ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯದ ಟಾಪ್ 4 ಅರ್ಹ ಆಟಗಾರರು ಇವರು!

13-09-22 03:39 pm       Source: Vijayakarnataka   ಕ್ರೀಡೆ

ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾ ಸಾರಥ್ಯದ 15 ಆಟಗಾರರ ಬಲಿಷ್ಠ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ (ಸೆ.12) ಪ್ರಕಟ ಮಾಡಿದೆ.

ಬೆಂಗಳೂರು: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾ ಸಾರಥ್ಯದ 15 ಆಟಗಾರರ ಬಲಿಷ್ಠ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ (ಸೆ.12) ಪ್ರಕಟ ಮಾಡಿದೆ. ಜೊತೆಗೆ ನಾಲ್ವರು ಹೆಚ್ಚುವರಿ ಆಟಗಾರರನ್ನೂ ಆಯ್ಕೆ ಮಾಡಿದೆ. ತಂಡದ ವೇಗದ ಬೌಲಿಂಗ್‌ ವಿಭಾಗಕ್ಕೆ ಜಸ್‌ಪ್ರೀತ್‌ ಬುಮ್ರಾ ಮತ್ತು ಹರ್ಷಲ್‌ ಪಟೇಲ್‌ ಆಗಮನ ಬಲ ಹೆಚ್ಚಿಸಿದೆ ಆದರೂ, ಕೆಲ ಆಟಗಾರರು ಸ್ಥಾನ ಪಡೆಯಲು ವಿಫಲರಾಗಿರುವುದು ಹಲವರ ಅಸಮಾಧಾನಕ್ಕೂ ಕಾರಣವಾಗಿದೆ.

ಅಂದಹಾಗೆ ಭಾರತ ತಂಡ ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎದುರು ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯನ್ನಾಡಲಿದೆ. ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ, ಮಂಡಿ ನೋವಿನ ಗಾಯದ ಸಮಸ್ಯೆ ಕಾರಣ ಈ ಎಲ್ಲಾ ಸರಣಿಗಳು ಮತ್ತು ವಿಶ್ವಕಪ್‌ನಿಂದಲೂ ಹೊರಬಿದ್ದಿದ್ದಾರೆ. ಜಡೇಜಾ ಹೊರತಾಗಿ ಸಂಪೂರ್ಣ ಫಿಟ್ನೆಸ್‌ ಹಾಗೂ ಫಾರ್ಮ್ ಹೊಂದಿದ್ದರೂ ಕೂಡ ಅವಕಾಶ ಪಡೆಯದ ನಾಲ್ಕು ಆಟಗಾರರ ವಿವರ ಇಲ್ಲಿ ನೀಡಲಾಗಿದೆ.

ಅಕ್ಟೋಬರ್‌ 16ರಿಂದ ನವೆಂಬರ್‌ 13ರವರೆಗೆ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಅಕ್ಟೋಬರ್‌ 23ರಂದು ತನ್ನ ಮೊದಲ ಪಂದ್ಯವನ್ನಾಡಲಿದೆ.

​1. ಮೊಹಮ್ಮದ್‌ ಶಮಿ

Mohammed Shami sitting at home baffles me: Ravi Shastri questions pacer's  absence from India Asia Cup squad - Sports News

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈಗ ಅನುಭವಿ ಬಲಗೈ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಪ್ರಮುಖವಾಗಿ ಟಿ20 ಕ್ರಿಕೆಟ್‌ನಲ್ಲಿ. 32 ವರ್ಷದ ಬಲಗೈ ವೇಗಿ ಐಪಿಎಲ್ 2022 ಟೂರ್ನಿಯಲ್ಲಿ 20 ವಿಕೆಟ್‌ ಪಡೆದು ಅಬ್ಬರಿಸಿದ್ದರು. ಅವರ ಭರ್ಜರಿ ಪ್ರದರ್ಶನ ಗುಜರಾತ್‌ ಟೈಟನ್ಸ್‌ ತಂಡ ಟ್ರೋಫಿ ಗೆಲ್ಲುವಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಆದರೂ ಶಮಿಗೆ ಭಾರತ ಟಿ20 ತಂಡದಲ್ಲಿ ಅವಕಾಶ ಲಭ್ಯವಾಗುತ್ತಿಲ್ಲ. ಅಂದಹಾಗೆ ಏಷ್ಯಾ ಕಪ್‌ನಲ್ಲೂ ಶಮಿ ಆಡಲಿಲ್ಲ. ಆದರೆ, ಭಾರತ ತಂಡಕ್ಕೆ ಏಷ್ಯಾ ಕಪ್‌ನಲ್ಲಿ ಅನುಭವಿ ವೇಗಿಯ ಅನುಪಸ್ಥಿತಿ ಕಾಡಿದ್ದಂತೂ ನಿಜ.

ಶಮಿ ಜಾಗದಲ್ಲಿ ಆಡಿದ್ದ ಯುವ ವೇಗಿ ಅವೇಶ್ ಖಾನ್‌ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲೇ ಇಲ್ಲ. ಅಂದಹಾಗೆ ಕಳೆದ ವರ್ಷ ಟಿ20 ವಿಶ್ವಕಪ್‌ ಬಳಿಕ ಶಮಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈಗ ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಏಷ್ಯಾ ಕಪ್‌ನಲ್ಲಿ ಯುವ ವೇಗಿಗಳ ವೈಫಲ್ಯ ಕಾರಣ ಎಚ್ಚೆತ್ತುಕೊಂಡ ಟೀಮ್ ಇಂಡಿಯಾ ಸೆಲೆಕ್ಟರ್ಸ್, ವಿಶ್ವಕಪ್‌ಗೆ ಆಯ್ಕೆ ಮಾಡಲಾದ ತಂಡಕ್ಕೆ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಶಮಿ ಅವರ ಹೆಸರನ್ನೂ ಸೇರಿಸಿದೆ.

​2. ದೀಪಕ್ ಚಹರ್‌

Deepak Chahar replaces Avesh Khan in India's Asia Cup 2022 squad | Cricket  - Hindustan Times

ಗಾಯದ ಸಮಸ್ಯೆ ಕಾರಣ ದೀರ್ಘಕಾಲ ಭಾರತ ತಂಡದಿಂದ ಹೊರಗಿದ್ದ ಯುವ ಸ್ವಿಂಗ್‌ ಬೌಲರ್‌ ದೀಪಕ್‌ ಚಹರ್‌, ಕಳೆದ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿ ಭರ್ಜರಿ ಪ್ರದರ್ಶನವನ್ನೇ ನೀಡಿದ್ದಾರೆ. ಏಷ್ಯಾ ಕಪ್‌ ಟೂರ್ನಿಯಲ್ಲೂ ಸಿಕ್ಕ ಅವಕಾಶದಲ್ಲಿ ಪರಿಣಾಮಕಾರಿ ಆಟವಾಡಿದ್ದರು. 30 ವರ್ಷದ ನ್ಯೂ-ಬಾಲ್‌ ಸ್ಪೆಷಲಿಸ್ಟ್‌ ಬೌಲರ್‌ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದೇ ಇದ್ದರೂ ಕೂಡ, ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರರ್ಥ ವಿಶ್ವಕಪ್‌ ತಂಡದಲ್ಲಿನ ವೇಗದ ಬೌಲರ್‌ಗಳಲ್ಲಿ ಯಾರಿಗಾದರೂ ಗಾಯವಾದರೆ ದೀಪಕ್ ತಂಡ ಸೇರಿಕೊಳ್ಳಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್‌ಗಳಲ್ಲಿ ದೀಪಕ್‌ ಕೂಡ ಒಬ್ಬರಾಗಿದ್ದಾರೆ.

​3. ರವಿ ಬಿಷ್ಣೋಯ್‌

For India and Ravi Bishnoi, wrong'un looks right | Cricket - Hindustan Times

ಏಷ್ಯಾ ಕಪ್‌ ಟೂರ್ನಿಯಲ್ಲಿ ಸಿಕ್ಕ ಅವಕಾಶಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ ಕೂಡ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ತಂಡ ಅನುಭವಿ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ಗೆ ಮಣೆ ಹಾಕಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಎದುರಾಳಿ ಬ್ಯಾಟರ್‌ಗಳ ನಿದ್ರೆ ಕೆಡಿಸುವ ಸಾಮರ್ಥ್ಯ ರವಿ ಬಿಷ್ಣೋಯ್‌ ಅವರಲ್ಲಿದ್ದು, ಭಾರತ ತಂಡದ ಭವಿಷ್ಯದ ತಾರೆ ಎನಿಸಿದ್ದಾರೆ. 22 ವರ್ಷದ ಸ್ಪಿನ್ನರ್‌ ಈವರೆಗೆ ಆಡಿದ 10 ಪಂದ್ಯಗಳಿಂದ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಉತ್ತಮ ಬೌಲರ್‌ ಜೊತೆಗೆ, ಮಿಂಚಿನ ಫೀಲ್ಡಿಂಗ್‌ ಮತ್ತು ಕೆಳ ಕ್ರಮಾಂಕದಲ್ಲಿ ಚುರುಕಿನ ಬ್ಯಾಟಿಂಗ್‌ ಮೂಲಕವೂ ರವಿ ಗಮನ ಸೆಳೆದಿದ್ದಾರೆ. ಆದರೂ, ಅನುಭವಿ ಚಹಲ್‌ ಸಲುವಾಗಿ ರವಿ ತಮ್ಮ ಸ್ಥಾನ ಬಿಟ್ಟುಕೊಡುವಂತ್ತಾಗಿದೆ.

​4. ಸಂಜು ಸ್ಯಾಮ್ಸನ್‌

4-

ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್, ಸಿಕ್ಕ ಅವಕಾಶಗಳಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಗಮನ ಸೆಳೆದಿದ್ದಾರೆ. ಆದರೆ, ತಂಡದಲ್ಲಿ ಇರುವ ಪೈಪೋಟಿ ಕಾರಣ ಅವರಿಗೆ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ರಿಷಭ್ ಪಂತ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರನ್ನು ತಂಡಕ್ಕೆ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮಗಳಾಗಿ ತೆಗೆದುಕೊಳ್ಳಲಾಗಿದೆ. ದುರದೃಷ್ಟವಶಾತ್ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲೂ ಸಂಜೂಗೆ ಅವಕಾಶ ಸಿಕ್ಕಿಲ್ಲ.

ರಿಸರ್ವ್‌ ಆಟಗಾರರ ಪಟ್ಟಿಯಲ್ಲಿ ಶ್ರೇಯಸ್‌ ಅಯ್ಯರ್‌ ಇದ್ದಾರೆ. ಶಾರ್ಟ್‌ ಪಿಚ್‌ ಎಸೆತಗಳ ಎದುರು ಕಷ್ಟ ಪಡುತ್ತಿರುವ ಶ್ರೇಯಸ್‌, ಆಸೀಸ್‌ನ ಬೌನ್ಸಿ ಪಿಚ್‌ಗಳಲ್ಲಿ ತಡಕಾಟ ನಡೆಸುವ ಸಾಧ್ಯತೆ ಬಗ್ಗೆ ಟೀಮ್ ಇಂಡಿಯಾ ಸೆಲೆಕ್ಟರ್ಸ್‌ಗೆ ಚೆನ್ನಾಗಿ ತಿಳಿದಿದೆ. ಇನ್ನು ಸಂಜು ಅತ್ಯುತ್ತಮ ಪುಲ್‌ ಹೊಡೆಯಬಲ್ಲ ಆಟಗಾರರಲ್ಲಿ ಒಬ್ಬರು. ಹೀಗಿರುವಾಗ ಶ್ರೇಯಸ್‌ ಜಾಗದಲ್ಲಿ ಸಂಜು ಅವರಿಗೆ ಕಾಯ್ದಿರಿಸಲಾದ ಆಟಗಾರರ ಪಟ್ಟಿಗೆ ಸೇರಿಸಬಹುದಿತ್ತು, ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರವಾಗಿದೆ.

​ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್‌ ಪಂತ್ (ವಿಕೆಟ್‌ಕೀಪರ್‌), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.ಕಾಯ್ದಿರಿಸಿದ ಆಟಗಾರರು: ಮೊಹಮ್ಮದ್‌ ಶಮಿ, ಶ್ರೇಯಸ್‌ ಅಯ್ಯರ್‌, ದೀಪಕ್ ಚಹರ್‌, ರವಿ ಬಿಷ್ಣೋಯ್‌

ICC T20 World Cup Top 4 Players Who Deserved To Be In Team Indias Squad.