Asia Cup 2022 No Other Indian Cricketer Would Have Survived Without Scoring A Hundred For A Long Time Says Gautam Gambhir.
">ಬ್ರೇಕಿಂಗ್ ನ್ಯೂಸ್
10-09-22 12:52 pm Source: Vijayakarnataka ಕ್ರೀಡೆ
ದುಬೈ: 2019ರ ನವೆಂಬರ್‌ನಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಡೇ-ನೈಟ್ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ನಂತರ ಬರೋಬ್ಬರಿ 1020 ದಿನಗಳ ಬಳಿಕ ಮೂರಂಕಿಯ ಸ್ಕೋರ್ ಮಾಡಿದ್ದಾರೆ. ಕಳಪೆ ಲಯದ ಕಾರಣ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ, ಏಷ್ಯಾ ಕಪ್ 2022 ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಭರ್ಜರಿ ಕಮ್‌ಬ್ಯಾಕ್ ಮಾಡಿದರು. ತಂಡದ ಪರ 5 ಇನಿಂಗ್ಸ್‌ಗಳಲ್ಲಿ 276 ರನ್ ಸಿಡಿಸಿ ಶ್ರೇಷ್ಠ ಬ್ಯಾಟರ್ ಎನಿಸಿದರು. ಪ್ರಮುಖವಾಗಿ ಅಫಘಾನಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿ ತಮ್ಮ ಶತಕಗಳ ಬರ ನೀಗಿಸಿಕೊಂಡರು.
ಈ ಬಗ್ಗೆ ಮಾತನಾಡಿದ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹೊರತಾಗಿ ಬೇರೆ ಯಾವ ಬ್ಯಾಟ್ಸ್‌ಮನ್‌ನಿಂದಲೂ ಕೂಡ ಶತಕ ಬಾರಿಸದೆ ಇಷ್ಟು ದಿನಗಳ ಕಾಲ ಭಾರತ ತಂಡದಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಅಮೋಘ ಪ್ರದರ್ಶನಗಳ ಮೂಲಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ನ ವಿಶ್ವಾಸ ಸಂಪಾದಿಸಿದ್ದು, ಅದರಿಂದಲೇ ಇಷ್ಟು ಸಾಲು ಸಾಲು ಅವಕಾಶ ಪಡೆದಿದ್ದಾರೆ ಎಂದಿದ್ದಾರೆ.
"ಶತಕ ಬಾರಿಸದೆ ಮೂರು ವರ್ಷಗಳು ಕಳೆದಿದೆ (1019 ದಿನಗಳು) ಎಂಬುದು ವಿರಾಟ್ ಕೊಹ್ಲಿಗೂ ಚೆನ್ನಾಗಿ ತಿಳಿದಿದೆ. ಮೂರು ತಿಂಗಳಲ್ಲ, ಮೂರು ವರ್ಷ ಬಹಳಾ ದೊಡ್ಡ ಸಮಯವಾಗಿದೆ. ಇಲ್ಲಿ ನಾನು ವಿರಾಟ್ ಕೊಹ್ಲಿ ಅವರನ್ನು ಟೀಕೆ ಮಾಡುತ್ತಿಲ್ಲ. ಆದರೆ, ಅವರು ಈ ಹಿಂದೆ ಹರಿಸಿರುವ ರನ್ ಹೊಳೆಯ ಕಾರಣ, ಟೀಮ್ ಮ್ಯಾನೇಜ್ಮೆಂಟ್‌ನಿಂದ ಅಷ್ಟು ಬೆಂಬಲ ಸಿಕ್ಕಿದೆ," ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.
"ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೇರೆ ಯಾವ ಆಟಗಾರ ಕೂಡ ಶತಕ ಬಾರಿಸದೆ ಇಷ್ಟು ದಿನಗಳ ಕಾಲ ಭಾರತ ತಂಡದಲ್ಲಿ ಉಳಿಯಲು ಖಂಡಿತಾ ಸಾಧ್ಯವಿಲ್ಲ. ಇದು ಒಂದಲ್ಲಾ ಒಂದು ದಿನ ಆಗಲೇ ಬೇಕಿತ್ತು. ವಿರಾಟ್ ಖುದ್ದಾಗಿ ಈ ವಿಶೇಷ ಅವಕಾಶಗಳನ್ನು ಅವರ ಪ್ರದರ್ಶನಗಳ ಮೂಲಕ ಸಂಪಾದಿಸಿದ್ದಾರೆ," ಎಂದಿದ್ದಾರೆ.
ಕೇವಲ 53 ಎಸೆತಗಳಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ, ಕೊನೆಗೆ 61 ಎಸೆತಗಳಲ್ಲಿ 12 ಫೋರ್ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 122 ರನ್ ಬಾರಿಸಿದರು. ಕೊಹ್ಲಿ, ಅಬ್ಬರದೊಂದಿಗೆ ಭಾರತ ತಂಡ ತನ್ನ 20 ಓವರ್‌ಗಳಲ್ಲಿ 212/2 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಅಫಘಾನಿಸ್ತಾನ ತಂಡ 111/8 ರನ್ ಗಳಿಸಿ 101 ರನ್‌ಗಳಿಂದ ಸೋಲಿಗೆ ಶರಣಾಯಿತು. ಆದರೆ, ಸೂಪರ್-4 ಹಂತದಲ್ಲಿ ಭಾರತ ಮತ್ತು ಅಫಘಾನಿಸ್ತಾನ ಎರಡೂ ತಂಡಗಳು ಎರಡು ಸೋಲುಂಡ ಕಾರಣ ಫೈನಲ್ ರೇಸ್‌ನಿಂದ ಹೊರಬಿದ್ದಿವೆ. ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಫೈನಲ್‌ಗೆ ತಲುಪಿವೆ.
ಭಾರತ-ಅಫಘಾನಿಸ್ತಾನ ಪಂದ್ಯದ ಸ್ಕೋರ್ ಕಾರ್ಡ್
ಭಾರತ: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್ (ವಿರಾಟ್ ಕೊಹ್ಲಿ 122*, ಕೆ.ಎಲ್ ರಾಹುಲ್ 62; ಫರೀದ್ ಅಹ್ಮದ್ 57ಕ್ಕೆ 2).
ಅಫಘಾನಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111 ರನ್ (ಇಬ್ರಾಹಿಂ ಝರ್ದಾನ್ 64*; ಭುವನೇಶ್ವರ್ ಕುಮಾರ್ 4ಕ್ಕೆ 5, ಅರ್ಷದೀಪ್ ಸಿಂಗ್ 7ಕ್ಕೆ 1, ಆರ್. ಅಶ್ವಿನ್ 27ಕ್ಕೆ 1).
ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್ ಕೊಹ್ಲಿ
Asia Cup 2022 No Other Indian Cricketer Would Have Survived Without Scoring A Hundred For A Long Time Says Gautam Gambhir.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm