮುನ್ನಡೆಸುವಂತ್ತಾದರೆ, ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದರು. ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲಿ ನಿಂತು ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಬಾರಿಸಿ, ಭಾರತಕ್ಕೆ 212/2 ರನ್‌ಗಳ ಬೃಹತ್ ಮೊತ್ತ ತಂದುಕೊಟ್ಟರು.
ಈ ಮನಮೋಹಕ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪಂದ್ಯದ ಬಳಿಕ ಮಾತಿಗಿಳಿದ ವಿರಾಟ್ ಕೊಹ್ಲಿ, ಈ ಸಂದರ್ಭದಲ್ಲಿ ಶುದ್ಧ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ನಾಯಕ ರೋಹಿತ್ ಶರ್ಮಾ ಅವರ ಕಾಲೆಳೆದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
What happens when @ImRo45 interviews @imVkohli ☺️ 👏
— BCCI (@BCCI) September 9, 2022
Laughs, mutual admiration & a lot of respect 😎- by @ameyatilak
Full interview 📽️https://t.co/8bVUaa0pUw #TeamIndia | #AsiaCup2022 | #INDvAFG pic.twitter.com/GkdPr9crLh
"ವಿರಾಟ್ ನಿಮಗೆ 71ನೇ ಶತಕದ ಅಭಿನಂದನೆಗಳು. ಇದಕ್ಕಾಗಿ ಇಡೀ ಭಾರತವೇ ಕಾಯುತ್ತಿತ್ತು, ನೀವು ಕೂಡ ಅಷ್ಟೇ ಕಾತುರದಿಂದ ಈ ಶತಕವನ್ನು ಎದುರು ನೋಡುತ್ತಿದ್ದಿರಿ. ಇಮ್ಮ ಈ ಮನಮೋಹಕ ಇನಿಂಗ್ಸ್‌ನಲ್ಲಿ ಹಲವು ಸಂಗತಿಗಳು ಗಮನ ಸೆಳೆದಿದೆ. ಫೀಲ್ಡರ್ ಇಲ್ಲದ ಜಾಗಗಳಿಗೆ ಚೆಂಡನ್ನು ಹೊಡೆಯುವುದರ ಜೊರತೆಗೆ, ಉತ್ತಮ ಹೊಡೆತಗಳನ್ನು ಬಳಕೆಗೆ ತಂದಿದ್ದೀರಿ. ಹೀಗಾಗಿ ನಿಮ್ಮ ಈ ಇನಿಂಗ್ಸ್ ಬಗ್ಗೆ ಮಾತನಾಡಿ. ಹೇಗೆ ಆರಂಭಿಸಿದಿರಿ, ಶತಕದ ನಂತರದ ಅನುಭವ ಹೇಗಿತ್ತು ವಿವರಿಸಿ," ಎಂದು ರೋಹಿತ್ ಸಂಪೂರ್ಣ ಹಿಂದಿ ಭಾಷೆಯಲ್ಲಿ ವಿರಾಟ್‌ಗೆ ಪ್ರಶ್ನೆ ಕೇಳಿದರು.
ರೋಹಿತ್ ಸಂಪೂರ್ಣ ಹಿಂದಿಯಲ್ಲಿ ಮಾತನಾಡಿದ್ದನ್ನು ಕಂಡು ಬೆರಗಾದ ಕೊಹ್ಲಿ, ಮೊದಲು ಕ್ಯಾಪ್ಟನ್‌ನ ಕಾಲೆಳೆದರು. "ನನ್ನ ಬಳಿ ಮೊದಲ ಬಾರಿ ಇಷ್ಟು ಶುದ್ಧ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ," ಎಂದು ಕೊಹ್ಲಿ ಕ್ಯಾಪ್ಟನ್ ಕಾಲೆಳೆದು ಕೆಲ ಸಮಯ ನಕ್ಕರು.
"ಹೊರಗಡೆ ಹಲವು ಸಂಗತಿಗಳು ನಡೆಯುತ್ತಿವೆ ಎಂಬುದು ನನಗೆ ಗೊತ್ತಿದೆ. ನಾನು ನನ್ನ ರಿಂಗ್‌ಗೆ ಮುತ್ತಿಟ್ಟೆ. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಆ ವ್ಯಕ್ತಿ ನನಗೆ ನೀಡಿರುವ ಬೆಂಬಲದಿಂದ. ಅದು ಅನುಷ್ಕಾ, ಈ ಶತಕವನ್ನು ಆಕೆಗೆ ಮತ್ತು ಮುದ್ದು ಮಗಳು ವಮಿಕಾಗೆ ಅರ್ಪಿಸುತ್ತೇನೆ," ಎಂದು ವಿರಾಟ್ ತಮ್ಮ ಮನಮೋಹಕ ಇನಿಂಗ್ಸ್ ಬಗ್ಗೆ ಹೇಳಿದ್ದರು.
"ನಾನು ಕಮ್ ಬ್ಯಾಕ್ ಮಾಡಿದ ಬಳಿಕ ರನ್ ಗಳಿಸಲೇ ಬೇಕೆಂಬ ಚಡಪಡಿಕೆಯಲ್ಲಿ ಇರಲಿಲ್ಲ. 6 ವಾರಗಳ ವಿಶ್ರಾಂತಿಯಿಂದ ನನ್ನ ಮನಸ್ಥಿತಿ ಸಾಕಷ್ಟು ಸುಧಾರಿಸಿದೆ. ನಾನು ಎಷ್ಟು ದಣಿದಿದ್ದೆ ಎಂಬುದರ ಅರಿವು ನನಗಾಯಿತು. ಈ ವಿರಾಮ ನನ್ನ ಆಟವನ್ನು ಮರಳಿ ಪಡೆಯಲು ನೆರವಾಯಿತು," ಎಂದು ಹೇಳಿದರು. ಇದೇ ವರ್ಷ ಜುಲೈನಲ್ಲಿ ಕೈಗೊಂಡಿದ್ದ ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿ ತೆಗೆದುಕೊಮಡ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಸರಿಣಿಗಳಿಂದ ಹೊರಗುಳಿದು ಬಳಿಕ ಏಷ್ಯಾ ಕಪ್ 2022 ಟೂರ್ನಿಯಲ್ಲಿ ಭಾರತ ತಂಡದ ಸೇವೆಗೆ ಮರಳಿದರು. ಇದೀಗ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಕೊಹ್ಲಿ ಶ್ರೇಷ್ಠ ಲಯಕ್ಕೆ ಮರಳಿರುವುದು ಭಾರತ ತಂಡಕ್ಕೆ ಆನೆ ಬಲ ತಂದುಕೊಟ್ಟಿದೆ.
ಭಾರತ: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್ (ವಿರಾಟ್ ಕೊಹ್ಲಿ 122*, ಕೆ.ಎಲ್ ರಾಹುಲ್ 62; ಫರೀದ್ ಅಹ್ಮದ್ 57ಕ್ಕೆ 2).
ಅಫಘಾನಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111 ರನ್ (ಇಬ್ರಾಹಿಂ ಝರ್ದಾನ್ 64*; ಭುವನೇಶ್ವರ್ ಕುಮಾರ್ 4ಕ್ಕೆ 5, ಅರ್ಷದೀಪ್ ಸಿಂಗ್ 7ಕ್ಕೆ 1, ಆರ್. ಅಶ್ವಿನ್ 27ಕ್ಕೆ 1).
ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್ ಕೊಹ್ಲಿ.
Asia Cup 2022 Virat Kohli Pulls Rohit Sharma's Leg During Interview.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm