Asia Cup 2022; ಫೈನಲ್‌ ಸೋಲಿನ ಸಂಪೂರ್ಣ ಹೊಣೆ ಹೊತ್ತ ಪಾಕ್ ಆಲ್‌ರೌಂಡರ್‌ ಶದಾಬ್‌ ಖಾನ್‌!

12-09-22 02:38 pm       Source: Vijayakarnataka   ಕ್ರೀಡೆ

ಅದ್ಭುತ ಆಟವಾಡಿದ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್‌ ಫೈನಲ್‌ನಲ್ಲಿ 23 ರನ್‌ಗಳ ಜಯ ದಾಖಲಿಸುವ ಮೂಲಕ ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಪಡೆಯಿತು.

ಏಷ್ಯಾ ಕಪ್‌ ಟೂರ್ನಿಯಲ್ಲಿ ದಶಕದ ಬಳಿಕ ಟ್ರೋಫಿ ಗೆಲುವಿನ ಕನಸು ಕಂಡಿದ್ದ ಪಾಕಿಸ್ತಾನ ತಂಡಕ್ಕೆ ಭಾರಿ ನಿರಾಶೆ ಎದುರಾಗಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನ ಸೆಳೆದರೂ ಕೂಡ ಕಳಪೆ ಫೀಲ್ಡಿಂಗ್‌ ಕಾರಣ 2012ರ ಚಾಂಪಿಯನ್ಸ್‌ ಪಾಕಿಸ್ತಾನ ತಂಡ, ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಸೆ. 11) ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಎದುರು 23 ರನ್‌ಗಳಿಂದ ಸೋಲುಂಡಿತು.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಬಂದ ಶ್ರೀಲಂಕಾ ತಂಡ ಆರಂಭಿಕ ಆಘಾತ ಕಂಡು 10 ಓವರ್‌ಗಳಲ್ಲಿ 58 ರನ್‌ ಗಳಿಸಲು ಅಗ್ರ ಕ್ರಮಾಂಕದ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಪಾಕಿಸ್ತಾನ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಆದರೆ, ಭಾನುಕ ರಾಜಪಕ್ಸ ಮತ್ತು ವಾನಿಂದು ಹಸರಂಗ ಅದ್ಭುತ ಜೊತೆಯಾಟ ಕಟ್ಟಿ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದರು.

I Take Responsibility For This Defeat", Shadab Khan Apologizes For  Defeating Pakistan Team In Final, Cried On Twitter | CrickTale

ಅಜೇಯ 71 ರನ್‌ ಸಿಡಿಸಿ ಶ್ರೀಲಂಕಾ ತಂಡಕ್ಕೆ 170/6 ರನ್‌ಗಳ ಬೃಹತ್‌ ಮೊತ್ತ ತಂದುಕೊಟ್ಟ ಭಾನುಕ ರಾಜಪಕ್ಸ ಕೊಟ್ಟ ಎರಡು ಕ್ಯಾಚ್‌ಗಳನ್ನು ತೆಗೆದುಕೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಯಿತು. ಎರಡೂ ಸಂದರ್ಭದಲ್ಲಿ ಪಾಕ್‌ ತಂಡದ ಆಲ್‌ರೌಂಡರ್‌ ಶದಾಬ್‌ ಖಾನ್‌ ಕ್ಯಾಚ್‌ ಕೈಚೆಲ್ಲಿದರು. ಬಳಿಕದ ಬಳಿಕ ಟ್ವೀಟ್‌ ಮಾಡಿದ ಶದಾಬ್‌, ಫೈನಲ್‌ ಸೋಲಿನ ಸಂಪೂರ್ಣ ಜವಾಬ್ದಾರಿ ತಾವೆ ಹೊರುವುದಾಗಿ ಹೇಳಿಕೊಂಡಿದ್ದಾರೆ. ಕ್ಯಾಚ್‌ಗಳನ್ನು ತೆಗೆದುಕೊಂಡರಷ್ಟೇ ಪಂದ್ಯ ಗೆಲ್ಲಲು ಸಾಧ್ಯ ಎಂದು ತಮ್ಮ ಟ್ವಿಟರ್ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.

46 ರನ್‌ ಗಳಿಸಿದ್ದ ರಾಜಪಕ್ಸ, 18ನೇ ಓವರ್‌ನಲ್ಲಿ ಹ್ಯಾರಿಸ್‌ ರೌಫ್‌ ಬೌಲಿಂಗ್‌ ಎದುರು ಚೆಂಡನ್ನು ಗಾಳಿಗೆ ಹಾರಿಸಿದ್ದರು. ಇದನ್ನು ಆಸ್ಟ್ರೇಲಿಯನ್ ಫೀಲ್ಡರ್‌ಗಳ ಶೈಲಿಯಲ್ಲಿ ರಿವರ್ಸ್‌ ಕಪ್‌ ಮೂಲಕ ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಿ ವಿಫಲರಾದರು. ನಂತರದ ಓವರ್‌ನಲ್ಲೂ ಬೌಂಡರಿ ಗೆರೆ ಬಳಿ ಶದಾಬ್ ಖಾನ್ ಮತ್ತು ಆಸಿಫ್‌ ಅಲಿ ಪರಸ್ಪರ ದುದ್ದಿಕೊಳ್ಳುವ ಮೂಲಕ ಚೆಂಡನ್ನು ಕೈಚೆಲ್ಲಿ ರಾಜಪಕ್ಸಗೆ ಮತ್ತೊಂದು ಜೀವದಾನ ನೀಡಿದರು.

ಸಿಕ್ಕ ಜೀವದಾನಗಳ ಲಾಭ ತೆಗೆದುಕೊಂಡ ರಾಜಪಕ್ಸ, 45 ಎಸೆತಗಳಲ್ಲಿ ಅಜೇಯ 71 ರನ್‌ ಚೆಚ್ಚಿದರು. ಪರಿಣಾಮ 170/6 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದ ಶ್ರೀಲಂಕಾ, ನಂತರ ಎದುರಾಳಿಯನ್ನು 147 ರನ್‌ಗಳಿಗೆ ಆಲ್‌ಔಟ್‌ ಮಾಡಿ 23 ರನ್‌ಗಳ ಜಯ ದಾಖಲಿಸಿತು.

I take full responsibility of Asia Cup loss. I let my team down': Pakistan  star | Cricket - Hindustan Times

"ಕ್ಯಾಚ್‌ಗಳನ್ನು ತೆಗೆದುಕೊಂಡರಷ್ಟೇ ಮ್ಯಾಚ್‌ ಗೆಲ್ಲಲು ಸಾಧ್ಯ. ಈ ಸೋಲಿನ ಸಂಪೂರ್ಣ ಹೊಣೆ ನನ್ನದು. ನನ್ನ ತಂಡಕ್ಕೆ ನಾನು ನೆರವಾಗಲಿಲ್ಲ. ಆದರೂ ಟೂರ್ನಿಯಲ್ಲಿ ನಸೀಮ್ ಶಾ, ಹ್ಯಾರಿಸ್‌ ರೌಫ್, ಮೊಹಮ್ಮದ್‌ ನವಾಝ್ ಅದ್ಭುತ ಆಟವಾಡಿದ್ದಾರೆ. ತಂಡದ ಬೌಲಿಂಗ್ ಪ್ರದರ್ಶನ ಅತ್ಯುತ್ತಮವಾಗಿ ಮೂಡಿಬಂದಿದೆ. ಮೊಹಮ್ಮದ್‌ ರಿಝ್ವಾನ್‌ ಅದ್ಭುತ ಹೋರಾಟ ನಡೆಸಿದರು. ತಂಡ ಸಂಪೂರ್ಣ ಹೋರಾಟ ನಡೆಸಿದೆ. ಗೆದ್ದ ಶ್ರೀಲಂಕಾ ತಂಡಕ್ಕೆ ಅಭಿನಂದನೆಗಳು," ಎಂದು ಶದಾಬ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

I Let My Team Down, I Take Responsibility Of Asia Cup Final Loss Against Sri  Lanka: Shadab Khan

ಶ್ರೀಲಂಕಾ-ಪಾಕಿಸ್ತಾನ ನಡುವಣ ಫೈನಲ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್‌ (ಧನಂಜಯ ಡಿ'ಸಿಲ್ವಾ 28, ಭಾನುಕ ರಾಜಪಕ್ಸ 71*, ವಾನಿಂದು ಹಸರಂಗ 36, ಚಮಿಕ ಕರುಣಾರತ್ನೆ 14*; ಹ್ಯಾರಿಸ್‌ ರೌಫ್ 29ಕ್ಕೆ 3, ಇಫ್ತಿಖಾರ್ ಅಹ್ಮದ್‌ 21ಕ್ಕೆ 1).

ಪಾಕಿಸ್ತಾನ: 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲ್‌ಔಟ್‌ (ಮೊಹಮ್ಮದ್‌ ರಿಝ್ವಾನ್‌ 55, ಇಫ್ತಿಖಾರ್‌ ಅಹ್ಮದ್‌ 32, ಹ್ಯಾರಿಸ್‌ 13; ಪ್ರಮೋದ್ ಮಧುಶನ್ 34ಕ್ಕೆ 4, ವಾನಿಂದು ಹಸರಂಗ 27ಕ್ಕೆ 3, ಚಮಿಕ ಕರುಣಾರತ್ನೆ 33ಕ್ಕೆ 2, ಮಹೀಶ್‌ ತೀಕ್ಷಣ 25ಕ್ಕೆ 1).

Storm Warning: Take cover for the 💥💥 slog overs in #SLvPAK!

Do not miss a minute of the action from the DP World #AsiaCup2022 Final, LIVE NOW on Star Sports/Star Gold/Disney+Hotstar! pic.twitter.com/siqcJFCjYc

— Star Sports (@StarSportsIndia) September 11, 2022

Sl Vs Pak Asia Cup 2022 Final: Sorry, I Take Responsibility For This Loss Says Shadab Khan.